ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡ್ಲ ಬೆಡಗಿಯ ‘ಕನಸು ಮಾರಾಟಕ್ಕಿದೆ’

Last Updated 26 ಮಾರ್ಚ್ 2020, 17:40 IST
ಅಕ್ಷರ ಗಾತ್ರ

ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇವರಿಗೆ ಸಿನಿಮಾದಲ್ಲಿ ನಟನೆ ಮಾಡುವ ಅವಕಾಶ ದೊರೆಯಿತು. ಪೋಷಕರ ಬೆಂಬಲದೊಂದಿಗೆ ಅರಸಿ ಬಂದ ಅವಕಾಶವನ್ನು ಬಿಡದೆ, ಇದೇ ಕ್ಷೇತ್ರದಲ್ಲಿ ಮುಂದುವರಿಯಬೇಕೆಂಬ ನಿರ್ಧಾರ ಕೈಗೊಂಡವರು ನವ್ಯಾ ಪೂಜಾರಿ.

ಯಾದವ ಮತ್ತು ಸುನೀತಾ ದಂಪತಿಯ ಪುತ್ರಿಯಾದ ಇವರು, ಮಂಗಳೂರಿನ ಎನ್‌ಐಟಿಕೆಯಲ್ಲಿ ಆರಂಭಿಕ ಶಿಕ್ಷಣವನ್ನು ಮುಗಿಸಿ, ಬ್ರಿಲಿಯೆಂಟ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಹಾಗೂ ನಿಟ್ಟೆ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ಕಾಲೇಜು ಹಂತದಿಂದಲೇ ನೃತ್ಯದಲ್ಲಿ ಅಪಾರ ಆಸಕ್ತಿಯನ್ನು ಹೊಂದಿದ್ದ ಇವರು ಅನೇಕ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಾಗೂ ಶಾಸ್ತ್ರೀಯ ನೃತ್ಯ ಪ್ರಕಾರವನ್ನು ಅಭ್ಯಸಿಸಿದ್ದಾರೆ. ಇವರು ಬಾಲ್ಯದಿಂದಲೇ ನಟಿಯಾಗಬೇಕೆಂಬ ಕನಸು ಕಟ್ಟಿಕೊಂಡಿದ್ದರು.

ನಟನೆಯ ಅವಕಾಶ ಬಂದಾಗ ಅದನ್ನು ಸರಿಯಾಗಿ ಉಪಯೋಗಿಸಿಕೊಂಡು ಈಗ ಕನ್ನಡದ ಸಿನಿಮಾರಂಗದಲ್ಲಿ ಪೋಸ್ಟರ್‌ಗಳ ಮೂಲಕವೇ ಖ್ಯಾತಿ ಪಡೆಯುತ್ತಿರುವ ಹಾಗೂ ಹೊಸಬರೇ ಸೇರಿ ಮಾಡುತ್ತಿರುವ ‘ಕನಸು ಮಾರಾಟಕ್ಕಿದೆ’ ಸಿನಿಮಾದಲ್ಲಿ ನಾಯಕಿ
ಯಾಗಿ ನಟಿಸುವ ಅವಕಾಶ ದೊರಕಿದೆ. ಇದರ ಜೊತೆಗೆ ತುಳು ಭಾಷೆಯ ‘ಇಂಗ್ಲಿಷ್’ ಸಿನಿಮಾದಲ್ಲಿ ಕನ್ನಡದ ‘ಎವರ್‌ಗ್ರೀನ್’ ನಟ ಅನಂತ್‌ನಾಗ್ ಅವರೊಂದಿಗೆ ನಟಿಸಿದ ಕೀರ್ತಿ ನವ್ಯಾ ಪೂಜಾರಿಗೆ ಸಲ್ಲುತ್ತದೆ.

‘ಕಂಪನಿಯಲ್ಲಿ ಕೆಲಸ ಮಾಡುವುದೆಂದರೆ ಯಾಂತ್ರಿಕ ಬದುಕು. ಆದರೆ, ಸಿನಿಮಾ ಕ್ಷೇತ್ರದಲ್ಲಿ ಅನೇಕ ವಿಚಾರಗಳನ್ನು ಕಲಿಯುವ ಅವಕಾಶ ನಮ್ಮದಾಗಿರುತ್ತದೆ. ಸಿನಿಮಾ ನನ್ನ ಆಸಕ್ತಿಯ ಕ್ಷೇತ್ರವು ಹೌದು. ಕಂಪನಿಯಲ್ಲಿ ಕಾರ್ಯನಿರ್ವಹಿಸಿಕೊಂಡು ಈಕ್ಷೇತ್ರದಲ್ಲಿ ಮುಂದುವರಿಯಲು ಸಾಧ್ಯವಿಲ್ಲವಾದ್ದರಿಂದ ನಾನು ನನ್ನ ಉದ್ಯೋಗವನ್ನು ಬಿಡಬೇಕಾಯಿತು’ ಎನ್ನುತ್ತಾರೆ ನವ್ಯಾ.

