ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಬಲ್ ಸೈಜಿನಲ್ಲಿ ಬಂದರು ಸೋನಾಕ್ಷಿ, ಹುಮಾ: ‘ಡಬಲ್ ಎಕ್ಸೆಲ್‘ ಟ್ರೇಲರ್ ಬಿಡುಗಡೆ

Last Updated 12 ಅಕ್ಟೋಬರ್ 2022, 12:40 IST
ಅಕ್ಷರ ಗಾತ್ರ

ಬೆಂಗಳೂರು: ಬಹಳ ವರ್ಷಗಳ ನಂತರ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಮುಖ್ಯಪಾತ್ರದಲ್ಲಿ ಬಣ್ಣ ಹಚ್ಚಿರುವ ಹೊಸ ಸಿನಿಮಾ ‘ಡಬಲ್ ಎಕ್ಸೆಲ್’ ತೆರೆಗೆ ಬರಲು ಸಿದ್ಧವಾಗಿದೆ.

ಈ ಪ್ರಯುಕ್ತ ಇಂದು ಡಬಲ್ ಎಕ್ಸೆಲ್ ಸಿನಿಮಾದ ಟ್ರೇಲರ್ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು ಟ್ರೆಂಡ್ ಆಗಿದೆ.

ಮೂರು ನಿಮಿಷದ ಟ್ರೇಲರ್‌ನಲ್ಲಿ ಸೋನಾಕ್ಷಿ ಹಾಗೂ ಹುಮಾ ಖುರೇಶಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿರುವುದು ಗಮನ ಸೆಳೆಯುತ್ತದೆ.

ಅತಿಯಾದ ತೂಕದಿಂದ ಕೂಡಿದ ಇಬ್ಬರು ಯುವತಿಯರ ಮದುವೆಗೆ ಎದುರಾಗುವ ಅಡ್ಡಿಗಳ ಕಾಮಿಡಿ ಡ್ರಾಮಾದ ಕಥಾಹಂದರವನ್ನು ಡಬಲ್ ಎಕ್ಸೆಲ್ ಹೊಂದಿದೆ. ಟ್ರೇಲರ್ ನೋಡಿ ಸೋನಾಕ್ಷಿ ಹಾಗೂ ಹುಮಾ ಅವರನ್ನು ನೆಟ್ಟಿಗರು ಕಾಲೆಳೆದಿದ್ದು, ಇಬ್ಬರು ನಟಿಯರು ದಢೂತಿ ಅವತಾರದಲ್ಲಿ ಮುದ್ದಾಗಿ ಕಾಣುತ್ತಿದ್ದಾರೆ ಎಂದು ತಮಾಷೆ ಮಾಡಿದ್ದಾರೆ.

ಇನ್ನೊಂದು ವಿಶೇಷವೆಂದರೆ ಈ ಚಿತ್ರದಲ್ಲಿ ಕ್ರಿಕೆಟಿಗ ಶಿಖರ್ ದವನ್ ಅಭಿನಯಿಸಿದ್ದು, ಗಮನ ಸೆಳೆದಿದೆ.

ಇನ್ನು ಈ ಚಿತ್ರವನ್ನು ಸಾತ್ರಮ್ ರಮಣಿ ನಿರ್ದೇಶನ ಮಾಡಿದ್ದು, ಟಿ ಸಿರೀಸ್‌ನ ಭೂಷಣ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ಸೋನಾಕ್ಷಿ ಸಿನ್ಹಾ ಅವರು 2019 ರಲ್ಲಿ ದಬಾಂಗ್‌–3 ಸಿನಿಮಾದಲ್ಲಿ ಕಾಣಿಸಿಕೊಂಡ ನಂತರ ಮತ್ತೆ ಯಾವುದೇಸಿನಿಮಾಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಹುಮಾ ಖುರೇಶಿ ಕೊನೆಯದಾಗಿ ಅಜಿತ್ ಅಭಿನಯದ ವಾಲಿಮೈ ಸಿನಿಮಾದಲ್ಲಿ ನಟಿಸಿದ್ದರು.

ಡಬಲ್ ಎಕ್ಸೆಲ್ ಸಿನಿಮಾ ನವೆಂಬರ್ 4 ಕ್ಕೆ ತೆರೆಗೆ ಬರಲಿದೆ. ಅಂದೇ ಇನ್ನೊಂದು ಬಾಲಿವುಡ್ ಚಿತ್ರ ಕರೀನಾ ಕಪೂರ್ ಅವರ ‘ಫೋನ್ ಭೂತ್’ ಸಿನಿಮಾ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT