ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿಲ್ ಕಪೂರ್‌ ಹೆಸರು, ಚಿತ್ರ, ಡೈಲಾಗ್‌ ಬಳಸದಂತೆ ವೆಬ್‌ಸೈಟ್‌ಗಳಿಗೆ ನಿರ್ಬಂಧ

Published 20 ಸೆಪ್ಟೆಂಬರ್ 2023, 13:10 IST
Last Updated 20 ಸೆಪ್ಟೆಂಬರ್ 2023, 13:10 IST
ಅಕ್ಷರ ಗಾತ್ರ

ನವದೆಹಲಿ: ವಾಣಿಜ್ಯ ಉದ್ದೇಶಗಳಿಗಾಗಿ ಬಾಲಿವುಡ್ ನಟ ಅನಿಲ್‌ ಕಪೂರ್‌ ಅವರ ಹೆಸರು, ಧ್ವನಿ, ಸಂಭಾಷಣೆ, ಚಿತ್ರಗಳನ್ನು ದುರ್ಬಳಕೆ ಮಾಡಿಕೊಳ್ಳದಂತೆ ವಿವಿಧ ವೆಬ್‌ಸೈಟ್‌ಗಳಿಗೆ ದೆಹಲಿ ಹೈಕೋರ್ಟ್‌ ನಿರ್ಬಂಧ ವಿಧಿಸಿದೆ.

ತಮ್ಮ ಜನಪ್ರಿಯ ಡೈಲಾಗ್ ‘ಜಕಾಸ್‌’ ಸೇರಿದಂತೆ ತಮ್ಮ ಹೆಸರು, ಧ್ವನಿ, ಚಿತ್ರಗಳನ್ನು ಹಲವಾರು ವೆಬ್‌ಸೈಟ್‌ಗಳು ಕಾನೂನುಬಾಹಿರವಾಗಿ ದುರುಪಯೋಗಪಡಿಸಿಕೊಳ್ಳುತ್ತಿವೆ ಎಂದು ಆರೋಪಿಸಿ ನಟ ಅನಿಲ್‌ ಕಪೂರ್‌ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಅನಿಲ್‌ ಕಪೂರ್‌ ಪರ ವಾದ ಮಂಡನೆ ಮಾಡಿದ ವಕೀಲ ಪ್ರವೀಣ್‌ ಆನಂದ್‌, ’ ಮೊಟಿವೇಷನಲ್‌ ಸ್ಪೀಕರ್‌ ಹೆಸರಿನಲ್ಲಿ ಅನಿಲ್‌ ಕಪೂರ್‌ ಚಿತ್ರ ಬಳಸಿ ಹಣ ಪಡೆದುಕೊಳ್ಳುವುದು, ಅವಹೇಳನಕಾರಿಯಾಗಿ ಅವರ ಚಿತ್ರವನ್ನು ತಿರುಚುವುದು, ನಕಲಿ ಸಹಿ ಇರುವ ಅವರ ಪೋಟೊವನ್ನು ಮಾರಾಟ ಮಾಡುವುದು, ಅವರ ಜನಪ್ರಿಯ ಡೈಲಾಗ್‌ ‘ಜಕಾಸ್‌’ ಅನ್ನು ಬಳಸಿಕೊಳ್ಳುವುದು ಹೀಗೆ ಹಲವಾರು ರೀತಿಯಲ್ಲಿ ಕಪೂರ್‌ ಅವರ ತಾರಾ ವರ್ಚಸ್ಸು ಮತ್ತು ವೈಯಕ್ತಿಕ ಹಕ್ಕುಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ’ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ವಿಚಾರಣೆ ನಡೆಸಿದ ನ್ಯಾಯಾಲಯ, ದೂರುದಾರರ ವೈಯಕ್ತಿಕ ಹಕ್ಕು ಕಾಪಾಡುವಂತೆ ತಿಳಿಸಿದೆ.

‘ಅಭಿವ್ಯಕ್ತಿ ಸ್ವಾತಂತ್ರ್ಯವು ತನ್ನ ಎಲ್ಲೆಯನ್ನು ಮೀರಿದಾಗ ಅದು ಕಾನೂನುಬಾಹಿರವಾಗುತ್ತದೆ. ಅದು ಒಬ್ಬರ ವೈಯಕ್ತಿಕ ಹಕ್ಕುಗಳಿಗೆ ಚ್ಯುತಿ ತರುವುದರ ಜೊತೆಗೆ ಅಪಾಯಕ್ಕೂ ಕಾರಣವಾಗುತ್ತದೆ’ ಎಂದು ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್‌ ತಿಳಿಸಿದರು.

‘ದೂರುದಾರರ ಹೆಸರು, ಧ್ವನಿ, ಸಂಭಾಷಣೆ, ಚಿತ್ರಗಳನ್ನು ಕಾನೂನುಬಾಹಿರ ರೀತಿಯಲ್ಲಿ ಬಳಸುವುದು, ಅದರಲ್ಲಿಯೂ ವಾಣಿಜ್ಯ ಉದ್ದೇಶಗಳಿಗಾಗಿ ಬಳಸುವುದನ್ನು ನ್ಯಾಯಾಲಯವು ನಿರ್ಬಂಧಿಸಿದೆ. ಇಂತಹ ಕೃತ್ಯಗಳಿಗೆ ಕಠಿಣ ಶಿಕ್ಷೆಯನ್ನು ವಿಧಿಸಲಾಗುತ್ತದೆ’ ಎಂದು ನ್ಯಾಯಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT