ಸೋಮವಾರ, ಅಕ್ಟೋಬರ್ 26, 2020
24 °C

ನಿರ್ದೇಶಕರೂ ನಡೆಸುತ್ತಿದ್ದಾರೆ ಆನ್‌ಲೈನ್ ಕ್ಲಾಸ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಟಾಲಿವುಡ್‌ನ ಬಹುನಿರೀಕ್ಷಿತ ‘ಪುಷ್ಪಾ’ ಸಿನಿಮಾದ ಶೂಟಿಂಗ್ ಅನ್ನು ಕೇರಳದಲ್ಲಿ ನಡೆಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿತ್ತು ಚಿತ್ರತಂಡ. ಆದರೆ ಕೊರೊನಾ ಲಾಕ್‌ಡೌನ್‌ ಸಿನಿತಂಡದ ಈ ಯೋಜನೆಗೆ ಅಡ್ಡಿ ಪಡಿಸಿತ್ತು.

ಸುಕುಮಾರ್ ನಿರ್ದೇಶನದ ‘ಪುಷ್ಪಾ’ ಸಿನಿಮಾ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ಕನ್ನಡತಿ ರಶ್ಮಿಕಾ ಮಂದಣ್ಣ ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಇದೆಲ್ಲಾ ತಿಳಿದಿರುವ ವಿಷಯ. ಆದರೆ ಹೊಸ ವಿಷಯ ಏನೆಂದರೆ ನಿರ್ದೇಶಕ ಸುಕುಮಾರ್ ನಾಯಕ ಹಾಗೂ ನಾಯಕಿ ಸೇರಿದಂತೆ ಸಿನಿತಂಡಕ್ಕೆ ಆನ್‌ಲೈನ್‌ ತರಗತಿ ನಡೆಸುತ್ತಿದ್ದಾರಂತೆ. ಹೈದರಾಬಾದ್‌ನಲ್ಲಿ ಆನ್‌ಲೈನ್‌ ತರಗತಿ ನಡೆಸುತ್ತಿರುವ ನಿರ್ದೇಶಕ ಚಿತ್ತೂರು ಪ್ರಾಂತ್ಯದ ಸ್ಥಳೀಯ ಭಾಷೆಯನ್ನು ಕಲಿಸುತ್ತಿದ್ದಾರಂತೆ.

ಈ ಮೊದಲು ಸುಕುಮಾರ್ ನಾಯಕ ಹಾಗೂ ನಾಯಕಿಗೆ ಭಾಷೆ ಕಲಿಕೆಗೆ ಕ್ಲಾಸ್ ನಡೆಸಿದ್ದರು. ಇದಕ್ಕಾಗಿ ಟ್ಯೂಟರ್‌ ಒಬ್ಬರನ್ನು ಆಯ್ಕೆ ಮಾಡಿಕೊಂಡಿದ್ದರು. ಈ ಹಿಂದೆ ಜ್ಯೂನಿಯರ್‌ ಎನ್‌ಟಿಆರ್ ಅಭಿನಯದ ‘ಅರವಿಂದ ಸಮೇತ ವೀರ ರಾಘವ’ ಸಿನಿಮಾಕ್ಕೂ ನಿರ್ದೇಶಕ ತ್ರಿವಿಕ್ರಮ್ ಇದೇ ತಂತ್ರ ಅನುಸರಿಸಿದ್ದರು.

ಪುಷ್ಪಾ ಸಿನಿಮಾದ ಶೂಟಿಂಗ್‌ಗೆ ಚಿತ್ರತಂಡ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದು ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ. ಒಮ್ಮೆ ತೆಲಂಗಾಣ ಸರ್ಕಾರ ಅನುಮತಿ ನೀಡಿದರೆ ವಿಕಾರಾಬಾದ್ ಕಾಡಿನಲ್ಲಿ ಶೂಟಿಂಗ್ ಆರಂಭಿಸಲಿದೆ ಪುಷ್ಪಾ ತಂಡ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು