ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೆಟ್ಟೇರಿದ ‘ಆ ದಿನಗಳು,ಈ ದಿನಗಳು’

Published : 26 ಸೆಪ್ಟೆಂಬರ್ 2024, 14:18 IST
Last Updated : 26 ಸೆಪ್ಟೆಂಬರ್ 2024, 14:18 IST
ಫಾಲೋ ಮಾಡಿ
Comments

ಈಗಾಗಲೇ ಕೆಲವಷ್ಟು ಸಿನಿಮಾಗಳನ್ನು ಪೂರ್ಣಗೊಳಿಸಿ ಬಿಡುಗಡೆಗೆ ಎದುರು ನೋಡುತ್ತಿರುವ ನಟ ಭಾರ್ಗವ್‌ ನಾಯಕನಾಗಿ ನಟಿಸುತ್ತಿರುವ ‘ಆ ದಿನಗಳು,ಈ ದಿನಗಳು’ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ. ದುರ್ಗ ಮೋಹನ್ ನಿರ್ದೇಶನದ ಚಿತ್ರವನ್ನು ಆರ್‌ಎಸ್‌ಪಿ ಪ್ರೊಡಕ್ಷನ್ಸ್-ಚಿನ್ಮಯ್ ಸಿನಿ ಕ್ರಿಯೇಶನ್ಸ್ ನಿರ್ಮಾಣ ಮಾಡುತ್ತಿದೆ. 

‘ಆ ದಿನಗಳು, ಈ ದಿನಗಳು’ ಶೀರ್ಷಿಕೆಯನ್ನು ಪ್ರೇಕ್ಷಕರ ಕುತೂಹಲಕ್ಕಾಗಿ ‘ಆ..ಈ..’ ಎಂದು ಬದಲಿಸಿದ್ದೇವೆ. ಕಾಶಿನಾಥ್ ಅವರ ಕಾಲದಲ್ಲಿ ಬರುತ್ತಿದ್ದ ಹಾಸ್ಯಕಥೆಗಳನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಿದ ಕಥೆಯಿದು. ಮನರಂಜನೆ ಜೊತೆಗೊಂದು ಸಂದೇಶವಿದೆ. ಹಳ್ಳಿ ಬದುಕು, ಕಾರ್ಪೋರೇಟ್ ಜೀವನ, ನಮ್ಮ ಕಾಲ, ಇಂದಿನ ಯುವಪೀಳಿಗೆ ಎಲ್ಲ ಕಡೆ ಒಳ್ಳೆಯದು ಮತ್ತು ಕೆಟ್ಟದ್ದು ಇರುತ್ತದೆ. ಇದರಲ್ಲಿ ಒಳ್ಳೆಯದನ್ನು ತೆಗೆದುಕೊಂಡರೆ ಜೀವನ ಸುಂದರವಾಗುತ್ತದೆ. ಪ್ರಚಲಿತ ವಿದ್ಯಮಾನಗಳು, ಜತೆಗೆ ನಾಲ್ಕು ಭಿನ್ನ ರೀತಿಯ ಪ್ರೇಮಕಥೆ ಚಿತ್ರದಲ್ಲಿದೆ’ ಎಂದು ಚಿತ್ರದ ಕುರಿತು ಮಾಹಿತಿ ನೀಡಿದರು ದುರ್ಗ ಮೋಹನ್.

ರಾಘವೇಂದ್ರ ರಾಜ್‌ಕುಮಾರ್, ಸುಧಾರಾಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆರಾ, ಶ್ವೇತಾಸಂಕೇತ್, ಛವಸಖಿ ತಿಮ್ಮಯ್ಯ, ಮೋನಿಕಾವಸಿಷ್ಠ ಮುಂತಾದವರು ತಾರಾಗಣದಲ್ಲಿದ್ದಾರೆ. ವಿವೇಕ್ ಜಂಗ್ಲಿ ಸಂಗೀತ ಚಿತ್ರಕ್ಕಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT