ಕೆಜಿಎಫ್ – 2 ಬಿಡುಗಡೆಯ ದಿನಾಂಕ ಸನ್ನಿಹಿತ

ಬೆಂಗಳೂರು: ಕನ್ನಡದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ಕೆಜಿಎಫ್ ಚಾಪ್ಟರ್ – 2 ಬಿಡುಗಡೆಯ ದಿನಾಂಕ ಸನ್ನಿಹಿತವಾಗಿದೆ. ಈ ಕುರಿತು ನಿರ್ದೇಶಕ ಪ್ರಶಾಂತ್ ನೀಲ್ ಟ್ವಿಟರ್‌ನಲ್ಲಿ ಕುತೂಹಲ ಹುಟ್ಟಿಸುವ ಪೋಸ್ಟರ್ ಅನ್ನು ಪ್ರಕಟಿಸಿದ್ದಾರೆ.
Witness the MAGNUM OPUS come to life soon.#KGFChapter2 @hombalefilms @TheNameIsYash @prashanth_neel @VKiragandur @HombaleGroup @duttsanjay @TandonRaveena @SrinidhiShetty7 @Karthik1423 @excelmovies @AAFilmsIndia @VaaraahiCC @PrithvirajProd @DreamWarriorpic @LahariMusic pic.twitter.com/lkt32UP9fL
— Hombale Films (@hombalefilms) July 6, 2021
ಈ ಹಿಂದೆ ಚಿತ್ರತಂಡ ಘೋಷಿಸಿದಂತೆ ಜುಲೈನಲ್ಲಿ ಚಿತ್ರ ಪ್ರದರ್ಶನ ಕಾಣಲಿದೆ (ಜುಲೈ 21– 22) ಎಂದು ಹೇಳಲಾಗಿತ್ತು. ಆದರೆ, ಈಗ ಪ್ರಕಟಿಸಿರುವ ಪೋಸ್ಟರ್ ಚಿತ್ರದ ಮೇಲಿನ ನಿರೀಕ್ಷೆ ಹಾಗೂ ಕುತೂಹಲ ಹೆಚ್ಚಿಸಿದೆ. ಮುಂದಿನ ಪ್ರಕಟಣೆ ಯಾವಾಗ ಬರುತ್ತದೆ ಎಂದು ಕೆಜಿಎಫ್ ಚಿತ್ರಾಭಿಮಾನಿಗಳು ಹಾಗೂ ಯಶ್ ಅಭಿಮಾನಿಗಳು ಕಾಯುತ್ತಿದ್ದಾರೆ.
ಚಿತ್ರದಲ್ಲಿ ಸಂಜಯ್ ದತ್, ರವೀನಾ ಟಂಡನ್ ಸೇರಿದಂತೆ ಹಲವು ಪ್ರಮುಖ ನಟರು ಇದ್ದಾರೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ಚಿತ್ರ ನಿರ್ಮಿಸುತ್ತಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ.
ಈ ವರ್ಷ ಜನವರಿ 7ರಂದು ಚಿತ್ರದ ಯೂನಿವರ್ಸಲ್ ಟೀಸರ್ ಬಿಡುಗಡೆ ಆಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.