ನಟ ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಕೊನೆಯ ಚಿತ್ರ ‘ದಿಲ್ ಬೆಚಾರಾ’ ಸಿನಿಮಾ ಸದ್ಯದಲ್ಲೇ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿ ಇದೆ. ಆದರೆ ಈ ಸಿನಿಮಾವನ್ನು ಥಿಯೇಟರ್‌ನಲ್ಲಿ ದೊಡ್ಡ ಪರದೆಯಲ್ಲಿಯೇ ಬಿಡುಗಡೆ ಮಾಡಬೇಕು ಎಂದು ಅವರ ಅಭಿಮಾನಿಗಳು ಒತ್ತಾಯಿಸಿದ್ದಾರೆ.

‘ಸುಶಾಂತ್ ಸಿಂಗ್ ಕೊನೆಯ ಚಿತ್ರವನ್ನು ಥಿಯೇಟರ್ ಪರದೆಯ ಮೇಲೆ ನೋಡಬೇಕು. ಅದೇ ಅವರಿಗೆ ನಾವು ಸಲ್ಲಿಸುವ ಶ್ರದ್ಧಾಂಜಲಿ’ ಎಂದು ಅವರ ಅಭಿಮಾನಿಗಳು ಟ್ವಿಟರ್‌ನಲ್ಲಿ ಒತ್ತಾಯ ಆರಂಭಿಸಿದ್ದಾರೆ. #DilBecharaOnBigScreenಹ್ಯಾಷ್‌ಟ್ಯಾಗ್ ಬಳಸಿರುವ ಈ ಸುದ್ದಿ, ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದೆ.

‘ದಿಲ್ ಬೆಚಾರಾ’ ಸಿನಿಮಾವು ಮೇ ತಿಂಗಳಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಲಾಕ್‌ಡೌನ್ ಕಾರಣದಿಂದ ಬಿಡುಗಡೆ ದಿನಾಂಕವನ್ನು ಮುಂದೂಡಲಾಯಿತು. ಈಗ ಈ ಸಿನಿಮಾ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿ ಹೊರಬಿದ್ದಿದೆ. ಆದರೆ ಅವರ ಅಭಿಮಾನಿಗಳು ನಟ ಸುಶಾಂತ್‌ನನ್ನು ದೊಡ್ಡ ಪರದೆ ಮೇಲೆಯೇ ನೋಡಲು ಇಷ್ಟಪಟ್ಟಿದ್ದು, ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರೂ ಸಹ ಟ್ವಿಟರ್‌ನಲ್ಲಿ ಈ ಮಾತನ್ನೇ ಹೇಳಿದ್ದಾರೆ.

‘ಸುಶಾಂತ್ ಅದ್ಭುತ ನಟ. ಅವರು ಸಿನಿಮಾಗಿರುವ ಶಕ್ತಿಯಲ್ಲಿ ನಂಬಿಕೆ ಹೊಂದಿದ್ದರು. ಅವರ ಕೊನೆಯ ಸಿನಿಮಾವನ್ನು ಬಿಗ್‌ಸ್ಕ್ರೀನ್ ನಲ್ಲಿಯೇ ನೋಡಬೇಕು’ ಎಂದು ಸಿದ್ಧಾಂತ್ ಎಂಬವರು ಟ್ವೀಟ್ ಮಾಡಿದ್ದಾರೆ.

‘ಈ ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡುವ ಮೂಲಕ ನಾವು ಸುಶಾಂತ್‌ಗೆ ಅರ್ಪಿಸುವ ಸಣ್ಣ ನಮನ. ಅವರು ನಮ್ಮ ಹೃದಯಗಳಲ್ಲಿ ಯಾವಾಗಲೂ ಇರುತ್ತಾರೆ’ ಎಂದು ಸುಧಾ ಸುಮನ್ ಎಂಬವರು ಹೇಳಿಕೊಂಡಿದ್ದಾರೆ. 70 ಸಾವಿರಕ್ಕೂ ಹೆಚ್ಚು ಜನರು ಟ್ವೀಟ್ ಮಾಡಿದ್ದಾರೆ. ಸಿನಿಮಾವನ್ನು ಥಿಯೇಟರ್‌ನಲ್ಲಿಯೇ ಬಿಡುಗಡೆ ಮಾಡಲು ಚಿತ್ರತಂಡ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.

‘ದಿಲ್ ಬೆಚಾರಾ’ ಸಿನಿಮಾವು ಹಾಲಿವುಡ್‌ನ ‘ದಿ ಫಾಲ್ಟ್ ಇನ್ ಅವರ್ ಸ್ಟಾರ್ಸ್’ ಚಿತ್ರದ ಹಿಂದಿ ರಿಮೇಕ್. 2014ರಲ್ಲಿ ತೆರೆ ಕಂಡು ಭಾರಿ ಯಶಸ್ಸು ಗಳಿಸಿದ್ದ ಈ ಚಿತ್ರವನ್ನು ಬಾಲಿವುಡ್‌ನಲ್ಲಿ ಮುಖೇಶ್ ಛಬಾರ ನಿರ್ದೇಶಿಸಿದ್ದಾರೆ. ಇದು ಸಾವಿನ ಅಂಚಿನಲ್ಲಿರುವ ಯುವಕ, ಯುವತಿ ಪ್ರೀತಿಸುವ ಕತೆ ಹೊಂದಿದೆ.

ಇದು ಮುಖೇಶ್ ಛಬಾರ ಅವರ ಚೊಚ್ಚಲ ನಿರ್ದೇಶನದ ಸಿನಿಮಾ. ಮುಖೇಶ್, ಸುಶಾಂತ್ ಸಿಂಗ್ ರಜಪೂತ್ ಸ್ನೇಹಿತರು. ಮುಖೇಶ್ ಈ ಸಿನಿಮಾದ ಬಗ್ಗೆ ಹೇಳಿದಾಗ ಸುಶಾಂತ್ ಮರುಕ್ಷಣದಲ್ಲಿ ಒಪ್ಪಿಗೆ ನೀಡಿದ್ದರಂತೆ.

ಈ ಸಿನಿಮಾದಲ್ಲಿ ಸುಶಾಂತ್‌ಗೆ ಜೋಡಿಯಾಗಿ ‘ಹಿಂದಿ ಮೀಡಿಯಂ’, ಫಕ್ರಿ ಸಿನಿಮಾಗಳಲ್ಲಿ ನಟಿಸಿದ್ದ ನಟಿ ಸಂಜನಾ ಸಾಂಘಿ ನಾಯಕಿಯಾಗಿ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.