ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾಲಿ ಧನಂಜಯ ನಟನೆಯ ‘ಉತ್ತರಕಾಂಡ’: ಶುರುವಾಯ್ತು ಗುದ್ದಾಂಗುದ್ದಿ!

Published 16 ಏಪ್ರಿಲ್ 2024, 0:31 IST
Last Updated 16 ಏಪ್ರಿಲ್ 2024, 0:31 IST
ಅಕ್ಷರ ಗಾತ್ರ

ನಟ ಡಾಲಿ ಧನಂಜಯ ನಟನೆಯ ‘ಉತ್ತರಕಾಂಡ’ ಸಿನಿಮಾದ ಮೊದಲ ಭಾಗದ ಚಿತ್ರೀಕರಣ ಸೋಮವಾರದಿಂದ(ಏ.15) ಆರಂಭವಾಗಿದೆ. ವಿಜಯಪುರದಲ್ಲಿ ಮೊದಲ ಹಂತದಲ್ಲಿ 15 ದಿನಗಳ ಚಿತ್ರೀಕರಣ ನಡೆಯಲಿದೆ ಎಂದು ತಿಳಿಸಿದೆ ಚಿತ್ರತಂಡ. 

ರೋಹಿತ್‌ ಪದಕಿ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಈ ಸಿನಿಮಾದ ಮುಹೂರ್ತ 2022ರ ನವೆಂಬರ್‌ನಲ್ಲಿ ನಡೆದಿತ್ತು. ‘ಇನ್‌ ಮ್ಯಾಲಿಂದ ಫುಲ್‌ ಗುದ್ದಾಂಗುದ್ದಿ!’ ಎಂಬ ಅಡಿಬರಹ ಹೊತ್ತ ಈ ಚಿತ್ರದ ಕಥೆ ಉತ್ತರ ಕರ್ನಾಟಕದ ಹಿನ್ನೆಲೆಯಲ್ಲಿದ್ದು, ಜೊತೆಗೆ ಅದೇ ಭಾಗದ ಭಾಷೆಯ ಸೊಗಡಿನಲ್ಲಿ ಈ ಸಿನಿಮಾ ನಡೆಯಲಿದೆ. ಈ ಎಲ್ಲ ವಿಷಯಗಳ ಸಂಶೋಧನೆ ಮತ್ತು ಸಿದ್ಧತೆಯ ಕಾರಣದಿಂದಾಗಿ ಹಾಗೂ ಕೆಲ ಅನಿವಾರ್ಯ ಸಂದರ್ಭಗಳು ಎದುರಾದ ಕಾರಣ ಚಿತ್ರ ಸೆಟ್ಟೇರುವುದಕ್ಕೆ ಕೊಂಚ ವಿಳಂಬವಾಗಿದೆ ಎಂದಿದೆ ಚಿತ್ರತಂಡ. ಚಿತ್ರದಲ್ಲಿ ‘ಗಬ್ರು ಸತ್ಯ’ ಎಂಬ ಪಾತ್ರದಲ್ಲಿ ಧನಂಜಯ ಕಾಣಿಸಿಕೊಳ್ಳಲಿದ್ದಾರೆ. 

‘ಈ ಸಿನಿಮಾಗೆ ಸಾಕಷ್ಟು ಪೂರ್ವಸಿದ್ಧತೆಯ ಅಗತ್ಯವಿತ್ತು. ಜೊತೆಗೆ ಚಿತ್ರಕಥೆಯ ಸಿದ್ಧತೆ ಮತ್ತು ಅದನ್ನು ಕಾರ್ಯರೂಪಕ್ಕೆ ತರಲು ಹೆಚ್ಚಿನ ಸಮಯ ತೆಗೆದುಕೊಂಡಿತು. ಶಿವರಾಜ್‌ಕುಮಾರ್‌ ಹಾಗೂ ಧನಂಜಯ ಅವರು ಈ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿದ್ದು, ಇವರಿಬ್ಬರ ಕಾಂಬಿನೇಷನ್‌ನ ಮೇಲೆ ಇರುವ ಜನರ ನಿರೀಕ್ಷೆಯು ನಮ್ಮ ಜವಾಬ್ದಾರಿಯನ್ನು ಇಮ್ಮಡಿಗೊಳಿಸಿದೆ. ಫ್ಯಾನ್ಸ್‌ಗಳಿಗೆ ಒಂದು ಅತ್ಯದ್ಭುತ ಸಿನಿಮಾ ನೀಡಲು ನಾವು ಸಜ್ಜಾಗಿದ್ದೇವೆ’ ಎಂದಿದ್ದಾರೆ ರೋಹಿತ್‌ ಪದಕಿ. ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದ್ದು, ಈ ವಾರದಲ್ಲೇ ಇವರೆಲ್ಲರನ್ನೂ ಪರಿಚಯಿಸಲಿದೆ ಚಿತ್ರತಂಡ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT