ನಟ ದಿಗಂತ್ ನಟನೆಯ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಜೂನ್ 13ರಂದು ತೆರೆಕಾಣುತ್ತಿದ್ದು, ಚಿತ್ರದ ಟ್ರೇಲರ್ ಅನ್ನು ಇತ್ತೀಚೆಗೆ ನಟ ಕಿಚ್ಚ ಸುದೀಪ್ ಬಿಡುಗಡೆಗೊಳಿಸಿದರು.

ಭಿನ್ನವಾದ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಸಮರ್ಥ್ ಬಿ. ಕಡಕೊಳ್ ಆ್ಯಕ್ಷನ್ ಕಟ್ ಹೇಳಿದ್ದು, ಸಿನಿಮಾದ ಶೀರ್ಷಿಕೆ ಹೇಳುವಂತೆಯೇ ಎಡಗೈ ಬಳಸುವವರ ಕಷ್ಟಗಳ ಸುತ್ತ ಚಿತ್ರದ ಕಥೆಯಿದೆ. ಟ್ರೇಲರ್ ಅನ್ನು ಭಿನ್ನವಾಗಿ ಪ್ರಸ್ತುತಪಡಿಸಲಾಗಿದ್ದು, ಡಾರ್ಕ್ ಕಾಮಿಡಿ ಜಾನರ್ನಲ್ಲಿ ಚಿತ್ರದ ಕಥಾಹಂದರವಿದೆ. ಸಿನಿಮಾದಲ್ಲಿ ದಿಗಂತ್ ಜೊತೆ ನಿಧಿ ಸುಬ್ಬಯ್ಯ ಮತ್ತು ಧನು ಹರ್ಷ ನಟಿಸಿದ್ದು, ‘ಪಂಚರಂಗಿ’ ಸಿನಿಮಾ ಬಳಿಕ ದಿಗಂತ್ ಮತ್ತು ನಿಧಿ ಸುಬ್ಬಯ್ಯ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ‘ಲೋಹಿತ್ ರಾಜೇಶ್’ ಎಂಬ ಪಾತ್ರದಲ್ಲಿ ದಿಗಂತ್ ಪ್ರೇಕ್ಷಕರ ಎದುರಿಗೆ ಬರಲಿದ್ದಾರೆ.

‘ಜಗತ್ತಿನಲ್ಲಿ ಶೇಕಡ 10ರಷ್ಟು ಎಡಗೈ ಬಳಸುವವರಿದ್ದೂ, ಇಡೀ ಜಗತ್ತು ವಸ್ತುಗಳೆಲ್ಲವೂ ಬಲಗೈಯವರಿರಾಗಿ ವಿನ್ಯಾಸಗೊಂಡಿವೆ. ಇಂತಹ ಸ್ಥಿತಿಯಲ್ಲಿ ಬಲವಂತವಾಗಿ ಬಲಗೈ ಬಳಸಲು ಹೋದಾಗ ನಡೆಯುವ ಘಟನೆಗಳೇ ಚಿತ್ರದ ಕಥೆ’ ಎಂದಿದೆ ಚಿತ್ರತಂಡ. ಇಲ್ಲಿ ದಿಗಂತ್ಗೆ ಜೋಡಿ ಯಾರು ಎನ್ನುವುದನ್ನು ಕುತೂಹಲವನ್ನು ಟ್ರೇಲರ್ನಲ್ಲಿ ಬಿಟ್ಟುಕೊಟ್ಟಿಲ್ಲ. ಚಿತ್ರಕ್ಕೆ ‘ಬ್ಲಿಂಕ್’ ಮತ್ತು ‘ಶಾಖಾಹಾರಿ’ ಸಿನಿಮಾದ ನಿರ್ಮಾಪಕರು ಕೈ ಜೋಡಿಸಿದ್ದಾರೆ. ಇದು ಸಮರ್ಥ್ ಅವರ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.