ಅದು ಚಂದ್ರು ಮುದ್ದು ನಿರ್ದೇಶನದ ‘ಓ ಪಿಟ್ಟ ಕಥಾ’ ಸಿನಿಮಾದ ಬಿಡುಗಡೆ ಪೂರ್ವ ಕಾರ್ಯಕ್ರಮ. ಇದರಲ್ಲಿ ಪಾಲ್ಗೊಂಡಿದ್ದ ‘ಮೆಗಾಸ್ಟಾರ್’ ಚಿರಂಜೀವಿ ಮೈಕ್ ಕೈಗೆತ್ತಿಕೊಂಡಾಗ ನೆರೆದಿದ್ದವರಿಗೆ ಅಚ್ಚರಿ ಕಾದಿತ್ತು.

ಚಿರು ನಾಯಕನಾಗಿರುವ ಕೊರಟಾಲ ಶಿವ ನಿರ್ದೇಶನದ 152ನೇ ಚಿತ್ರದ ಏನಾದರೂ ಮಾಹಿತಿ ನೀಡುತ್ತಾರೆಯೇ? ಎಂದು ಪತ್ರಕರ್ತರು ಕುತೂಹಲಭರಿತರಾಗಿದ್ದರು. ಮಾತಿನ ನಡುವೆ ಅವರು ತಮ್ಮ ಹೊಸ ಚಿತ್ರದ ಟೈಟಲ್ ‘ಆಚಾರ್ಯ’ ಎಂದು ಬಾಯಿತಪ್ಪಿ ಹೇಳಿಯೇ ಬಿಟ್ಟರು! ಚಿರಂಜೀವಿ ಅವರ ಈ ಮಾತು ಕೇಳಿ ಮಾಧ್ಯಮದವರಿಗೂ ಅಚ್ಚರಿಯಾಯಿತು.

‘ಸೈರಾ ನರಸಿಂಹ ರೆಡ್ಡಿ’ ಚಿತ್ರದ ಬಳಿಕ ಚಿರಂಜೀವಿ ನಟಿಸುತ್ತಿರುವ ಚಿತ್ರ ಇದು. ಈಗಾಗಲೇ, ಶೂಟಿಂಗ್ ಆರಂಭಿಸಿರುವ ಚಿತ್ರತಂಡ ಎಲ್ಲಿಯೂ ಸಿನಿಮಾದ ಶೀರ್ಷಿಕೆಯನ್ನು ಬಹಿರಂಗಪಡಿಸದೇ ಗುಟ್ಟು ಕಾಪಾಡಿಕೊಂಡಿತ್ತು. ದೊಡ್ಡ ಕಾರ್ಯಕ್ರಮ ಆಯೋಜಿಸಿ ಟೈಟಲ್ ಬಿಡುಗಡೆಗೊಳಿಸಲು ನಿರ್ದೇಶಕರು ನಿರ್ಧರಿಸಿದ್ದರು. ಆದರೆ, ಶೀರ್ಷಿಕೆಯನ್ನು ಬಹಿರಂಗಪಡಿಸಿದ ಬಗ್ಗೆ ಚಿತ್ರತಂಡದ ಬಳಿ ‘ಮೆಗಾಸ್ಟಾರ್’ ಕ್ಷಮೆ ಕೋರಿದ್ದಾರೆ.

ಹೈದರಾಬಾದ್ನಲ್ಲಿ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಚಿತ್ರದಲ್ಲಿ ಅವರದು ಮಧ್ಯವಯಸ್ಸಿನ ನಕ್ಸಲೀಯ ಸಮಾಜ ಸುಧಾರಕನಾಗಿ ಬದಲಾಗುವ ಪಾತ್ರವಂತೆ. ದೇವಸ್ಥಾನದಲ್ಲಿ ನಡೆಯುವ ಹಣದ ಅವ್ಯವಹಾರವನ್ನು ಬಯಲಿಗೆಳೆಯುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಮಿಳಿನ ತ್ರಿಷಾ ಕೃಷ್ಣ ಈ ಚಿತ್ರದ ನಾಯಕಿ. ಬಾಲಿವುಡ್ನ ಖ್ಯಾತ ಖಳನಟ ಸೋನು ಸೂದ್ ಅವರು ಚಿರಂಜೀವಿ ವಿರುದ್ಧ ತೊಡೆ ತೊಟ್ಟಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.