ಗುರುವಾರ , ಫೆಬ್ರವರಿ 20, 2020
19 °C
Velimai

ಬಾಲಿವುಡ್‌ ಬೆಡಗಿಯರಿಗೆ ಗಾಳ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾಲಿವುಡ್‌ ಸ್ಟಾರ್‌ ತಲಾ ಅಜಿತ್‌ ಅಭಿನಯದ ಬಹುನಿರೀಕ್ಷಿತ ‘ವಲಿಮೈ’ ಸಿನಿಮಾದ ಚಿತ್ರೀಕರಣಕ್ಕಾಗಿ ಸಿದ್ಧತೆಗಳು ಭರದಿಂದ ಸಾಗಿವೆ. ‘ನೇರಕೊಂಡ ಪರವೈ’ ಚಿತ್ರದಲ್ಲಿ ಒಂದಾಗಿದ್ದ ನಿರ್ದೇಶಕ ಎಚ್‌. ವಿನೋತ್‌ ಮತ್ತು ಅಜಿತ್‌ ಮತ್ತೊಮ್ಮೆ ‘ವಲಿಮೈ’ ಚಿತ್ರದ ಮೂಲಕ ಮಿಂಚಲಿದ್ದಾರೆ. 

ಚಿತ್ರೀಕರಣಕ್ಕೆ ದಿನಾಂಕ ನಿಗದಿಯಾಗಿದ್ದರೂ, ಅಜಿತ್‌ಗೆ ಹೀರೊಯಿನ್‌ ಯಾರು ಎನ್ನುವ ಪ್ರಶ್ನೆ ಹಾಗೆಯೇ ಉಳಿದಿದೆ. ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ ಸೇರಿದಂತೆ ಇತರೆ ಭಾಷೆಯ ನಟಿಯರು ದಕ್ಷಿಣದ ಸಿನಿಮಾಗಳತ್ತ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ. ಅದೇ ರೀತಿ ಅಜಿತ್‌ ಜೋಡಿಯಾಗಿ ಬಾಲಿವುಡ್‌ನ ಟಾಪ್‌ ನಟಿಯರನ್ನು ಕರೆತರುವ ಯೋಜನೆ ಚಿತ್ರತಂಡದ್ದು. ಹೈದರಾಬಾದ್‌ನ ರಾಜಮೌಳಿ ಫಿಲ್ಮಸಿಟಿಯಲ್ಲಿ ನಡೆಯಲಿರುವ ಚಿತ್ರೀಕರಣದಲ್ಲಿ ಅಜಿತ್‌ ಪಾತ್ರವನ್ನು ಮಾತ್ರ ಶೂಟ್‌ ಮಾಡಲಾಗುತ್ತಿದೆ. 

ಇತ್ತೀಚೆಗೆ ಅಜಿತ್‌ ಗಿರಿಜಾ ಮೀಸೆ ಲುಕ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಬಹುಶಃ ‘ವಲಿಮೈ’ ಚಿತ್ರದಲ್ಲಿ ಅಜಿತ್‌ ಲುಕ್‌ ಇಂಥದೇ ಆಗಿರಬಹುದೆಂಬ ಲೆಕ್ಕಾಚಾರ ಅಭಿಮಾನಿಗಳದ್ದು. ಆದರೆ, ಈವರೆಗೆ ಚಿತ್ರದಲ್ಲಿ ಅಜಿತ್‌ ಲುಕ್‌ ವಿವರ ಎಲ್ಲೂ ಬಹಿರಂಗವಾಗಿಲ್ಲ.  ಚಿತ್ರದಲ್ಲಿ ದೊಡ್ಡ ಕಲಾವಿದರ ಪಡೆಯೇ ಇರಲಿದೆ ಎಂಬ ಮಾತುಗಳಿವೆ. ಸಂಗೀತ ನಿರ್ದೇಶಕರಾಗಿ ಯುವನ್‌ ಶಂಕರ್‌ ರಾಜಾ ಮತ್ತು ಸಿನಿಮಾಟೋಗ್ರಾಫರ್‌ ಆಗಿ ನೀರವ್‌ ಶಾ ಕೈ ಜೋಡಿಸಿದ್ದಾರೆ. 

ಈ ಹಿಂದೆ ನಿರ್ದೇಶಕ ಎಚ್‌.ವಿನೋತ್ ಹಾಗೂ ಅಜಿತ್‌ ಜೋಡಿ ‘ನೇರಕೊಂಡ ಪರವೈ’ ಚಿತ್ರದ ಮೂಲಕ ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದಿತ್ತು. ಇದೀಗ ಮತ್ತೊಮ್ಮೆ ಜೊತೆಯಾಗಿದ್ದಾರೆ. ‘ವಲಿಮೈ’ ಸಿನಿಮಾ ‘ನೇರಕೊಂಡ ಪರವೈ’ ರೆಕಾರ್ಡ್‌ ಮುರಿಯಲಿದೆ ಎಂದು ಚಿತ್ರತಂಡ ನಿರೀಕ್ಷೆಯಲಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು