ಗುರುವಾರ , ಮೇ 26, 2022
24 °C

ವಿಚ್ಛೇದನ: ಒಂದೇ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಿರುವ ಧನುಷ್‌–ಐಶ್ಚರ್ಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಮಿಳು ನಟ ಧನುಷ್‌ ಹಾಗೂ ಐಶ್ಚರ್ಯಾ ರಜನಿಕಾಂತ್‌ ವಿಚ್ಛೇದನ ಘೋಷಣೆ ಮಾಡಿದ್ದರೂ ಒಂದೇ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸದ್ಯ ಇಬ್ಬರು ಹೈದರಾಬಾದ್‌ನಲ್ಲಿ ಉಳಿದುಕೊಂಡಿದ್ದಾರೆ. ಇಬ್ಬರು ಬೇರೆ ಬೇರೆ ಸಿನಿಮಾಗಳ ಕೆಲಸದ ಸಲುವಾಗಿ ಹೈದರಾಬಾದ್‌ಗೆ ಆಗಮಿಸಿದ್ದಾರೆ. 

ಧನುಷ್‌ ’ಸರ್‌’ ಸಿನಿಮಾದ ಕೆಲಸಕ್ಕಾಗಿ ಹೈದರಾಬಾದ್‌ಗೆ ಬಂದಿದ್ದು ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಐಶ್ವರ್ಯ ರಜನಿಕಾಂತ್‌ ಕೂಡ ಬೇರೆ ಸಿನಿಮಾದ ಕೆಲಸಕ್ಕೆ ಬಂದಿದ್ದು ಅವರೂ ಕೂಡ ಧನುಷ್‌ ಉಳಿದುಕೊಂಡಿರುವ ಹೊಟೇಲ್‌ ರೂಮಿನಲ್ಲಿ ಉಳಿದುಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಹೊಟೇಲ್‌ನಲ್ಲಿ ಇಬ್ಬರು ಕೆಲ ಹೊತ್ತು ಜಗಳ ಮಾಡಿಕೊಂಡಿದ್ದಾರೆ ಎಂಬುದು ಗೊತ್ತಾಗಿದ್ದು ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಇಬ್ಬರನ್ನು ಒಂದು ಮಾಡುವ ಪ್ರಯತ್ನಗಳು ಕೂಡ ನಡೆಯುತ್ತಿವೆ ಎಂದು ಧನುಷ್‌ ಆಪ್ತರು ಹೇಳಿದ್ದಾರೆ.  ಈ ಬಗ್ಗೆ ದಂಪತಿಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಧನುಷ್​​ ಹಾಗೂ ಐಶ್ವರ್ಯಾ ರಜನಿಕಾಂತ್​ ವಿಚ್ಛೇದನ ಪಡೆದಿರುವ ವಿಚಾರ ಅವರ ಅಭಿಮಾನಿಗಳಲ್ಲಿ ನಿಜಕ್ಕೂ ಬೇಸರ ತರಿಸಿದೆ. ಇಬ್ಬರು ಮತ್ತೆ ಒಂದಾಗಲಿ ಎಂದು ಸಾಮಾಜಿಕ ಮಾಧ್ಯಗಳಲ್ಲಿ ಪೋಸ್ಟ್‌ ಹಾಕುತ್ತಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು