ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

11ನೇ ದಿನಕ್ಕೆ ₹900 ಕೋಟಿ ಗಡಿ ದಾಟಿದ 'Kalki 2898 AD' ಗಳಿಕೆ

Published 8 ಜುಲೈ 2024, 11:18 IST
Last Updated 8 ಜುಲೈ 2024, 11:18 IST
ಅಕ್ಷರ ಗಾತ್ರ

ಮುಂಬೈ: ಬಿಡುಗಡೆಯಾದ 11ನೇ ದಿನವೂ ಬಾಕ್ಸ್ ಆಫೀಸ್‌ನಲ್ಲಿ ಆಧಿಪತ್ಯ ಮುಂದುವರಿಸಿರುವ ‘ಕಲ್ಕಿ 2898 ಎಡಿ’ ಚಿತ್ರವು ವಿಶ್ವದಾದ್ಯಂತ ₹900 ಕೋಟಿ ಗಳಿಕೆ ಕಂಡಿದೆ ಎಂದು ಚಿತ್ರ ತಯಾರಕರು ತಿಳಿಸಿದ್ದಾರೆ.

ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಮತ್ತು ಪ್ರಭಾಸ್ ಮುಖ್ಯ ಭೂಮಿಕೆಯಲ್ಲಿರುವ ಬಹುತಾರಾಗಣದ ಚಿತ್ರವು ಗಳಿಕೆಯ ಸ್ಪರ್ಧೆಯಲ್ಲಿ ಮುಂಚೂಣೆಯಲ್ಲಿದೆ.

ಚಿತ್ರದ ಪಾತ್ರವೊಂದರಲ್ಲಿ ಪ್ರಭಾಸ್ ಕಾಣಿಸಿಕೊಂಡಿರುವ ಪೋಸ್ಟರ್ ಅನ್ನು ಹಂಚಿಕೊಂಡಿರುವ ಚಿತ್ರ ತಯಾರಕರು, ಗಳಿಕೆಯ ಮಾಹಿತಿ ಬಿಚ್ಚಿಟ್ಟಿದ್ದಾರೆ. ‘ಎಪಿಕ್ ಮಹಾ ಬ್ಲಾಕ್ ಬಸ್ಟರ್ ವಿಶ್ವದಾದ್ಯಂತ 900+ ಕೋಟಿ’ ಎಂದು ಅಡಿ ಬರಹ ನೀಡಲಾಗಿದೆ. ಮಾಂತ್ರಿಕ ಮೈಲಿಗಲ್ಲಿನ ಕಡೆಗೆ ಮುನ್ನುಗ್ಗುತ್ತಿದೆ...#EpicBlockbusterKalki’ ಎಂದು ಬರೆಯಲಾಗಿದೆ.

ಮಹಾನಟಿ, ಎವಡೆ ಸುಬ್ರಹ್ಮಣ್ಯಂ ಸಿನಿಮಾಗಳನ್ನು ನಿರ್ದೇಶಿಸಿದ್ದ ಖ್ಯಾತ ನಿರ್ದೇಶಕ ನಾಗ್ ಅಶ್ವಿನ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಬಿಡುಗಡೆಯಾದ ಮೊದಲ ವಾರದಲ್ಲೇ ಚಿತ್ರದ ಗಳಿಕೆ ₹500 ಗಡಿ ದಾಟಿತ್ತು. ಇದೇ ವೇಗದಲ್ಲಿ ಗಳಿಕೆ ಮುಂದುವರಿದರೆ ಚಿತ್ರ ₹1000 ಕೋಟಿ ಗಡಿ ದಾಟುವ ನಿರೀಕ್ಷೆ ಇದೆ.

ಅಮಿತಾಭ್ ಬಚ್ಚನ್ ಈ ಚಿತ್ರದಲ್ಲಿ ಚಿರಂಜೀವಿ ಅಶ್ವತ್ಥಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಚಿತ್ರದ ಬಗ್ಗೆ ತಮ್ಮ ಅಭಿಮಾನವನ್ನು ತಮ್ಮ ವೈಯಕ್ತಿಕ ಬ್ಲಾಗ್‌ನಲ್ಲಿ ಸುದೀರ್ಘ ಬರಹದ ಮೂಲಕ ವ್ಯಕ್ತಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT