ಗುರುವಾರ , ಅಕ್ಟೋಬರ್ 29, 2020
28 °C
ನಟಿಯರಾದ ಸಾರಾ ಅಲಿಖಾನ್‌, ಶ್ರದ್ಧಾ ಕಪೂರ್‌ಗೂ ಶೀಘ್ರ ನೋಟಿಸ್‌?

ನನಗೆ ಗಾಂಜಾ ಬೇಡ; ಮಾಲ್‌ ಇದ್ರೆ ಬೇಕಿತ್ತು ಎಂದಿದ್ದ ನಟಿ ದೀಪಿಕಾ ಪಡುಕೋಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deepika

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆ ಪ್ರಕರಣದ ಸುತ್ತ ಡ್ರಗ್ಸ್‌ ಜಾಲದ ನಂಟಿರುವ ಕುರಿತು ಮಾದಕ ವಸ್ತು ನಿಯಂತ್ರಣ ಸಂಸ್ಥೆ(ಎನ್‌ಸಿಬಿ)ಯು ತನಿಖೆಯನ್ನು ಚುರುಕುಗೊಳಿಸಿದ್ದು, ಈಗ ನಟಿ ದೀಪಿಕಾ ಪಡುಕೋಣೆಯ ಕೊರಳಿಗೂ ಈ ಜಾಲದ ನಂಟು ಸುತ್ತಿಕೊಂಡಿದೆ.

2017ರಲ್ಲಿ ವಾಟ್ಸ್ಆ್ಯಪ್‌ನಲ್ಲಿ ನಡೆದಿರುವ ಸಂದೇಶ ವಿನಿಮಯ ಈಗ ಬಹಿರಂಗಗೊಂಡಿದೆ. ‘ಡಿ’ ಮತ್ತು ‘ಕೆ’ ಎಂಬ ಅಕ್ಷರದಲ್ಲಿ ಸಂದೇಶ ವಿನಿಮಯವಾಗಿದೆ. ‘ಡಿ’ ಎಂದರೆ ದೀಪಿಕಾ ಪಡುಕೋಣೆ ಮತ್ತು ‘ಕೆ’ ಎಂದರೆ ಕರೀಷ್ಮಾ ಪ್ರಕಾಶ್‌ ಎಂದು ಹೇಳಲಾಗಿದೆ.
‘ನನಗೆ ಗಾಂಜಾ ಬೇಡ; ಮಾಲ್‌ ಇದ್ದರೆ ಬೇಕಿತ್ತು’ ಎಂದು ದೀಪಿಕಾ ಅವರು, ಕರೀಷ್ಮಾಗೆ ಸಂದೇಶ ಕಳುಹಿಸಿದ್ದಾರೆ.

ಇಬ್ಬರ ನಡುವೆ ಈ ಸಂದೇಶ ಬಹಿರಂಗಗೊಂಡ ಬೆನ್ನಲ್ಲೇ ವಿಚಾರಣೆಗೆ ಹಾಜರಾಗುವಂತೆ ಕರೀಷ್ಮಾಗೆ ಎನ್‌ಸಿಬಿ ನೋಟಿಸ್‌ ಕೂಡ ಜಾರಿಗೊಳಿಸಿದೆ ಎಂಬ ಸುದ್ದಿಯಿದೆ. ದೀಪಿಕಾ ಮತ್ತು ಕರೀಷ್ಮಾ ನಡುವಿನ ವಾಟ್ಸ್‌ಆ್ಯಪ್ ಸಂದೇಶ ವಿನಿಮಯ ಇಂತಿದೆ.

D: K...Maal you have?

K: I have but at home. I am at Bandra...

K: I can ask Amit if you want

D: Yes!! Please

K: Amit has. He's carrying it

D: Hash na?

D: Not weed

K: What time are you coming to Koko

D: 11.30/12ish

D: Till what time is Shal there?

K: I think she said 11:30 because she needs to at the other place at 12

ಇಬ್ಬರ ನಡುವಿನ ಸಂಭಾಷಣೆ ವೇಳೆ ಪ್ರಸ್ತಾಪವಾಗಿರುವ ‘ಕೊಕೊ’ ಎಂಬುದು ಮುಂಬೈನ ಕಮಲಾ ಮಿಲ್‌ ಪ್ರದೇಶದಲ್ಲಿರುವ ರೆಸ್ಟೋರೆಂಟ್‌ನ ಹೆಸರಾಗಿದೆ. ಈಗಾಗಲೇ, ಎಸ್‌ಸಿಬಿ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಪ್ರೇಯಸಿ ರಿಯಾ ಚಕ್ರವರ್ತಿಯನ್ನು ಬಂಧಿಸಿದೆ. ಅಲ್ಲದೇ, ಆಕೆಯ ಸಹೋದರ ಶೋಯಿಕ್‌ ಕೂಡ ಬಂಧನದಲ್ಲಿದ್ದಾನೆ.

ರಿಯಾ ಚಕ್ರವರ್ತಿ ವಿಚಾರಣೆ ವೇಳೆ ಎನ್‌ಸಿಬಿ ಮುಂದೆ ಹಲವು ಬಾಲಿವುಡ್‌ ನಟ, ನಟಿಯರ ಹೆಸರನ್ನು ಬಹಿರಂಗಪಡಿಸಿದ್ದಾರೆ ಎಂಬ ಸುದ್ದಿಯಿದೆ. ಹಾಗಾಗಿ, ಮತ್ತಷ್ಟು ನಟ, ನಟಿಯರ ಹೆಸರು ಬಹಿರಂಗಗೊಂಡರೂ ಅಚ್ಚರಿಪಡಬೇಕಿಲ್ಲ.

ಇದನ್ನೂ ಓದಿ: 
ಡ್ರಗ್ಸ್ ಪ್ರಕರಣ: ದೀಪಿಕಾ, ಸಾರಾ, ಶ್ರದ್ಧಾ ಕಪೂರ್‌ಗೆ ಸಮನ್ಸ್‌ ನೀಡಿದ ಎನ್‌ಸಿಬಿ
ಡಗ್ಸ್ ಪ್ರಕರಣದಲ್ಲಿ ಕೇಳಿ ಬರುತ್ತಿದೆ ದೀಪಿಕಾ ಪಡುಕೋಣೆ ಹೆಸರು
ನಟಿಯರಾದ ರಕುಲ್‌, ಸಾರಾ ಅಲಿ ಖಾನ್‌ ಕೊರಳಿಗೆ ಸುತ್ತಿಕೊಂಡ ಡ್ರಗ್ಸ್‌ ನಂಟು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು