ಹೈದರಾಬಾದ್: ಹಲವು ಹಿಟ್ ಸಿನಿಮಾಗಳ ನಿರ್ದೇಶಕ ಎಸ್.ಎಸ್. ರಾಜಮೌಳಿ ವಿರುದ್ಧ ಅವರ ಸ್ನೇಹಿತ ಎಂದು ಹೇಳಿಕೊಂಡಿರುವ ಶ್ರೀನಿವಾಸ ರಾವ್ ಎಂಬುವವರು ದೌರ್ಜನ್ಯ, ಹಿಂಸೆಯ ಆರೋಪ ಮಾಡಿದ್ದಾರೆ ಎಂದು ವರದಿಯಾಗಿದೆ.

ಈ ಕುರಿತಂತೆ ಶ್ರೀನಿವಾಸ ರಾವ್ ವಿಡಿಯೊ ಮಾಡಿರುವುದನ್ನು ಹಲವರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ

‘ನನ್ನ ಹಾಗೂ ರಾಜಮೌಳಿ ಸ್ನೇಹ 34 ವರ್ಷದ್ದು. 2007ರಲ್ಲಿ ತೆರೆಕಂಡ ‘ಯಮದೊಂಗ’ ಸಿನಿಮಾವರೆಗೂ ನಾವಿಬ್ಬರೂ ಜತೆಗೇ ಇದ್ದೆವು. ಒಬ್ಬ ಮಹಿಳೆಯತ್ತ ಇಬ್ಬರೂ ಆಕರ್ಷಿತರಾದೆವು. ಆದರೆ ಸ್ನೇಹಕ್ಕಾಗಿ ನಾನು ಹಿಂದೆ ಸರಿದೆ. ಹೀಗಾಗಿ 55 ವರ್ಷವಾದರೂ ನಾನು ಅವಿವಾಹಿತನಾಗಿಯೇ ಉಳಿದೆ’ ಎಂದಿದ್ದಾರೆ.

‘ಹಲವು ಹಿಟ್ ಸಿನಿಮಾಗಳ ನಂತರ ನನ್ನ ನಿಷ್ಠೆಯನ್ನು ರಾಜಮೌಳಿ ಪ್ರಶ್ನಿಸಲಾರಂಭಿಸಿದರು. ಆ ಮೂಲಕ ಮಾನಸಿಕ ಹಿಂಸೆ ನೀಡಿದ್ದಾರೆ. ಈ ವಯಸ್ಸಿನಲ್ಲಿ ನಾನು ಇಷ್ಟೊಂದು ದೌರ್ಜನ್ಯವನ್ನು ಸಹಿಸಲಾರೆ. ನನ್ನ ಮೇಲೆ ಸುಳ್ಳು ಪತ್ತೆ ಪರೀಕ್ಷೆಯನ್ನೂ ನಡೆಸಿದ್ದಾರೆ. ಚಿತ್ರರಂಗದ ಹಲವರ ವಿರುದ್ಧ ವಾಮಾಚಾರವನ್ನೂ ರಾಜಮೌಳಿ ಮಾಡಿಸಿದ್ದಾರೆ’ ಎಂದು ಶ್ರೀನಿವಾಸ ರಾವ್ ಆರೋಪಿಸಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.

‘ನನ್ನ ಈ ಆರೋಪಗಳ ಕುರಿತು ಪೊಲೀಸರು ತನಿಖೆ ನಡೆಸಿ ನನಗೆ ನ್ಯಾಯ ಕೊಡಿಸಬೇಕು. ನನಗೆ ಆತ್ಮಹತ್ಯೆ ಬಿಟ್ಟು ಬೇರೆ ಹಾದಿ ತೋಚುತ್ತಿಲ್ಲ’ ಎಂದಿದ್ದಾರೆ.

ರಾಜಮೌಳಿ ಅವರು ಸದ್ಯ ನಟ ಮಹೇಶ್ ಬಾಬು ಹಾಗೂ ಪ್ರಿಯಾಂಕಾ ಚೋಪ್ರಾ ನಟನೆಯ ಎಸ್ಎಸ್ಎಂಬಿ29 ಎಂಬ ಚಿತ್ರವನ್ನು ನಿರ್ದೇಶನ ಹೊಣೆ ಹೊತ್ತಿದ್ದಾರೆ ಎಂದು ವರದಿಯಾಗಿದ್ದು, ಈ ಕುರಿತ ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರಬೀಳಬೇಕಿದೆ.

ಶ್ರೀನಿವಾಸ ರಾವ್ ಅವರ ಆರೋಪದ ಕುರಿತು ರಾಜಮೌಳಿ ಅವರಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.