ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಶಾ ಗುಪ್ತಾ ಮೇಲೆ ಮತ್ತೆ ಟ್ರೋಲ್

Last Updated 28 ಅಕ್ಟೋಬರ್ 2018, 19:30 IST
ಅಕ್ಷರ ಗಾತ್ರ

ಬಾಲಿವುಡ್‌ನ ನಟಿ ಇಶಾ ಗುಪ್ತಾಗೂ ಟ್ರೋಲಿಂಗ್‌ಗೂ ಬಿಡಲಾರದ ನಂಟು. ಕೆಲ ತಿಂಗಳ ಹಿಂದಷ್ಟೇ ಮೇಲುಡುಗೆ ಬಿಚ್ಚಿ ಸರಳುಗಳಿಗೆ ಅಡ್ಡ ನಿಂತು ತೆಗೆಸಿಕೊಂಡಿದ್ದ ಫೋಟೊ ಟ್ರೋಲ್ ಆಗಿತ್ತು. ಈಗ ಇಶಾ ಗುಪ್ತಾ ಬಿಕಿನಿ ತೊಟ್ಟು ಬೆರಳೊಂದನ್ನು ಮೇಲ್ಮುಖವಾಗಿ ಎತ್ತಿ ತೋರುತ್ತಿರುವ ಫೋಟೊ ಟ್ರೋಲ್‌ಗೆ ಒಳಗಾಗಿದೆ.

ಕ್ರಿಕೆಟಿಗ್ ಹಾರ್ದಿಕ್ ಪಟೇಲ್ ಜತೆಗಿರುವ ವಿಡಿಯೊವೊಂದರಲ್ಲಿ ಇಶಾ ನಡುಬೆರಳನ್ನು ತೋರುತ್ತಿರುವ ದೃಶ್ಯವಿದ್ದು, ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ಈ ಚಿತ್ರ ಇಶಾಳ ಇನ್‌ಸ್ಟಾಗ್ರಾಂ ಖಾತೆಯಲ್ಲೂ ಇದ್ದು, ಇದಕ್ಕೆ ಅನೇಕರು ಟೀಕೆ ವ್ಯಕ್ತಪಡಿಸಿ ಪ್ರತಿಕ್ರಿಯಿಸಿದ್ದಾರೆ. ಇಶಾಳ ಅಭಿಮಾನಿಗಳಿಗೆ ಅವಳನ್ನು ಫಾಲೋ ಮಾಡದಂತೆಯೂ ಕೆಲವರು ಪುಕ್ಕಟೆ ಸಲಹೆ ನೀಡಿದ್ದಾರಂತೆ.

ಸದ್ಯಕ್ಕೆ ಇಶಾ ‘ಡೆವಿಲ್ಸ್ ಡಾಟರ್’ ಮತ್ತು ’ಟೋಟಲ್ ಧಮಾಲ್’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಟ್ರೋಲಿಗರ ಮಾತಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT