ಬಾಡಿ ಶೇಮಿಂಗ್: ಈಗ ಫಾತಿಮಾ ಸರದಿ!

ಗುರುವಾರ , ಜೂನ್ 27, 2019
26 °C

ಬಾಡಿ ಶೇಮಿಂಗ್: ಈಗ ಫಾತಿಮಾ ಸರದಿ!

Published:
Updated:
Prajavani

ಸೆಲೆಬ್ರಿಟಿಗಳು ಬಾಡಿ ಶೇಮಿಂಗ್‌ಗೊಳಗಾಗುವುದು ಹೊಸತೇನಲ್ಲ. ಅದರಲ್ಲೂ ಬಾಲಿವುಡ್ ನಟಿಯರ ದೇಹಾಕೃತಿ, ಅವರು ತೊಟ್ಟಿರುವ ಉಡುಪುಗಳ ಕುರಿತಾಗಿ ನಿರಂತರವಾಗಿ ನೆಟ್ಟಿಗರು ಟ್ರೋಲಿಂಗ್ ಮಾಡುತ್ತಲೇ ಇರುತ್ತಾರೆ. ಇದೀಗ ಟ್ರೋಲಿಂಗ್‌ಗೆ ಗುರಿಯಾಗಿರುವವರು ‘ದಂಗಲ್’ ಖ್ಯಾತಿಯ ನಟಿ ಫಾತಿಮಾ ಸನಾ ಶೇಖ್. 

ಫಾತಿಮಾ ಇತ್ತೀಚೆಗೆಷ್ಟೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸರೋವರದ ಬಳಿ ಸೂರ್ಯ ಮುಳುಗುತ್ತಿರುವ ಚಿತ್ರವೊಂದನ್ನು ಹಂಚಿಕೊಂಡಿದ್ದರು.

ಪ್ಯಾಂಟ್, ಶರ್ಟ್ ತೊಟ್ಟ ಫಾತಿಮಾ ಹುಲ್ಲುಹಾಸಿನ ಮೇಲೆ ಕುಳಿತು ಸೂರ್ಯಾಸ್ತವನ್ನು ನೋಡುತ್ತಿರುವ ಚಿತ್ರ ಇದಾಗಿತ್ತು. ಮುಳುಗುತ್ತಿರುವ ಸೂರ್ಯನನ್ನು ಕುರಿತು ಫಾತಿಮಾ ‘ಇಂದು ನಿನ್ನೆಯಲ್ಲಿ ಮುಳುಗಿ ಹೋಯ್ತು, ದಿನವು ಕಳೆದುಹೋಯ್ತು, ಇನ್ನು ನೀನು ಮಲಗು, ರಂಗುತುಂಬಿದ ಸಂಜೆಯೂ ಮಲಗಿತು..’ ಎಂದು ಬರೆದುಕೊಂಡಿದ್ದರು.

ಇದಕ್ಕೆ ಸಲ್ಮಾನ್ ಬಾಜಿಗರ್ ಅನ್ನುವ ನೆಟ್ಟಿಗರೊಬ್ಬರು ‘ಜನರು ನಿಮ್ಮ ಬಗ್ಗೆ ಏನು ಹೇಳುತ್ತಿದ್ದಾರೆ. ಸರಿಯಾಗಿಯೇ ಹೇಳುತ್ತಿದ್ದಾರೆ. ದಯವಿಟ್ಟು ನಿಮ್ಮ ದೇಹವನ್ನು ಮುಚ್ಚಿಟ್ಟುಕೊಳ್ಳಿ. ನೀವು ಮುಸ್ಲಿಂ ಹುಡುಗಿ. ಸ್ವಲ್ಪ ಅರ್ಥಮಾಡಿಕೊಳ್ಳಿ ಎಂದು ನಾನು ಮನವಿ ಮಾಡಿಕೊಳ್ಳುತ್ತೇನೆ. ದಯವಿಟ್ಟು ಬ್ಲಾಕ್ ಮಾಡಬೇಡಿ....’ ಎಂದು ಪ್ರತಿಕ್ರಿಯಿಸಿದ್ದಾನೆ.

ಇದಕ್ಕೆ ಪ್ರತಿಕ್ರಿಯಿಸಿರುವ ಫಾತಿಮಾ, ‘ನೀವು ನನ್ನ ಸ್ನೇಹಿತ. ನಿಮ್ಮನ್ನು ಬ್ಲಾಕ್ ಮಾಡುತ್ತಿದ್ದೇನೆ. ನನ್ನ ದೇಹ, ನನ್ನಿಷ್ಟ. ನೀನೊಬ್ಬ ಮೂರ್ಖ’ ಎಂದು ಬರೆದು, ಆತನನ್ನು ಬ್ಲಾಕ್ ಮಾಡಿದ್ದಾರೆ. 

ಹೈದರಾಬಾದ್‌ನ ಫಾತಿಮಾ, ಕಮಲ್ ಹಾಸನ್ ಅವರ ‘ಚಾಚಿ 420’ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದರು. ‘ಒನ್ ಟು ಕಾ ಫೋರ್’ ಸಿನಿಮಾದಲ್ಲಿ ಶಾರುಕ್ ಖಾನ್ ಮತ್ತು ಜೂಹಿ ಚಾವ್ಲಾ ಅವರ ಮಗಳಾಗಿ ಅಭಿನಯಿಸಿದ್ದ ಫಾತಿಮಾ, ಅಮೀರ್ ಖಾನ್ ಅಭಿನಯದ ‘ದಂಗಲ್’ ಸಿನಿಮಾದಲ್ಲಿ ಕುಸ್ತಿಪಟು ದೀಪಾ ಪೋಗಟ್ ಪಾತ್ರಕ್ಕೆ ಜೀವತುಂಬಿದ್ದ ಫಾತಿಮಾ, ಇದೀಗ ಸೈಫ್ ಅಲಿ ಖಾನ್ ಅಭಿನಯದ ‘ಭೂತ್ ಪೊಲೀಸ್’ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !