ಸೋಮವಾರ, ಡಿಸೆಂಬರ್ 5, 2022
24 °C

ಜಗಜೀವನ ರಾಮ್ ಪಾತ್ರಕ್ಕೆ ಸತೀಶ್‌ ಕೌಶಿಕ್‌ ಆಯ್ಕೆ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್‌ನ ಜನಪ್ರಿಯ ನಟ, ನಿರ್ದೇಶಕ ಸತೀಶ್‌ ಕೌಶಿಕ್‌, ಕಂಗನಾ ರನೌತ್‌ ಮುಖ್ಯಭೂಮಿಕೆಯಲ್ಲಿರುವ ‘ಎಮರ್ಜೆನ್ಸಿ’ ಚಿತ್ರ ತಂಡ ಸೇರಿದ್ದಾರೆ.
‘ಮಿಸ್ಟರ್‌ ಇಂಡಿಯಾ, ದೀವಾನ ಮಸ್ತಾನ’ ಮೊದಲಾದ ಚಿತ್ರಗಳಿಂದ ಜನಪ್ರಿಯರಾದವರು ಸತೀಶ್‌. ಸಲ್ಮಾನ್‌ ಖಾನ್‌ ಅಭಿನಯದ ‘ತೆರೆ ನಾಮ್‌‘ ಚಿತ್ರಕ್ಕೆ ಆಕ್ಷನ್‌–ಕಟ್‌ ಹೇಳಿದ್ದರು. ಸತೀಶ್‌ ಈ ಚಿತ್ರದಲ್ಲಿ ಸ್ವಾತಂತ್ರ ಹೋರಾಟಗಾರ ಹಾಗೂ ಮಾಜಿ ಉಪಪ್ರಧಾನಿ ಜಗ್‌ಜೀವನ ರಾಮ್‌ ಪಾತ್ರ ಮಾಡಲಿದ್ದಾರೆ ಎಂದು ಚಿತ್ರತಂಡ ಹೇಳಿದೆ.
ಭಾರತದ ತುರ್ತು ಪರಿಸ್ಥಿತಿ ಮತ್ತು ಅದರ ಸುತ್ತಲಿನ ರಾಜಕೀಯದ ಕಥೆಯನ್ನು ಹೊಂದಿರುವ ಈ ಚಿತ್ರವನ್ನು ಕಂಗನಾ ಬರೆದು ನಿರ್ದೇಶಿಸುತ್ತಿದ್ದಾರೆ. ಜೊತೆಗೆ ಸಿನಿಮಾದಲ್ಲಿ ಕಂಗನಾ ಮಾಜಿ ಪ್ರಧಾನಿ ಇಂದಿರಾಗಾಂಧಿ ಪಾತ್ರ ಮಾಡಲಿದ್ದಾರೆ.

ಒಂದು ಐತಿಹಾಸಿಕ ಅಥವಾ ರಾಜಕೀಯ ವ್ಯಕ್ತಿತ್ವದ ಪಾತ್ರ ಮಾಡುವಾಗ ಅವರ ಬಗ್ಗೆ ಅಧ್ಯಯನ ಅಗತ್ಯ. ಬಾಬು ಜಗನ್‌ಜೀವನ ರಾಮ್‌ ಅವರ ಪಾತ್ರ ಮಾಡುತ್ತಿರುವುದು ಹೆಮ್ಮೆ ಎನಿಸುತ್ತಿದೆ ಎಂದು ಕೌಶಿಕ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ದಲಿತ ನೇತಾರ ಜಗಜೀವನ ರಾಮ್‌ ಹಿಂದುಳಿದವರ ಅಭಿವೃದ್ಧಿಗಾಗಿ ಹೋರಾಟ ಮಾಡಿದ ನಾಯಕರು. ಅವರ ಜನ್ಮ ದಿನವನ್ನು ಸಮತಾ ದಿನವೆಂದು ದೇಶದಾದ್ಯಂತ ಆಚರಿಸಲಾಗುತ್ತದೆ. ಅವರು 35 ವರ್ಷಗಳ ಕಾಲ ಕ್ಯಾಬಿನೆಟ್‌ ಸಚಿವರಾಗಿದ್ದರು.

ಈ ಪಾತ್ರಕ್ಕೆ ಕೌಶಿಕ್‌ ಸೂಕ್ತ ಆಯ್ಕೆ ಎಂದು ರನೌತ್‌ ಹೇಳಿದ್ದಾರೆ. ‘ಜಗಜೀವನ ರಾಮ್‌ ಅವರ ಬಲ, ಬುದ್ಧಿವಂತಿಕೆ, ವ್ಯಂಗ್ಯವನ್ನು ತೆರೆಯ ಮೇಲೆ ತರಬಲ್ಲ ಸೂಕ್ತ ನಟರು ಬೇಕಿತ್ತು. ಹೀಗಾಗಿ ಸತೀಶ್‌ ಅವರು ಈ ಪಾತ್ರಕ್ಕೆ ಸೂಕ್ತ ಆಯ್ಕೆ. ಅವರ ಜೊತೆ ಅಭಿನಯಿಸಲು ಉತ್ಸುಕವಾಗಿರುವೆ’ ಎಂದು ರನೌತ್‌ ಹೇಳಿದ್ದಾರೆ.

ಎರ್ಮಜೆನ್ಸಿಯಲ್ಲಿ ಅನುಪಮ್‌ ಖೇರ್‌, ಜಯಪ್ರಕಾಶ್‌ ನಾರಾಯಣ್‌ ಅವರ ಪಾತ್ರ ಮಾಡುತ್ತಿದ್ದಾರೆ. ಶ್ರೇಯಸ್‌ ತಾಲ್ಪಡೆ ಮಾಜಿ ಪ್ರಧಾನಿ ವಾಜಪೇಯಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು