ಮಂಗಳವಾರ, ಜನವರಿ 21, 2020
29 °C

ರಜನಿ 'ದರ್ಬಾರ್' ಯಶಸ್ಸಿಗಾಗಿ ಅಭಿಮಾನಿಗಳಿಂದ ನೆಲದ ಮೇಲೆ ಊಟ, ವಿಶಿಷ್ಟ ಹರಕೆ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಮಧುರೈ: ರಜನಿಕಾಂತ್ ಹೊಸ ಸಿನಿಮಾ 'ದರ್ಬಾರ್' ಯಶಸ್ಸು ಕಾಣಲೆಂದು ರಜನಿ ಅಭಿಮಾನಿಗಳಿಂದ ಈಗಾಗಲೇ ದೇವರಿಗೆ ನಾನಾ ಬಗೆಯ ಹರಕೆ ಹೊತ್ತುಕೊಂಡಿರುವುದಲ್ಲದೆ, ವ್ರತಗಳನ್ನು ಮಾಡಿ ಗಮನ ಸೆಳೆಯುತ್ತಿದ್ದಾರೆ.

ತಮಿಳುನಾಡಿನಲ್ಲಿ ರಜನಿಕಾಂತ್ ಅಭಿಮಾನಿಗಳು ಕಳೆದ 15 ದಿನಗಳಿಂದ ಉಪವಾಸ ಇರುವುದಲ್ಲದೆ, ತಟ್ಟೆ ಇಲ್ಲದೆ ನೆಲಕ್ಕೆ ಅನ್ನ ಸಾರು ಹಾಕಿಸಿಕೊಂಡು ಊಟ ಮಾಡುವ ವಿಶಿಷ್ಟ ರೀತಿ ವ್ರತ ಆಚರಿಸಿ ತಮ್ಮ ನೆಚ್ಚಿನ ನಟನ ಸಿನಿಮಾ ಯಶಸ್ಸು ಕಾಣಲೆಂದು ಬೇಡಿಕೊಂಡಿದ್ದಾರೆ.

ಮತ್ತೊಬ್ಬ ಅಭಿಮಾನಿ ದಪ್ಪ ಕಬ್ಬಿಣದ ಸಲಾಕೆಯನ್ನು ಬಾಯಿಗೆ ಚುಚ್ಚಿಸಿಕೊಳ್ಳುವ ಮೂಲಕ ವಿಶಿಷ್ಟ ಹರಕೆ ಹೊತ್ತಿದ್ದಾನೆ. ಮತ್ತೊಬ್ಬ ತ್ರಿಶೂಲವನ್ನೇ ತನ್ನ ಕೆನ್ನೆಯ ಮೂಲಕ ಬಾಯಿಯೊಳಗೆ ಚುಚ್ಚಿಸಿಕೊಂಡು ದೇವರ ಬಳಿ ಬೇಡಿಕೊಂಡಿದ್ದಾನೆ.

ಇದೆಲ್ಲವನ್ನೂ ನಮ್ಮ ಮೆಚ್ಚಿನ ನಟ ರಜನಿಕಾಂತ್ ಅವರ ಹೊಸ ಸಿನಿಮಾ 'ದರ್ಬಾರ್' ಯಶಸ್ಸು ಕಾಣಬೇಕು ಎಂಬ ಉದ್ದೇಶದಿಂದ ಮಾಡಿದ್ದೇವೆ. ನಮ್ಮ ಹರಕೆ ಸುಳ್ಳಾಗುವುದಿಲ್ಲ. ಖಂಡಿತ ನಮ್ಮ ಹರಕೆ ಫಲ ನೀಡುತ್ತದೆ. ದರ್ಬಾರ್ ಸಿನಿಮಾ ಯಶಸ್ಸು ಕಾಣುತ್ತದೆ ಎನ್ನುತ್ತಾರೆ.

ಇದನ್ನೂ ಓದಿ: 27 ವರ್ಷಗಳ ಬಳಿಕ ರಜನಿ ಪೊಲೀಸ್‌                  

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು