ಸೋಮವಾರ, ಮಾರ್ಚ್ 1, 2021
26 °C

ತೆಲುಗಿನಲ್ಲಿ ದೃಶ್ಯಂ–2 ರಿಮೇಕ್‌; ಕಥೆಯಲ್ಲೇನಿದೆ ಗೊತ್ತಾ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಲೆಯಾಳಂನಲ್ಲಿ ಮೂಡಿಬಂದ ‘ದೃಶ್ಯಂ–2’ ಚಿತ್ರ ತೆಲುಗಿನಲ್ಲಿ ರಿಮೇಕ್‌ ಆಗಲು ಸಜ್ಜಾಗಿದೆ. ನಿರ್ದೇಶಕ ಜೀತು ಜೋಸೆಫ್‌ ಅವರು ತೆಲುಗಿನ ಖ್ಯಾತ ನಟ ವೆಂಕಟೇಶ್‌ ಅವರೊಂದಿಗೆ ಸೇರಿ ರಿಮೇಕ್‌ಗೆ ಸಿದ್ಧವಾಗಿದ್ದಾರೆ. ಈ ಸುದ್ದಿಯನ್ನು ಜೀತು ಅವರು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ.

ಮಾರ್ಚ್‌ನಿಂದ ‘ದೃಶ್ಯಂ - 2’ ತೆಲುಗು ಆವೃತ್ತಿಯ ಚಿತ್ರೀಕರಣ ಆರಂಭವಾಗಲಿದೆ. ತೆಲುಗಿನಲ್ಲಿ ಜೀತು ಅವರದ್ದು ಮೊದಲ ಪ್ರಯೋಗವಿದು. ಮಲೆಯಾಳಂನಲ್ಲಿ ಇದೇ ಚಿತ್ರದಲ್ಲಿ ಮೋಹನ್‌ಲಾಲ್‌ ಅವರ ಅಭಿನಯ ಇದೆ. ಫೆ. 19ರಂದು ಮಲೆಯಾಳಂ ಒಟಿಟಿ ವೇದಿಕೆಯಲ್ಲಿ ಇದು ಬಿಡುಗಡೆ ಆಗಿತ್ತು. 

ಕಥೆಯಲ್ಲೇನಿದೆ?

ಕುಟುಂಬವನ್ನು ರಕ್ಷಿಸಲು ನಾಯಕ ಪೊಲೀಸ್‌ ಮಹಾ ನಿರ್ದೇಶಕರ ಮಗನನ್ನು ಕೊಲ್ಲುತ್ತಾನೆ. ನಾಯಕನ ಮೇಲೆ ಅನುಮಾನ ಬಲವಾಗಿದ್ದರೂ ಅದನ್ನು ಸಾಬೀತು ಮಾಡಲು ಪೊಲೀಸರು ಸಾಕ್ಷ್ಯ ಸಂಗ್ರಹಿಸುವಲ್ಲಿ ವಿಫಲರಾಗುತ್ತಾರೆ. ಹೊಸದಾಗಿ ಕಟ್ಟುತ್ತಿರುವ ಪೊಲೀಸ್‌ ಠಾಣೆಯ ಕಟ್ಟಡದೊಳಗೇ ನಾಯಕ ಮೃತದೇಹವನ್ನು ಹೂತಿರುತ್ತಾನೆ. ಅಲ್ಲಿಗೆ ಮೊದಲ ಭಾಗದ ಚಿತ್ರ ಅಂತ್ಯಗೊಳ್ಳುತ್ತದೆ. ಎರಡನೇ ಭಾಗದಲ್ಲಿ ಇದೇ ಪ್ರಕರಣದೊಂದಿಗೆ ಹೋರಾಡುವ ನಾಯಕನ ಕಥೆ ಮುಂದುವರಿಯುತ್ತದೆ.

ಮಲೆಯಾಳಂ ಚಿತ್ರದಲ್ಲಿ ಮೀನಾ, ಅನ್ಸಿಬಾ ಹಸನ್, ಎಸ್ತರ್ ಅನಿಲ್, ಆಶಾ ಶರತ್, ಮತ್ತು ಸಿದ್ದೀಕ್ ಇತರರು ನಟಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು