ಶನಿವಾರ, ನವೆಂಬರ್ 27, 2021
22 °C

'ಮೆಟಾವರ್ಸ್‌'ನತ್ತ ಪ್ರಯಾಣ ಬೆಳೆಸಿದ ದೀಪಿಕಾ ಪಡುಕೋಣೆ!

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ನವದೆಹಲಿ: ನಟಿ ದೀಪಿಕಾ ಪಡುಕೋಣೆ ಕೆಂಪು ಬಣ್ಣದ ಕಾರು ಹತ್ತಿ ದೀರ್ಘ ಪ್ರಯಾಣ ಆರಂಭಿಸಿದ್ದಾರೆ. ಖುಷಿಯಿಂದಲೇ ಕಾರು ಚಲಾಯಿಸಿಕೊಂಡು ಹೋಗುತ್ತಿರುವ ದೀಪಿಕಾ ಎಚ್ಚರಿಕೆಯ ಬೋರ್ಡ್‌ ನೋಡಿದ್ದೇ ಗಾಬರಿಗೊಳಗಾಗುತ್ತಾರೆ. ಲಗುಬಗೆಯಲ್ಲೇ ಕಾರಿನ ಗಾಜನ್ನು ಏರಿಸುತ್ತಾರೆ. ಆದರೆ ಅಷ್ಟರಲ್ಲಿ ಕಾಲ ಮಿಂಚಿದೆ, ದೀಪಿಕಾ 'ಮೆಟಾವರ್ಸ್‌' ಲೋಕದೊಳಗೆ ಪ್ರವೇಶಿಸಿ ಆಗಿದೆ. ನಂತರ ನೋಡಿದರೆ ದೀಪಿಕಾರ ಕಾರು ಬಾಹ್ಯಾಕಾಶ ನೌಕೆಯಂತೆ ಮಾರ್ಪಾಡುಗೊಂಡಿದೆ.

ಅರೇ, ಇದು ಯಾವ ಸಿನಿಮಾದ ದೃಶ್ಯ? ಎಂಬ ಕುತೂಹಲ ಕೆರಳಿಸುತ್ತದೆ. ದೀಪಿಕಾ ಪಡುಕೋಣೆ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಆ್ಯನಿಮೇಟೆಡ್‌ ದೃಶ್ಯವಿದು. ಅಭಿಮಾನಿಗಳನ್ನು ಕುತೂಹಲದ ಕಡಲಿಗೆ ತಳ್ಳಿ, ಕಾತರದಿಂದ ಕಾಯುವಂತೆ ಮಾಡುವುದು ದೀಪಿಕಾ ಸ್ಟೈಲ್‌. ಈ ಬಾರಿಯೂ ಇಂತಹ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಈಗಾಗಲೇ ವಿಡಿಯೊಗೆ 30 ಲಕ್ಷಕ್ಕೂ ಹೆಚ್ಚು ವೀವ್ಸ್‌ ಸಿಕ್ಕಿದೆ. ಸುಮಾರು 4 ಲಕ್ಷ ಮಂದಿ ಲೈಕ್ ಮಾಡಿದ್ದಾರೆ.

ಮೆಟಾವರ್ಸ್‌ ಎಂಬುದು ಮಿಥ್ಯಾವಾಸ್ತವ ಲೋಕ. ಕಂಪ್ಯೂಟರ್‌ ಮೂಲಕ ಸೃಷ್ಟಿಸಿದ ಬಾಹ್ಯಾಕಾಶ. ಹಾಗಾಗಿ ದೀಪಿಕಾ ಪಡುಕೋಣೆ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಸಿನಿಮಾ ನಿರ್ಮಿಸುತ್ತಿದ್ದಾರೆಯೇ ಎಂಬು ಕುತೂಹಲ ಮೂಡಿದೆ.

ದೀಪಿಕಾ ಪಡುಕೋಣೆ ನವೆಂಬರ್‌ 14ಕ್ಕೆ ರಣವೀರ್‌ ಸಿಂಗ್‌ ಜೊತೆ 3ನೇ ವರ್ಷದ ವಿವಾಹವಾರ್ಷಿಕೋತ್ಸವವನ್ನು ಉತ್ತರಾಖಂಡದಲ್ಲಿ ಆಚರಿಸಿಕೊಂಡರು. ರಣವೀರ್‌ ಸಿಂಗ್‌ ಅವರು ಕಪಿಲ್‌ ದೇವ್‌ ಪಾತ್ರದಲ್ಲಿ ಅಭಿನಯಿಸಿರುವ '83' ಸಿನಿಮಾ ಡಿಸೆಂಬರ್‌ 24ಕ್ಕೆ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೀಪಿಕಾ ಚಿತ್ರದ ಟೀಸರ್‌ ಅನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು