ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಧನುಷ್‌ ಜತೆ ಡೇಟಿಂಗ್‌: ಕೇಳಿ ಬಂದ ನಟಿಯರ ಹೆಸರುಗಳು ಇಲ್ಲಿವೆ...

ಫಾಲೋ ಮಾಡಿ
Comments

ಚೆನ್ನೈ: ದಕ್ಷಿಣ ಭಾರತ ಚಿತ್ರರಂಗದ ಹೆಸರಾಂತ ನಟ ಧನುಷ್‌ ಹಾಗೂ ಚಿತ್ರ ನಿರ್ಮಾಪಕಿ, ಪತ್ನಿ ಐಶ್ವರ್ಯಾ ರಜನಿಕಾಂತ್‌ ಅವರು 18 ವರ್ಷಗಳ ವೈವಾಹಿಕ ಜೀವನದಿಂದ ವಿಚ್ಛೇದನ ಪಡೆಯಲು ಮುಂದಾಗುತ್ತಿರುವುದಕ್ಕೆ ಧನುಷ್‌ ಅಭಿಮಾನಿಗಳಲ್ಲಿ ಬೇಸರ ವ್ಯಕ್ತವಾಗಿದೆ.

ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರ ಪುತ್ರಿ ಐಶ್ವರ್ಯಾ ರಜನಿಕಾಂತ್‌ ಅವರನ್ನು ಧನುಷ್‌ 2004ರಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

ವಿಚ್ಚೇದನದ ಬಳಿಕ ಧನುಷ್‌ ಅವರಿಗಿದ್ದ ಅಫೇರ್‌ಗಳ ಸುದ್ದಿಗಳು ಇಂಟರ್ನೆಟ್‌ನಲ್ಲಿ ಹರಿದಾಡುತ್ತಿವೆ.

ಸ್ಟಾರ್‌ ದಂಪತಿಯ ವಿಚ್ಛೇದನ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್‌ ಆಗಿತ್ತು. ನೆಟ್ಟಿಗರು ವಿಚ್ಛೇದನಕ್ಕೆ ಕಾರಣ ಏನಿರಬಹುದು ಎಂದು ಚರ್ಚೆ ಮಾಡುತ್ತಿದ್ದಾರೆ. ಧನುಷ್‌ ಮೂವರು ನಟಿಯರ ಜೊತೆ ಅಫೇರ್‌ ಹೊಂದಿದ್ದರು ಎಂಬುದೇಕಾರಣ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

2012ರಲ್ಲಿ ತೆರೆಕಂಡ ’3’ ಸಿನಿಮಾದ ಚಿತ್ರೀಕರಣ ಸಂದರ್ಭದಲ್ಲಿ ನಾಯಕಿ ಶ್ರುತಿ ಹಾಸನ್‌ ಜತೆ ಧನುಷ್‌ ಅಫೇರ್‌ ಹೊಂದಿದ್ದರು ಎನ್ನಲಾಗಿದ್ದು ಈ ವಿಷಯ ಐಶ್ವರ್ಯ ರಜನಿಕಾಂತ್‌ ಅವರಿಗೆ ತಿಳಿದಿತ್ತು ಎಂದು ಮೂಲಗಳು ತಿಳಿಸಿವೆ.

ನಟಿ ತ್ರಿಶಾ ಕೂಡ ಧನುಷ್‌ ಜತೆ ಡೇಟಿಂಗ್‌ ಮಾಡುತ್ತಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ 2015–2017ರಲ್ಲಿ ಅವರು ಹೆಚ್ಚು ರಾತ್ರಿ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಹಾಗೇ ಹೊಟೇಲ್‌ಗಳಲ್ಲಿ ಉಳಿದುಕೊಳ್ಳುತ್ತಿದ್ದರು ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ.

2016ರಲ್ಲಿ ತ್ರಿಶಾ ಹಾಗೂ ವರುಣ್ ಮಣಿಯನ್‌ ನಡುವೆ ನಿಶ್ಚಿತಾರ್ಥ ನಡೆದಿತ್ತು. ಧನುಷ್‌ ಜತೆ ತ್ರಿಶಾಗೆ ಅಪೇರ್‌ ಇರುವುದು ಗೊತ್ತಾಗಿ ವರುಣ್‌ ಆ ಮದುವೆಯಿಂದ ಹಿಂದೆ ಸರಿದರು ಎಂದು ಗಾಯಕಿ ಸುಚಿತ್ರಾ 2017ರಲ್ಲಿ ಆರೋಪ ಮಾಡಿದ್ದರು.

ತ್ರಿಶಾ ಜತೆ ದೂರವಾದ ಬಳಿಕ ಧನುಷ್‌ ನಟಿ ಅಮಲಾ ಪೌಲ್‌ ಅರೊಂದಿಗೆ ಅಫೇರ್‌ ಇಟ್ಟುಕೊಂಡರು. ರಘುವರನ್‌ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಇವರ ಸಂಬಂಧ ಶುರುವಾಯಿತು ಎಂದು ಸುಚಿತ್ರಾ ಆರೋಪಿಸಿದ್ದರು.

ಅಮಲಾ ಪೌಲ್‌ ನಿರ್ದೇಶಕ ವಿಜಯ್‌ ಅವರನ್ನು ಮದುವೆಯಾಗಿದ್ದರು. ಈ ವಿಷಯ ತಿಳಿದು ವಿಜಯ್‌ ವಿಚ್ಛೇದನ ನೀಡಿದ್ದರು.ಈ ವಿಚ್ಛೇದನಕ್ಕೆ ಧನುಷ್‌ ಕಾರಣ ಎಂದು ವಿಜಯ್‌ ಕುಟುಂಬದರು ಆರೋಪ ಮಾಡಿದ್ದರು.

ಇದಲ್ಲದೇ ಧನುಷ್‌ ನನ್ನನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸುಚಿತ್ರಾ ಹೇಳಿದ್ದರು. ಅಮಲಾ ಪೌಲ್‌, ಸಂಗೀತ ನಿರ್ದೇಶಕ ಅನಿರುದ್ಧ್‌ ಸೇರಿದಂತೆ ಹಲವರ ವಿರುದ್ಧ ಆರೋಪ ಮಾಡಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ ಕೆಲವು ಫೋಟೊ, ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಸುಚಿತ್ರಾ ಸರಣಿ ಟ್ವೀಟ್‌ಗಳನ್ನು ಕೂಡ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT