ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದ್ವಂದ್ವ’ದೊಂದಿಗೆ ಬಂದ ತಿಲಕ್‌: ಆಸಿಯಾಫಿರ್ದೋಸಿ, ಅನಿತಾ ಭಟ್‌ ಜೋಡಿ

Published 20 ಸೆಪ್ಟೆಂಬರ್ 2023, 19:43 IST
Last Updated 20 ಸೆಪ್ಟೆಂಬರ್ 2023, 19:43 IST
ಅಕ್ಷರ ಗಾತ್ರ

ತಿಲಕ್ ಮತ್ತು ಕಿರುತೆರೆ ನಟಿ ಆಸಿಯಾಫಿರ್ದೋಸಿ ಮುಖ್ಯ ಭೂಮಿಕೆಯಲ್ಲಿರುವ ‘ದ್ವಂದ್ವ’ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಎಲ್.ಭರತ್ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಕಾಮನ್‌ಮ್ಯಾನ್ ಪ್ರೊಡಕ್ಷನ್ ಅಡಿಯಲ್ಲಿ ಪ್ರದೀಪ್‌ ಕೌದಳ್ಳಿ ಬಂಡವಾಳ ಹೂಡುತ್ತಿದ್ದಾರೆ.

‘ಸೈನ್ಸ್ ಫಿಕ್ಷನ್ ಎಳೆಯನ್ನು ಹೊಂದಿರುವ ಚಿತ್ರವಿದು. ಹೈಪರ್‌ಟೈಮಿಸಿಯಾ ಕಾಯಿಲೆ ಇರುವ ಹುಡುಗಿಯು ಒಂದು ಸಲ ಏನನ್ನಾದರೂ ನೋಡಿದರೆ 10-20 ವರ್ಷದ ನೆನಪಿನಲ್ಲಿ ಇಟ್ಟುಕೊಳ್ಳುತ್ತಾಳೆ. ಇದನ್ನು ಅರಿತುಕೊಂಡ ಪ್ರಭಾವಿ ರಾಜಕಾರಣಿಗಳು ಆಕೆಯನ್ನು ಯಾವ ರೀತಿ ಉಪಯೋಗಿಸಿಕೊಳ್ಳುತ್ತಾರೆ. ಇದರಿಂದ ಅವಳ ಬದುಕು ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ’ ಎಂದರು ನಿರ್ದೇಶಕ ಭರತ್‌.

ಕಿರುತೆರೆ ನಟಿಯರಾದ ಆಸಿಯಾಫಿರ್ದೋಸಿ ಹಾಗೂ ನಯನ ನಾಯಕಿಯರು. ಉಳಿದಂತೆ ಅನಿತಾ ಭಟ್, ಶೋಭರಾಜ್, ದಿನೇಶ್‌ ಮಂಗಳೂರು, ಬಲರಾಜವಾಡಿ ಮೊದಲಾದವರು ತಾರಾಗಣದಲ್ಲಿದ್ದಾರೆ. ಎರಡು ಹಾಡುಗಳಿಗೆ ಆಕಾಶ್‌ ಪರ್ವ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಮತ್ತು ಸಂಕಲನ ಋಷಿಕೇಶ್ ಅವರದ್ದು. ಬೆಂಗಳೂರು, ಮೂಡಿಗೆರೆ, ಸಕಲೇಶಪುರ, ಊಟಿ ಮೊದಲಾದೆಡೆ ಚಿತ್ರೀಕರಣಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT