ಸೋಮವಾರ, ಅಕ್ಟೋಬರ್ 3, 2022
24 °C

ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ಸೌಂಡ್‌ ಮಾಡುತ್ತಿದೆ ‘ತಿರುಚಿತ್ರಂಬಲಂ’ ಟ್ರೈಲರ್‌

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಕಾಲಿವುಡ್ ಸ್ಟಾರ್ ನಟ ಧನುಷ್ ಅಭಿನಯದ ‘ತಿರುಚಿತ್ರಂಬಲಂ’ ಸಿನಿಮಾ ಟ್ರೈಲರ್‌ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. 

ಈಗಾಗಲೇ ಇದೇ ಚಿತ್ರದ `ಥಾಯ್ ಕೆಲ್ವೈ’ ಹಾಡು ಬಿಡುಗಡೆಯಾಗಿ ಹಿಟ್‌ ಆಗಿದೆ. ಈ ಹಾಡಿಗೆ ಧನುಷ್ ಸಾಹಿತ್ಯ ಬರೆದು, ಹಾಡಿದ್ದಾರೆ.

ಮಿತ್ರನ್ ಜವಾಹರ್ ನಿರ್ದೇಶನದ ಈ ಚಿತ್ರ  ಮ್ಯೂಸಿಕಲ್‌ ಲವ್‌ಸ್ಟೋರಿಯಾಗಿದೆ. ಇದರಲ್ಲಿ ಧನುಷ್‌ ಆಹಾರ ಸರಬರಾಜು ಮಾಡುವ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದನುಷ್‌ಗೆ ನಾಯಕಿಯಾಗಿ ನಿತ್ಯಾ ಮೆನನ್‌ ನಟಿಸಿದ್ದಾರೆ.

ಇದನ್ನೂ ಓದಿ:  ನನ್ನ ಲೈಂಗಿಕ ಜೀವನ ಆಸಕ್ತಿದಾಯಕವಾಗಿಲ್ಲದ ಕಾರಣ ಕರಣ್​ ನನ್ನ ಕರೆಯಲ್ಲ: ತಾಪ್ಸಿ 

ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿರುವ ಈ ಚಿತ್ರದ ಟ್ರೈಲರ್‌ಗೆ 45 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಬಂದಿದೆ. ನಟಿ ರಾಶಿ ಖನ್ನಾ ಕೂಡ ಇದರಲ್ಲಿ ನಟಿಸಿದ್ದಾರೆ. ಅನಿರುದ್ದ ರವಿಚಂದರ್‌ ಅವರ ಸಂಗೀತವಿದೆ.

ಈ ಚಿತ್ರ ಆಗಸ್ಟ್ 18ರಂದು ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ. 

ಓದಿ: BiggBoss Kannada OTTಗೆ ಚಾಲನೆ: 16 ಸ್ಪರ್ಧಿಗಳ ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು