ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನನ್ನ ಪಾತ್ರವನ್ನು ಶಾರುಖ್ ಖಾನ್ ನಕಲು ಮಾಡಿದ್ದರು: ಪಾಕಿಸ್ತಾನಿ ನಟ ತೌಕೀರ್

Published 9 ಜುಲೈ 2024, 4:54 IST
Last Updated 9 ಜುಲೈ 2024, 4:54 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ‘‘ಕಭಿ ಅಲ್ವಿದಾ ನಾ ಕೆಹನಾ' ಚಿತ್ರದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್‌ ಅವರ ಪಾತ್ರವು 'ಪರ್ವಾಜ್' ನಾಟಕದ ನನ್ನ ಪಾತ್ರದ ನೇರ ನಕಲಾಗಿದೆ’ ಎಂದು ಪಾಕಿಸ್ತಾನಿ ಹಿರಿಯ ನಟ ತೌಕೀರ್ ನಾಸೀರ್ ಆರೋಪ ಮಾಡಿದ್ದಾರೆ.

‘ಜಬರ್ದಸ್ತ್ ವಿತ್ ವಾಸಿ ಶಾ’ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನ ವೇಳೆ ಮಾತನಾಡಿದ ನಾಸೀರ್, ‘‘ಕಭಿ ಅಲ್ವಿದಾ ನಾ ಕೆಹನಾ‘ ಚಿತ್ರವು ಪಾಕಿಸ್ತಾನಿ ಲೇಖಕ ಮುಸ್ತಾನ್ಸರ್ ಹುಸೇನ್ ತರಾರ್ ಅವರ ‘ಪರ್ವಾಜ್’ ಕಥೆಯನ್ನಾಧರಿಸಿದ ಚಿತ್ರವಾಗಿದ್ದು, ಇದಕ್ಕಾಗಿ ಚಿತ್ರತಂಡ ಹುಸೇನ್‌ ಅವರಿಗಾಗಲಿ, ನನಗಾಗಲಿ ಯಾವುದೇ ಗೌರವ ನೀಡಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಚಿತ್ರದಲ್ಲಿ ಕಾಲಿಗೆ ಗಾಯವಾಗುವ ಒಂದು ದೃಶ್ಯವಿದೆ. ಈ ದೃಶ್ಯವನ್ನು ನಮ್ಮ ನಾಟಕದಿಂದ ನೇರವಾಗಿ ಕದಿಯಲಾಗಿದೆ’ ಎಂದು ಇದೇ ವೇಳೆ ಹೇಳಿದರು.

‘ಶಾರುಖ್ ಖಾನ್ ಒಬ್ಬ ಪ್ರತಿಭಾವಂತ ನಟ. ಆದರೆ ಅವರ ಕಡೆಯಿಂದ ನಮಗೆ ಗೌರವ ಸಿಗದಿರುವುದು ಬೇಸರ ತಂದಿದೆ' ಎಂದು ಹೇಳಿಕೊಂಡಿದ್ದಾರೆ.

‘ಚಿತ್ರದ ನಿರ್ದೇಶಕ ಕರಣ್‌ ಜೋಹರ್ ಕೂಡ ಕಥೆ ನಕಲು ಮಾಡಿದ್ದು, ಇದಕ್ಕಾಗಿ ಕನಿಷ್ಠ ಗೌರವ ಕೊಡುವ ಗೋಜಿಗೆ ಹೋಗಲಿಲ್ಲ’ ಎಂದು ಅಸಮಾಧಾನ ಹೊರಹಾಕಿದರು.

2006ರಲ್ಲಿ ಬಿಡುಗಡೆಗೊಂಡ ‘ಕಭಿ ಅಲ್ವಿದಾ ನಾ ಕೆಹನಾ’ ಚಿತ್ರದಲ್ಲಿ ನಟರಾದ ಶಾರುಖ್ ಖಾನ್‌, ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್, ನಟಿಯರಾದ ರಾಣಿ ಮುಖರ್ಜಿ, ಪ್ರೀತಿ ಜಿಂಟಾ ಮತ್ತು ಕಿರಣ್ ಖೇರ್ ನಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT