ಶನಿವಾರ, ಡಿಸೆಂಬರ್ 7, 2019
25 °C

ನಟಿ ಡಿಂಪಲ್ ಕಪಾಡಿಯಾ ತಾಯಿ ಬೆಟ್ಟಿ ಕಪಾಡಿಯಾ ನಿಧನ

Published:
Updated:
Prajavani

ಮುಂಬೈ: ನಟಿ ಡಿಂಪಲ್ ಕಪಾಡಿಯಾ ಅವರ ತಾಯಿ ಬೆಟ್ಟಿ ಕಪಾಡಿಯ ಅವರು ತಡರಾತ್ರಿ ಮುಂಬೈನ ಹಿಂದುಜ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.

ಹಿರಿಯ ನಟಿಯ ತಾಯಿ ಇತ್ತೀಚೆಗಷ್ಟೇ ತಮ್ಮ 80ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ವೇಳೆ ಮೊಮ್ಮಗಳು ಟ್ವಿಂಕಲ್ ಖನ್ನಾ ಮತ್ತು ಪತಿ ಅಕ್ಷಯ್ ಕುಮಾರ್ ಸೇರಿದಂತೆ ಕುಟುಂಬಸ್ಥರು ಮತ್ತು ಸ್ನೇಹಿತರು ಭಾಗಿಯಾಗಿದ್ದರು.

 
 
 
 

 
 
 
 
 
 
 
 
 

Grandmother’s 80th with family, friends and loads of laughter #ShilimDiaries

A post shared by Twinkle Khanna (@twinklerkhanna) on

ಡಿಂಪಲ್ ಕಪಾಡಿಯಾ ಅವರ ತಾಯಿ ಗುಜರಾತಿ ವ್ಯಾಪಾರಿ ಚುನ್ನಿಬಾಯಿ ಕಪಾಡಿಯ ಎಂಬುವರನ್ನು ಮದುವೆಯಾಗಿದ್ದರು. ಇವರಿಗೆ 62 ವರ್ಷದ ಡಿಂಪಲ್ ಸೇರಿ ನಾಲ್ವರು ಮಕ್ಕಳಿದ್ದಾರೆ. ಸೋದರಿ ನಟಿ ಸಿಂಪಲ್ ಕಪಾಡಿಯಾ, ರೀಮಾ ಮತ್ತು ಸೋದರ ಮುನ್ನಾ ಇದ್ದಾರೆ.

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಬೆಟ್ಟಿ ಕಪಾಡಿಯಾ ಅವರನ್ನು ಇತ್ತೀಚೆಗಷ್ಟೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಡಿಂಪಲ್ ಕಪಾಡಿಯಾ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂಬ ಸುದ್ದಿ ಹರಿದಾಡಿತ್ತು.

ಈ ಹಿನ್ನಲೆಯಲ್ಲಿ ಸ್ಪಷ್ಟನೆ ನೀಡಿದ್ದ ಡಿಂಪಲ್, ನಾನು ಆರೋಗ್ಯದಿಂದಿದ್ದು ಎಂದಿನಂತೆ ಓಡಾಡಿಕೊಂಡಿದ್ದೇನೆ. ನನ್ನ ತಾಯಿ ಬೆಟ್ಟಿ ಕಪಾಡಿಯಾ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರನ್ನು ನೋಡಲೆಂದು ಟ್ವಿಂಕಲ್ ಖನ್ನಾ ಆಸ್ಪತ್ರೆಗೆ ಬಂದಿದ್ದರು. ಹೀಗಾಗಿ ಕೆಲವರು ನಾನೇ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಪ್ಪಾಗಿ ಭಾವಿಸಿದ್ದರು ಎಂದಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು