ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಭೀಮ’ನೊಂದಿಗೆ ಬಂದ ದುನಿಯಾ ವಿಜಯ್‌ ಪುತ್ರ ಸಾಮ್ರಾಟ್‌

Published 21 ಸೆಪ್ಟೆಂಬರ್ 2023, 23:30 IST
Last Updated 21 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ತಮ್ಮದೇ ನಿರ್ದೇಶನದ ‘ಸಲಗ’ ಸಿನಿಮಾ ಸೂಪರ್‌ ಹಿಟ್‌ ಆದ ನಂತರ ದುನಿಯಾ ವಿಜಯ್‌ ‘ಭೀಮ’ ಸಿನಿಮಾಕ್ಕೆ ಕೈ ಹಾಕಿದ್ದರು. ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಹಾಡೊಂದು ಹೊರಬಂದಿದೆ.

ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡಿರುವ ಸಿನಿಮಾದ ‘ದ ಸೈಕ್ ಸಾಂಗ್’ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ದುನಿಯಾ ವಿಜಯ್, ಈ ಚಿತ್ರದ ಮೂಲಕ ತಮ್ಮ ಪುತ್ರ ಸಾಮ್ರಾಟ್‌ನನ್ನೂ ಕೂಡ ಸ್ಯಾಂಡಲ್‌ವುಡ್‌ಗೆ ಪರಿಚಯಿಸುತ್ತಿದ್ದಾರೆ. ಸಾಮ್ರಾಟ್ ‘ಭೀಮ’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. 

‘ಬ್ಯಾಡ್ ಬಾಯ್ಸ್ ಆನ್ ದಿ ಸ್ಟ್ರೀಟ್’ ಎಂದು ಪ್ರಾರಂಭವಾಗುವ ಗೀತೆಯಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್ ಪದಗಳನ್ನು ಸೇರಿಸಿ ರ‍್ಯಾಪ್ ಮಾಡಲಾಗಿದೆ. ಚರಣ್ ರಾಜ್ ಸಂಗೀತ ಸಂಯೋಜನೆಯಲ್ಲಿ ಹಾಡು ಮೂಡಿ ಬಂದಿದೆ.

ರಾಹುಲ್ ಡಿಟ್ಟೋ, ನಾಗಾರ್ಜುನ್ ಶರ್ಮಾ ಮತ್ತು ಎಂ.ಸಿ.ಬಿಜ್ಜು ಈ ಹಾಡನ್ನು ಬರೆದಿದ್ದು, ರಾಹುಲ್ ಮತ್ತು ಬಿಜ್ಜು ಹಾಡಿದ್ದಾರೆ. ಕೃಷ್ಣ ಸಾರ್ಥಕ್, ಜಗದೀಶ್ ಗೌಡ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶಿವಸೇನಾ ಛಾಯಾಗ್ರಹಣವಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT