ಸೋಮವಾರ, ಜನವರಿ 25, 2021
27 °C

ದುರ್ಗಮತಿ ಡಿ. 11ರಂದು ಅಮೆಝಾನ್‌ ಪ್ರೈಮ್‌ನಲ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ದುರ್ಗಮತಿ’ ಚಿತ್ರ (ತೆಲುಗಿನ ‘ಭಾಗಮತಿ’ಯ ರಿಮೇಕ್‌) ಡಿ.11ರಂದು ಅಮೆಝಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ. 

2018ರಲ್ಲಿ ಬಿಡುಗಡೆಯಾದ ಭಾಗಮತಿ ಚಿತ್ರವೂ ತೆಲುಗಿನಲ್ಲಿ ಸೂಪರ್‌ಹಿಟ್‌ ಆಗಿತ್ತು. ಈಗ ಹಿಂದಿಯಲ್ಲೂ ಈ ಚಿತ್ರ ಅದೇ ನಿರೀಕ್ಷೆ ಹೊಂದಿದೆ. 

ಭೂಮಿ ಪೆಡ್ನೇಕರ್‌ ‘ದುರ್ಗಮತಿ’ಯಲ್ಲಿ ಐಎಎಸ್‌ ಅಧಿಕಾರಿಯ ಪಾತ್ರ ನಿರ್ವಹಿಸುತ್ತಿದ್ದಾರೆ. ದೇಶದ ಆಡಳಿತ ವ್ಯವಸ್ಥೆಯೊಳಗೆ ಕಿರುಕುಳಕ್ಕೊಳಗಾದ ಐಎಎಸ್‌ ಅಧಿಕಾರಿ ಚಂಚಲ್‌ ಚೌಹಾನ್‌ ಗೀಳಿಗೆ ಒಳಗಾಗುತ್ತಾಳೆ. ಅವಳಿಗೆ ಏನಾಗುತ್ತದೆ ಎಂಬುದು ಚಿತ್ರದ ಕಥಾವಸ್ತು. 

ಆಕೆ ಸಮ್ಮೋಹನ ಶಕ್ತಿಯ ದೇವತೆಯಾಗಿ ಬದಲಾಗುವುದು, ಒಂದಿಷ್ಟು ಪವಾಡಗಳೆನ್ನುವ ಸನ್ನಿವೇಶ ಸೃಷ್ಟಿಸುವುದು ಚಿತ್ರದ ಮನೋರಂಜನಾತ್ಮಕ ಅಂಶಗಳು. 

ಟ್ರೈಲರ್‌ನಲ್ಲೂ ದುರ್ಗಮತಿಯ ಪಾತ್ರದ ನಾಟಕೀಯ ಅಂಶಗಳನ್ನು ತೋರಿಸಲಾಗಿದೆ. ಚಿತ್ರವು ಆಸಕ್ತಿದಾಯಕವಾಗಿದೆ ಎಂಬ ಕುತೂಹಲ ಹುಟ್ಟಿಸುವಂತೆ ಮಾಡಿದೆ.

ಅರ್ಷದ್‌ ವಾರ್ಸಿ, ಮಹಿ ಗಿಲ್‌, ಕರನ್‌ ಕಪಾಡಿಯಾ ಮತ್ತು ಜಿಸ್ಸು ಸೆಂಗುಪ್ತಾ ತಾರಾಗಣದಲ್ಲಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು