ಡ್ರಗ್ ಮಾಫಿಯಾ: ಸಿಸಿಬಿ ಪೊಲೀಸರಿಂದ ನಟಿ ಸಂಜನಾ ಸ್ನೇಹಿತ ರಾಹುಲ್ ಬಂಧನ

ಬೆಂಗಳೂರು: ಡ್ರಗ್ ಜಾಲದಲ್ಲಿ ಭಾಗಿಯಾಗಿದ್ದ ಆರೋಪದಡಿ ನಟಿ ಸಂಜನಾ ಗುರ್ಲಾನಿ ಅವರ ಸ್ನೇಹಿತ ಎನ್ನಲಾದ ರಾಹುಲ್ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನಟಿ ರಾಗಿಣಿ ದ್ವಿವೇದಿ ಹಾಗೂ ಅವರ ಸ್ನೇಹಿತನಾದ ಸಾರಿಗೆ ಇಲಾಖೆ ನೌಕರ ರವಿಶಂಕರ್ ಬಂಧನದ ಬೆನ್ನಲ್ಲೇ ಸಿಸಿಬಿ ಪೊಲೀಸರು, ರಾಹುಲ್ನನ್ನು ಸೆರೆ ಹಿಡಿದಿದ್ದಾರೆ. ಗುರುವಾರವಷ್ಟೇ ರಾಹುಲ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಕಾಟನ್ಪೇಟೆ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ನಲ್ಲಿ ರಾಹುಲ್ನನ್ನೂ ಆರೋಪಿಯನ್ನಾಗಿ ಮಾಡಲಾಗಿದೆ.
ಡ್ರಗ್ ಸೇವನೆ ಮಾಡುತ್ತಿದ್ದ ರಾಹುಲ್, ತನ್ನದೇ ತಂಡ ಕಟ್ಟಿಕೊಂಡು ಡ್ರಗ್ ಸರಬರಾಜು ಸಹ ಮಾಡುತ್ತಿದ್ದ. ಅದಕ್ಕೆ ಹಲವರು ಸಹಕಾರ ನೀಡುತ್ತಿದ್ದರು ಎಂದು ಸಿಸಿಬಿ ಪೊಲೀಸರು ಹೇಳಿದರು.
ನೋಟಿಸ್ ಸಾಧ್ಯತೆ: ಬಂಧಿತ ಆರೋಪಿ ರಾಹುಲ್ ಜೊತೆಯಲ್ಲಿ ಪಾರ್ಟಿಗಳಲ್ಲಿ ಪಾಲ್ಗೊಂಡಿದ್ದ ಆರೋಪದಡಿ ನಟಿ ಸಂಜನಾ ಅವರಿಗೂ ಸಿಸಿಬಿ ನೋಟಿಸ್ ನೀಡುವ ಸಾಧ್ಯತೆ ಇದೆ.
ಇದನ್ನೂ ಓದಿ... ಡ್ರಗ್ ಮಾಫಿಯಾ: ಸಿಸಿಬಿ ಪೊಲೀಸರಿಂದ ನಟಿ ರಾಗಿಣಿ ದ್ವಿವೇದಿ ಬಂಧನ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.