ಬೈತಲೆಯ ತುಂಬ ಸಿಂಧೂರ, ಮೊಗದ ತುಂಬ ನಗು. ಅಭಿಮಾನಿಗಳತ್ತ ಕೈ ತೋರಿಸಿದರೆ, ಅಂಗೈ ಮದರಂಗಿಯಲ್ಲಿ ಪತಿಯಾದ ಪ್ರಿಯಕರನ ಹೆಸರು. ದೀಪಿಕಾ ಪಡಕೋಣೆ ಸಿಂಧಿ ಸಂಸ್ಕೃತಿ ಪ್ರಕಾರ ಮದುವೆಯ ಸಂಪ್ರದಾಯದಂತೆ ಮದರಂಗಿಯ ವಿನ್ಯಾಸದಲ್ಲಿ ತಮ್ಮ ಸಂಗಾತಿಯ ಹೆಸರನ್ನು ಬರೆದುಕೊಂಡಿದ್ದಾರೆ.

ರಣಬೀರ್ ಸಿಂಗ್ ಸಹ ತಾವೇನೂ ಕಡಿಮೆಯಿಲ್ಲವೆಂಬಂತೆ ಅಂಗೈನಲ್ಲಿ ದೀಪದ ಚಿತ್ರ ಬಿಡಿಸಿಕೊಂಡಿದ್ದಾರೆ. ಮದುವೆಯ ಕೆಲ ಚಿತ್ರಗಳನ್ನು ತಾವೇ ಪೋಸ್ಟ್ ಮಾಡಿದ ಈ ಜೋಡಿ, ಮುಂಬೈಗೆ ಬಂದಿಳಿದ ತಕ್ಷಣ ಫೋಟೊಕ್ಕೆ ಪೋಸ್ ನೀಡಲಾರಂಭಿಸಿದರು. ಏರ್‌ಪೋರ್ಟ್‌ನಿಂದಲೇ ಈ ಜೋಡಿಯ ಅಭಿಮಾನಿಗಳು ಅಭಿನಂದನೆಯ ಸುರಿಮಳೆಗೈದರು.

ರಣಬೀರ್ ಮನೆ ಪ್ರವೇಶಿಸಿದ ದೀಪಿಕಾ, ಚಿತ್ರ ತೆಗೆಯಲೆಂದೇ ಹೊರ ಬಂದರು. ಎಣಿಸಿಟ್ಟ ಕ್ಷಣಗಳಂತೆ 60 ಸೆಕೆಂಡ್ ಆಚೆ ನಗುಬೀರುತ್ತ ನಿಂತರು. ಫೋಟೊಗ್ರಾಫರ್‌ಗಳಿಗೆ ಖುಷಿಯಾಗುವಂತೆ ದೀಪಿಕಾಳನ್ನು ರಣಬೀರ್ ಬರಸೆಳೆದು ನಿಂತರೆ, ಅದಕ್ಕೆ ಅನುವಾಗುವಂತೆ ದೀಪಿಕಾ ಸಹ ಸಹಕರಿಸಿದರು.

ಇಟಲಿಯ ಕೋಮ ಸರೋವರದಲ್ಲಿ ಮದುವೆಯಾದ ಜೋಡಿ ಸೋಮವಾರ ಬೆಳಗ್ಗೆ ಮುಂಬೈಗೆ ಬಂದಿಳಿಯಿತು. ಅಪ್ಪಟ ರೇಷ್ಮೆಯ ಕೆನೆಬಣ್ಣದ ವಸ್ತ್ರಧರಿಸಿದ್ದ ಇಬ್ಬರೂ ಮ್ಯಾಚಿಂಗ್ ಮಾಡಿಕೊಂಡಂತೆ ಕಾಣುತ್ತಿದ್ದರು. ರಣಬೀರ್ ಆನೆಯ ಪ್ರಿಂಟ್ ಇರುವ ಕೆಂಬಣ್ಣದ ಜಾಕೆಟ್ ಧರಿಸಿದ್ದರೆ, ಕೆಂಬಣ್ಣದ ದುಪ್ಪಟ್ಟಾ ಹೊದ್ದು ದೀಪಿಕಾ ನಗೆಮಿಂಚು ಸೂಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.