ಹೈದರಾಬಾದ್: ತೆಲುಗಿನ ಸ್ಟಾರ್ ನಟ ನಾಗಚೈತನ್ಯ ಹಾಗೂ ನಟಿ ಸಮಂತಾ ವಿಚ್ಛೇದನ ಪಡೆದು ಕೆಲವು ದಿನಗಳ ಬಳಿಕ ಪರಸ್ಪರ ಎದುರುಗೊಳ್ಳುವ ಅವಕಾಶ ದೊರಕಿತ್ತು. ಆದರೆ ಅವರಿಬ್ಬರುಅದರಿಂದ ದೂರ ಸರಿದಿದ್ದಾರೆ.
ಹೌದು. ಸಿನಿಮಾ ಕೆಲಸದ ನಿಮಿತ್ತ ನಾಗಚೈತನ್ಯ ಹಾಗೂ ಸಮಂತಾ ರಾಮನಾಯ್ಡು ಸ್ಟುಡಿಯೊಗೆ ಬಂದಿದ್ದರು. ಅಲ್ಲಿ ಅವರಿಗೆ ಪರಸ್ಪರ ಭೇಟಿಯಾಗುವ ಅವಕಾಶ ಇತ್ತು. ಆದರೆ ಅವರು ಅಂಗರಕ್ಷಕರ ನೆರವು ಪಡೆದು ಒಬ್ಬರನೊಬ್ಬರು ನೋಡುವುದರಿಂದ ದೂರ ಸರಿದರು ಎನ್ನಲಾಗಿದೆ.
ಸಮಂತಾ ಇರುವ ಕಡೆ ತೆರೆಳದೆ ನಾಗಚೈತನ್ಯ ಬೇರೆ ಬಾಗಿಲಿನಿಂದ ಹೊರನೆಡೆದರು. ನಾಗಚೈತನ್ಯ ಹೋದ ಬಳಿಕ ಕೆಲವೇ ನಿಮಿಷಗಳಲ್ಲಿ ಸಮಂತಾ ಸಹ ತೆರಳಿದರು ಎಂದು ಟಾಲಿವುಡ್ ಮೂಲಗಳು ತಿಳಿಸಿವೆ.
ಸದ್ಯ ನಾಗಚೈತನ್ಯ ಬಂಗರ್ರಾಜು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಮಂತಾ ಕೂಡ ತೆಲುಗು, ತಮಿಳು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.