ಕನ್ನಡ ಮತ್ತು ತುಳು ಭಾಷೆಯಲ್ಲಿ ಮಾತ್ರವದ್ದಲ್ಲದೇ ಬ್ಯಾರಿ ಭಾಷೆಯ ‘ಟ್ರಿಪಲ್ ತಲಾಖ್’ ಸಿನಿಮಾದಲ್ಲಿ ನಟಿಸುವ ಮೂಲಕ ಕಠಿಣ ಪರಿಶ್ರಮ ಮತ್ತು ಆಸಕ್ತಿಯಿಂದ ಯಾವುದೇ ಕಾರ್ಯವನ್ನು ಕೈಗೊಂಡರೆ ಮಾತ್ರ ಯಶಸ್ಸು ಸಿಗುತ್ತದೆ ಎಂಬ ನಿಲುವು ನವ್ಯಾ ಪೂಜಾರಿ ಅವರದು.

‘ಮೊದಲ ಸಿನಿಮಾದಲ್ಲಿ ನನ್ನ ಜೊತೆ ಹಿರಿಯ ಕಲಾವಿದರು ನಟಿಸಿದ್ದರಿಂದ ಆತಂಕ ಮನೆ ಮಾಡಿತ್ತು. ಕೋಸ್ಟಲ್‌ವುಡ್‌ನ ಹಿರಿಯ ಕಲಾವಿದರಾದ ಅರವಿಂದ ಬೋಳಾರ್, ನವೀನ್ ಡಿ. ಪಡೀಲ್‌ ಅವರಂತಹ ದಿಗ್ಗಜರೊಂದಿಗೆ ಬೆರೆತು ಅವರಿಂದ ಅನೇಕ ವಿಚಾರಗಳನ್ನು ಕಲಿಯುವ ಅವಕಾಶ ನನ್ನದಾಯಿತು’ ಎನ್ನುತ್ತಾರೆ ತುಳುಚಿತ್ರರಂಗದ ಬೆಡಗಿ ನವ್ಯಾ ಪೂಜಾರಿ.

ಹೀಗೆ ‘ಬಿಂದಾಸ್ ಗೂಗ್ಲಿ’ ಮತ್ತು ‘ಕನಸು ಮಾರಾಟಕ್ಕಿದೆ’ ಎಂಬ ಕನ್ನಡ ಭಾಷೆಯ ಸಿನಿಮಾಗಳಲ್ಲಿ, ಕೋಸ್ಟಲ್‌ವುಡ್‌ನ ಮೊದಲ ಗ್ರಾಫಿಕ್ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿರುವ ‘ಉಮಿಲ್’, ಈಗಾಗಲೇ ರಿಲೀಸ್‌ಗೆ ಸಿದ್ಧಗೊಂಡಿರುವ ‘ಇಂಗ್ಲಿಷ್’ ಸಿನಿಮಾ ಮತ್ತು ಮುಂದಿನ ದಿನಗಳಲ್ಲಿ ಸದ್ದು ಮಾಡಲಿರುವ ‘ಗಬ್ಬರ್ ಸಿಂಗ್’ ಹಾಗೂ ‘ಭೋಜರಾಜ ಎಂಬಿಬಿಎಸ್’ ಸಿನಿಮಾಗಳಲ್ಲಿ ಇವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

‘ಸಿನಿಮಾ ಕ್ಷೇತ್ರದಲ್ಲಿ ಅನೇಕ ಕಷ್ಟಗಳು ಎದುರಾಗಬಹುದು ಅವುಗಳನ್ನೆಲ್ಲಾ ಮೆಟ್ಟಿ ನಿಂತು ಮುಂದುವರಿಯುವ ಸಾಮರ್ಥ್ಯ ಮತ್ತು ಗಟ್ಟಿತನದ ನಿರ್ಧಾರವನ್ನು ಕೈಗೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ವೈಯಕ್ತಿಕ ಮತ್ತು ಔದ್ಯೋಗಿಕ ವಿಚಾರಗಳನ್ನು ಸರಿದೂಗಿಸಿಕೊಂಡು ಹೋಗಬೇಕು’ ಎನ್ನುತ್ತಾರೆ ನವ್ಯಾ ಪೂಜಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT