2019ರಲ್ಲಿ ಹೃತಿಕ್ ರೋಷನ್ ಅಭಿನಯದ ‘ವಾರ್’ ಸಿನಿಮಾ ತೆರೆಕಂಡು ಭರ್ಜರಿ ಯಶಸ್ಸು ಗಳಿಸಿತ್ತು. ಇದೀಗ ‘ವಾರ್ 2’ ಚಿತ್ರ ಸಿದ್ಧಗೊಂಡಿದ್ದು, ಜೂನಿಯರ್ ಎನ್ಟಿಆರ್ ಜನ್ಮದಿನದ ಪ್ರಯುಕ್ತ ಚಿತ್ರದ ಟೀಸರ್ ಬಿಡುಗಡೆಗೊಂಡಿದೆ. ಅಂದಹಾಗೆ ಜೂನಿಯರ್ ಎನ್ಟಿಆರ್ ಈ ಚಿತ್ರದಲ್ಲಿ ಪ್ರಮುಖ ಖಳನಟನಾಗಿ ಗಮನ ಸೆಳೆದಿದ್ದಾರೆ. ಈತನಕ ನಾಯಕನಾಗಿ ಕಾಣಿಸಿಕೊಂಡಿದ್ದ ಜೂನಿಯರ್, ಮೊದಲ ಸಲ ವಿಲನ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.

ಇದು ‘ವಾರ್’ ಚಿತ್ರದ ಮುಂದುವರಿದ ಭಾಗವಾಗಿದ್ದು, ಬಾಲಿವುಡ್ನ ಈ ವರ್ಷದ ಬಹುನಿರೀಕ್ಷಿತ ಚಿತ್ರ. ಯಶ್ ರಾಜ್ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ‘ವಾರ್’ಗೆ ಸಿದ್ದಾರ್ಥ್ ಆನಂದ್ ಆ್ಯಕ್ಷನ್ ಕಟ್ ಹೇಳಿದ್ದರು. ಈ ಚಿತ್ರಕ್ಕೆ ಅಯಾನ್ ಮುಖರ್ಜಿ ನಿರ್ದೇಶನವಿದೆ. ಟೀಸರ್ನಲ್ಲಿ ಭರಪೂರ ಆ್ಯಕ್ಷನ್ ದೃಶ್ಯಗಳಿವೆ. ಒಂದೂವರೆ ನಿಮಿಷದ ಟೀಸರ್ನಲ್ಲಿ ಹೃತಿಕ್ ಹಾಗೂ ಜೂನಿಯರ್ ಎನ್ಟಿಆರ್ ನಡುವಿನ ಹಣಾಹಣಿ ದೃಶ್ಯಗಳನ್ನೇ ಹೆಚ್ಚು ತೋರಿಸಲಾಗಿದೆ.

ಟೀಸರ್ ಉದ್ದಕ್ಕೂ ಭರ್ಜರಿ ಆ್ಯಕ್ಷನ್ ದೃಶ್ಯಗಳನ್ನು ತೋರಿಸಲಾಗಿದೆ. ‘ಇದು ಆರಂಭ. ಸಿದ್ಧರಾಗಿರಿ. ಕರುಣೆಗಿಲ್ಲಿ ಜಾಗವಿಲ್ಲ, ನರಕಕ್ಕೆ ಸ್ವಾಗತ. ಆ.14ರಂದು ಚಿತ್ರ ತೆರೆಗೆ ಬರಲಿದೆ’ ಎಂದು ಹೃತಿಕ್ ರೋಷನ್ ತಮ್ಮ ಎಕ್ಸ್ನಲ್ಲಿ ಬರೆದಿದ್ದಾರೆ.

‘ವಾರ್’ನಲ್ಲಿ ಟೈಗರ್ ಶ್ರಾಫ್, ವಾಣಿ ಕಪೂರ್, ಆಶುತೋಷ್ ರಾಣಾ ಮುಂತಾದವರು ಪ್ರಮುಖ ಪಾತ್ರದಲ್ಲಿದ್ದರು. ಈ ಚಿತ್ರದಲ್ಲಿ ರಾ ಏಜೆಂಟ್ ಪಾತ್ರದಲ್ಲಿ ಹೃತಿಕ್ ರೋಷನ್ ಕಾಣಿಸಿಕೊಂಡಿದ್ದು, ಕಿಯಾರಾ ಅಡ್ವಾಣಿ ಅವರಿಗೆ ಜೋಡಿಯಾಗಿದ್ದಾರೆ. 2024ರಲ್ಲಿ ಚಿತ್ರ ಸೆಟ್ಟೇರಿತ್ತು. 150 ದಿನಗಳ ಕಾಲ 6 ದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ವಿವಿಧ ದೇಶಗಳಲ್ಲಿ ಸಿನಿಮಾದ ಕಥೆ ಸಾಗಲಿದೆ ಎಂದಿದೆ ಚಿತ್ರತಂಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.