ಶುಕ್ರವಾರ, ಸೆಪ್ಟೆಂಬರ್ 20, 2019
27 °C

ಪೊಗರು' ಶೂಟಿಂಗ್ ಸೆಟ್‌ಗೆ ಬೆಂಕಿ: ನಟ ಧ್ರುವ ಸರ್ಜಾ ಪಾರು

Published:
Updated:

ಬೆಂಗಳೂರು: ಹೈದರಾಬಾದ್ ನಲ್ಲಿ ನಡೆಯುತ್ತಿರುವ 'ಪೊಗರು' ಚಿತ್ರದ ಶೂಟಿಂಗ್ ಸೆಟ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ನಟ ಧ್ರುವ ಸರ್ಜಾ ಕೂದಲೆಳೆಯ ಅಂತರದಿಂದ ಪಾರಾಗಿದ್ದಾರೆ.

ನಂದಕಿಶೋರ್ ನಿರ್ದೇಶನದ ಈ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಯುತ್ತಿದೆ. ಇದಕ್ಕಾಗಿ ಬೃಹತ್ ಸೆಟ್ ಹಾಕಲಾಗಿದೆ. ಫೈಟಿಂಗ್​ ಶೂಟ್‌ ನಡೆಯುತ್ತಿದ್ದ ವೇಳೆ ಈ ಸೆಟ್‌ಗೆ ಬೆಂಕಿ ತಗುಲಿದೆ. ಸೆಟ್​ ಬಹುತೇಕ ಸುಟ್ಟು ಕರಕಲಾಗಿದೆ. 

ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಮತ್ತು‌ ಮಲಯಾಳ ಭಾಷೆಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ನಟಿ ರಶ್ಮಿಕಾ ಮಂದಣ್ಣ ಅವರು ಧ್ರುವ ಸರ್ಜಾಗೆ ಜೋಡಿಯಾಗಿದ್ದಾರೆ.

Post Comments (+)