ಶನಿವಾರ, ಜೂನ್ 19, 2021
21 °C
ಜನ್ಮದಿನ ಸಂದರ್ಭದಲ್ಲಿ ತಲ್ವಾರ್‌ ಬಳಕೆ

ಪೊಲೀಸರಿಗೆ ವಿವರಣೆ ನೀಡಿದ ದುನಿಯಾ ವಿಜಯ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಭಿಮಾನಿಗಳ ಸಮ್ಮುಖದಲ್ಲಿ ಇದೇ 19ರಂದು ತಮ್ಮ 46ನೇ ಜನ್ಮದಿನ ಆಚರಣೆ ವೇಳೆ ಕತ್ತಿಯಲ್ಲಿ (ತಲ್ವಾರ್) ಕೇಕ್ ಕತ್ತರಿಸಿದ್ದ ನಟ ದುನಿಯಾ ವಿಜಯ್ ಗಿರಿನಗರ ಠಾಣೆಯಲ್ಲಿ ಮಂಗಳವಾರ ವಿಚಾರಣೆಗೆ ಹಾಜರಾದರು.

ಶಸ್ತ್ರಾಸ್ತ್ರಗಳ ಕಾಯ್ದೆ ಉಲ್ಲಂಘಿಸಿದ್ದಾರೆಂದು ವಿಜಯ್ ಅವರಿಗೆ ಗಿರಿನಗರ ಪೊಲೀಸರು ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಠಾಣೆಗೆ ಬಂದ ಅವರು, ಸುಮಾರು ಎರಡು ಗಂಟೆಗಳು ಪೊಲೀಸರ ಎದುರು ವಿವರಣೆ ನೀಡಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ವಿಜಯ್, 'ನನ್ನಿಂದ ತಪ್ಪಾಗಿದೆ. ಮತ್ತೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ. ಮತ್ತೆ ವಿಚಾರಣೆಗೆ ಹಾಜರಾಗುತ್ತೇನೆ’ ಎಂದರು.

‘ಜನ್ಮದಿನದ ಆಚರಣೆ ಸಂದರ್ಭದಲ್ಲಿ ತೊಂದರೆಯಾಗಿದೆ ಎಂದು ಅಕ್ಕಪಕ್ಕದವರು ದೂರಿದ್ದಾರೆ. ಇನ್ನು ಮುಂದೆ ಆ ರೀತಿ ಆಗದಂತೆಯೂ ನೋಡಿಕೊಳ್ಳುತ್ತೇನೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು