ಭಾನುವಾರ, ಜೂನ್ 26, 2022
29 °C

ನಟಿಯರು ಓಡುತ್ತಿದ್ದಾರೆ: ವಿಶಾಲ್ ವಿರುದ್ಧ ನಟಿ ಗಾಯತ್ರಿ ಲೈಂಗಿಕ ಕಿರುಕುಳದ ಆರೋಪ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಎಲ್ಲ ಚಿತ್ರರಂಗಗಳಲ್ಲೂ ನಟಿಯರ ಮೇಲೆ ಲೈಂಗಿಕ ದೌರ್ಜನ್ಯದ ಸುದ್ದಿಗಳು ಆಗಾಗ್ಗೆ ಸದ್ದು ಮಾಡುತ್ತಲೇ ಇರುತ್ತವೆ, ಇದೀಗ ತಮಿಳಿನ ಖ್ಯಾತ ನಟ ವಿಶಾಲ್ ವಿರುದ್ಧ ‘ಮನಸೆಲ್ಲ ನೀನೆ’ ನಟಿ ಮತ್ತು ಬಿಗ್ ಬಾಸ್ ಸ್ಪರ್ಧಿ ಗಾಯತ್ರಿ ರಘುರಾಂ ಅಂಥದ್ದೇ ಆರೋಪ ಮಾಡಿದ್ದಾರೆ.

ಶಿಕ್ಷಕರು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟರ್‌ನಲ್ಲಿ ಆಘಾತ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದ ವಿಶಾಲ್, ಆ ಶಾಲೆಯನ್ನು ಮುಚ್ಚಬೇಕು. ಅಂತಹ ಅಪರಾಧಗಳನ್ನು ನಿಜವಾಗಿಯೂ ಕಠಿಣವಾಗಿ ತೆಗೆದುಕೊಳ್ಳಬೇಕು ಎಂದು ಟ್ವೀಟ್ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ನಟಿ ಗಾಯತ್ರಿ ರಘುರಾಂ ಅವರು, ಚಿತ್ರರಂಗಕ್ಕೆ ಹೊಸದಾಗಿ ಪ್ರವೇಶಿಸುತ್ತಿರುವ ಹುಡುಗಿಯರಿಗೆ ಏನಾಗುತ್ತಿದೆ ಎಂಬುದನ್ನು ನೋಡಿ. ಪ್ರಮುಖ ನಟಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದೀರಿ. ನೀವು ಮತ್ತು ನಿಮ್ಮ ಸ್ನೇಹಿತರು ಪ್ರಭಾವ ಬಳಸಿ ನಟಿಯರನ್ನು ಬಳಸಿಕೊಂಡು ಬಿಸಾಡುತ್ತಿದ್ದೀರಿ. ಹಲವರು ನಿಮ್ಮಿಂದ ಕಿರುಕುಳಕ್ಕೊಳಗಾಗಿದ್ದಾರೆ ಎಂದು ನಟ ವಿಶಾಲ್ ಅವರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.

ಸಿನಿಮಾ ಉದ್ಯಮದಲ್ಲಿರುವ ನಾನು ಇಲ್ಲಿ ನಟಿಯರ ಮೇಲೆ ನಡೆಯುತ್ತಿರುವ ಲೈಂಗಿಕ ಕಿರುಕುಳಗಳನ್ನು ಖಂಡಿಸುತ್ತೇನೆ ಎಂದು ಟ್ವೀಟ್ ಆರಂಭಿಸಿರುವ ಅವರು, ನೇರ ನಟ ವಿಶಾಲ್ ಅವರ ವಿರುದ್ಧ ಹರಿಹಾಯ್ದಿದ್ದಾರೆ.

ಚಲನಚಿತ್ರ ಉದ್ಯಮದ ಹುಡುಗಿಯರಿಗೆ ನಿಮ್ಮ ಸಹಾಯ ಬೇಕಾದಾಗ ನೀವು ನಿಮ್ಮ ಹೀರೊಯಿಸಂ ತೋರಿಸಬೇಕಾಗಿತ್ತು. ಆದನ್ನು ಬಿಟ್ಟು ಬೇರೆ ಮಾರ್ಗದಲ್ಲಿ ನಿಮ್ಮ ಪ್ರಭಾವ ಬಳಸುತ್ತಿದ್ದೀರಿ ಎಂದು ಕಿಡಿ ಕಾರಿದ್ದಾರೆ.

ನೀವು ಪದೇ ಪದೇ ಪೀಡಿಸುತ್ತಿರುವುದರಿಂದ ನಟಿಯರು ನಿಮ್ಮಿಂದ ದೂರ ಓಡುತ್ತಿದ್ದಾರೆ. ನೀವು ಅದನ್ನು ಅರಿತುಕೊಳ್ಳಬೇಕು ಎಂದು ನಟಿ ಗಾಯತ್ರಿ ರಘುರಾಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಾಯತ್ರಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ನಟ ನಂದಾ, ಯವ ಹೀರೋಯಿನ್ ಓಡಿ ಹೋಗಿದ್ದಾರೆ? ಅದನ್ನು ನೀವು ಸಾಬೀತುಮಾಡಬಲ್ಲಿರಾ? ಸಂತ್ರಸ್ತ ವಿದ್ಯಾರ್ಥಿನಿಯ ಪರ ಧ್ವನಿ ಎತ್ತಿದರೆ ಉತ್ತಮ. ಅದನ್ನು ಬಿಟ್ಟು ರಾಜಕೀಯ ಲಾಭಕ್ಕಾಗಿ ಈ ರೀತಿಯ ಹೇಳಿಕೆ ಸರಿಯಲ್ಲ ಎಂದು ಟ್ವೀಟ್ ಮಾಡಿದ್ದಾರೆ. ನಟಿಯರ ಮೇಲೆ ವಿಶಾಲ್ ಲೈಂಗಿಕ ಕಿರುಕುಳ ನಡೆಸಿರುವುದಕ್ಕೆ ಏನಾದರೂ ಸಾಕ್ಷಿ ಇದೆಯೇ? ಎಂದು ಮರು ಪ್ರಶ್ನೆ ಹಾಕಿದ್ದಾರೆ.

ಇದನ್ನೂ ಓದಿ.. ಕೋವಿಡ್‌ನಿಂದ ಚೇತರಿಕೆ ಸವಾಲಾಗಿತ್ತು: ಅನುಭವ ಬಿಚ್ಚಿಟ್ಟ ನಟಿ ಮಲೈಕಾ ಅರೋರಾ
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು