ಮಂಗಳವಾರ, ಸೆಪ್ಟೆಂಬರ್ 27, 2022
27 °C

ನಮ್ಮದು ಸಿಂಕ್‌ ಸೌಂಡ್‌ ಸಿನಿಮಾ ಅಲ್ಲ: ಸಾಗರ್‌ ಪುರಾಣಿಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಡೊಳ್ಳು’ ಸಿನಿಮಾಗೆ ಸಿಕ್ಕಿರುವುದು ಸಿಂಕ್‌ ಸೌಂಡ್‌ ವಿಭಾಗದ ಪ್ರಶಸ್ತಿಯೇ? ಹೀಗೊಂದು ಚರ್ಚೆಗೆ ಗ್ರಾಸವಾದ ವಿಷಯಕ್ಕೆ ಕೊನೆಗೂ ಚಿತ್ರ ನಿರ್ದೇಶಕ ಸಾಗರ್‌ ಪುರಾಣಿಕ್‌ ಸ್ಪಷ್ಟನೆ ನೀಡಿದ್ದಾರೆ. ಈ ಸಿನಿಮಾಕ್ಕೆ ಇತ್ತೀಚೆಗೆ ‘ಅತ್ಯುತ್ತಮ ಕನ್ನಡ ಚಲನಚಿತ್ರ’ ಎಂದು ರಾಷ್ಟ್ರಪ್ರಶಸ್ತಿ ಸಿಕ್ಕಿದೆ.

ವಿವಾದವೇನು? 

ಧ್ವನಿ ವಿನ್ಯಾಸಕ, ಆಸ್ಕರ್‌ ಪ್ರಶಸ್ತಿ ಪುರಸ್ಕೃತ ರಸೂಲ್‌ ಪೂಕುಟ್ಟಿ ಅವರು ಡೊಳ್ಳು ಸಿನಿಮಾಕ್ಕೆ ಬೆಸ್ಟ್‌ ಆಡಿಯೋಗ್ರಫಿ (ಅತ್ಯುತ್ತಮ ಧ್ವನಿಗ್ರಹಣ) ವಿಭಾಗದಲ್ಲಿ ಪ್ರಶಸ್ತಿ ಸಿಕ್ಕಿರುವುದಕ್ಕೆ ಟ್ವಿಟರ್‌ನಲ್ಲಿ ಆಕ್ಷೇಪ ಎತ್ತಿದ್ದರು. ಇದು ಸಿಂಕ್‌ ಸೌಂಡ್‌ ಅಲ್ಲ. ಹಾಗಿದ್ದರೂ ಈ ಚಿತ್ರಕ್ಕೆ ಸಿಂಕ್‌ ಸೌಂಡ್‌ ವಿಭಾಗದಲ್ಲಿ ಪ್ರಶಸ್ತಿ ಹೇಗೆ ಕೊಟ್ಟರೋ ಗೊತ್ತಿಲ್ಲ. ತೀರ್ಪುಗಾರರಿಗೂ ಗೊತ್ತಾಗಲಿಲ್ಲವೇ ಎಂದು ಪ್ರಶ್ನಿಸಿದ್ದರು. ಜಾಲತಾಣದಲ್ಲಿ ಚರ್ಚೆ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆಯೇ ಸಾಗರ್‌ ಪುರಾಣಿಕ್‌ ಸ್ಪಷ್ಟನೆ ನೀಡಿದರು.

‘ನಾವು ಸಿಂಕ್‌ ಸೌಂಡ್‌ ವಿಭಾಗದಲ್ಲಿ ಅರ್ಜಿ ಸಲ್ಲಿಸಿಯೇ ಇಲ್ಲ. ನಮ್ಮದು ಧ್ವನಿ ಡಬ್‌ ಮಾಡಿರುವ ಸಿನಿಮಾ. ಇದಕ್ಕೆ ಡಬ್ಬಿಂಗ್‌ ಸ್ಟುಡಿಯೋದವರು, ಬೇರೆ ಚಿತ್ರಗಳ ಪ್ರಮುಖರೂ ಸಾಕ್ಷಿಯಾಗಿದ್ದಾರೆ. ಹಾಗಿದ್ದರೂ ಈ ಸಿನಿಮಾವನ್ನು ಸಿಂಕ್‌ ಸೌಂಡ್‌ ವಿಭಾಗದಲ್ಲಿ ಹೇಗೆ ಸೇರಿಸಿದರು ಎಂದೂ ಗೊತ್ತಿಲ್ಲ. ನಾವೂ ಪ್ರಶಸ್ತಿ ಸಮಿತಿಯ ಪ್ರತಿಕ್ರಿಯೆಗೆ ಕಾಯುತ್ತಿದ್ದೇವೆ’ ಎಂದು ಹೇಳಿದರು.

‘ನಾವು ಅರ್ಜಿ ಸಲ್ಲಿಸಿರುವ ದಾಖಲೆಗಳೂ ಇವೆ. ಬಹುಷ ಲಿಪಿಕಾರರ ತಪ್ಪಿನಿಂದ (ಕ್ಲರಿಕಲ್‌ ಎರರ್‌) ಹೀಗಾಗಿರಬಹುದು. ವಿಷಯವನ್ನು ನಾವೇ ಒಪ್ಪಿಕೊಂಡ ಮೇಲೆ ಅದನ್ನು ಬೆಳೆಸುವ ಅವಶ್ಯಕತೆಯಿಲ್ಲ’ ಎಂದು ಸಾಗರ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು