ಪ್ರತಿ ಸಿನಿಮಾವೂ ಕಲಿಕೆಯೇ. ನನ್ನ ಕನಸಿಕ ಪೌರಾಣಿಕ ಕಥೆಯೊಂದಿದೆ. ಇದಕ್ಕೆ ಸಾಕಷ್ಟು ಪೂರ್ವಸಿದ್ಧತೆ ಬೇಕಾಗಿದೆ. ‘ಫಾದರ್’ ಸಿನಿಮಾದ ಕಥೆ ಎಲ್ಲರಿಗೂ ಬಹಳ ಕನೆಕ್ಟ್ ಆಗಲಿದೆ. ಇದೊಂದು ಕಾಂಟೆಂಟ್ ಚಿತ್ರ. ಸಿನಿಮಾ ಬಿಡುಗಡೆಗೆ ಸಮಯ ಸಂದರ್ಭ ಮುಖ್ಯ. 2026ರ ಮೊದಲಾರ್ಧದಲ್ಲಿ ಬರುವ ಯೋಜನೆ ಹಾಕಿಕೊಂಡಿದ್ದೇವೆ.
ಆರ್.ಚಂದ್ರು ನಿರ್ಮಾಪಕ
ಈ ಸಿನಿಮಾ ನೋಡುವಾಗ ನಿಮಗೆ ನಿಮ್ಮ ಅಪ್ಪ ನೆನಪಾಗಲಿದ್ದಾರೆ. ನಿಮ್ಮ ಮಕ್ಕಳು ನೋಡುವಾಗ ನಿಮ್ಮ ನೆನಪು ಅವರಿಗಾಗಲಿದೆ. ನನಗೆ 15 ವರ್ಷವಿರುವಾಗ ಅಪ್ಪ ತೀರಿಕೊಂಡರು. ಅಪ್ಪ ಇದ್ದಿದ್ದರೆ ಏನಾಗುತ್ತಿತ್ತು ಎನ್ನುವುದೇ ಕಥೆ. ಇದೊಂದು ನೈಜ ಕಥೆ.