ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಣೇಶ ಹಬ್ಬಕ್ಕೆ ದುಲ್ಕರ್ ಸಲ್ಮಾನ್ ಅಭಿನಯದ ’ಲಕ್ಕಿ ಭಾಸ್ಕರ್’ ಬಿಡುಗಡೆ

Published 9 ಜುಲೈ 2024, 11:31 IST
Last Updated 9 ಜುಲೈ 2024, 11:31 IST
ಅಕ್ಷರ ಗಾತ್ರ

ಮುಂಬೈ: ನಟ ದುಲ್ಕರ್ ಸಲ್ಮಾನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಲಕ್ಕಿ ಭಾಸ್ಕರ್’ ಗಣೇಶ ಹಬ್ಬದಂದು (2024 ಸೆಪ್ಟಂಬರ್ 7) ವಿಶ್ವದಾದ್ಯಂತ ಬಿಡುಗಡೆಯಾಲಿದೆ ಎಂದು ಚಿತ್ರತಂಡ ತಿಳಿಸಿದೆ.

ಚಿತ್ರ ಬಿಡುಗಡೆ ಸಂಬಂಧ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ದುಲ್ಕರ್ ಸಲ್ಮಾನ್, ಬಹುಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದ್ದು, ಗಣೇಶ ಹಬ್ಬಕ್ಕೆ ನಿಮ್ಮ ಮುಂದೆ ಚಿತ್ರ ಬರಲಿದೆ ಎಂದು ಬರೆದುಕೊಂಡಿದ್ದಾರೆ.

’ವಾತಿ’ ಖ್ಯಾತಿಯ ನಿರ್ದೇಶಕ ವೆಂಕಿ ಅಟ್ಲೂರಿ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದು, ‘ಸಿತಾರಾ ಎಂಟರ್‌ಟೈನ್‌ಮೆಂಟ್‌‘ ಮತ್ತು ‘ಫಾರ್ಚೂನ್‌ ಫೋರ್‌ ಸಿನಿಮಾಸ್‌‘ ಜಂಟಿಯಾಗಿ ನಿರ್ಮಿಸಿದೆ.

ಈ ಚಿತ್ರದಲ್ಲಿ ದುಲ್ಕರ್, ಬ್ಯಾಂಕರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅನಿರೀಕ್ಷಿತವಾಗಿ ಆಗಾಧ ಹಣವು ಆತನಿಗೆ ಲಭಿಸಿದಾಗ ಆತ ಎದುರಿಸುವ ಸವಾಲುಗಳ ಸುತ್ತ ಚಿತ್ರ ಕಥೆಯನ್ನು ಹೆಣೆಯಲಾಗಿದೆ. ದುಲ್ಕರ್ ಸಲ್ಮಾನ್‌ಗೆ ಜೋಡಿಯಾಗಿ ಮೀನಾಕ್ಷಿ ಚೌಧರಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ತೆಲುಗು, ಮಲಯಾಳಂ, ತಮಿಳು, ಹಿಂದಿ ಭಾಷೆಗಳಲ್ಲಿ ತೆರೆ ಮೇಲೆ ಬರಲಿದೆ.

’ಹೇ ಸಿನಾಮಿಕಾ’ ’ಓಕೆ ಕಣ್ಮಣಿ’, ಕಿಂಗ್ ಆಫ್ ಕೋಥಾ ಚಿತ್ರಗಳ ಮೂಲಕ ಹೆಚ್ಚು ಖ್ಯಾತಿ ಗಳಿಸಿರುವ ದುಲ್ಕರ್ ಸಲ್ಮಾನ್, ಇತ್ತೀಚೆಗೆ ಗನ್ಸ್ & ಗುಲಾಬ್ಸ್ ವೆಬ್‌ ಸರಣಿಯಲ್ಲಿಯೂ ಕಾಣಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT