ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವಾರ ಎರಡು ಚಿತ್ರಗಳು ತೆರೆಗೆ

Published 25 ಏಪ್ರಿಲ್ 2024, 23:15 IST
Last Updated 25 ಏಪ್ರಿಲ್ 2024, 23:15 IST
ಅಕ್ಷರ ಗಾತ್ರ

ಈ ವಾರ ಎರಡು ಸಿನಿಮಾಗಳು ಇಂದು (ಏ.26) ಬಿಡುಗಡೆಯಾಗುತ್ತಿವೆ. ಹಾರರ್, ಥ್ರಿಲ್ಲರ್ ಕಥಾವಸ್ತು ಹೊಂದಿರುವ ‘ಆತ್ಮ’ ಚಿತ್ರ ತೆರೆ ಕಾಣುತ್ತಿದೆ. ಎಸ್.ಆರ್.ಪ್ರಮೋದ್ ನಿರ್ದೇಶನದ ಚಿತ್ರಕ್ಕೆ ಅನಿಲ್.ಸಿ.ಆರ್ ಬಂಡವಾಳ ಹೂಡಿದ್ದಾರೆ. ಜೊತೆಗೆ ಇವರೇ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಕಾವ್ಯ ಚಿತ್ರದ ನಾಯಕಿ. ಬಹುತೇಕ ಹೊಸಬರೇ ತಾರಾಗಣದಲ್ಲಿದ್ದಾರೆ. ಎರಡು ಹಾಡುಗಳಿಗೆ ನಿತಿನ್‌ರಾಜ್ ಸಂಗೀತ ಸಂಯೋಜಿಸಿದ್ದಾರೆ. ರಣಧೀರ್‌ ನಾಯಕ್ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ. 

‘ರಾಮ ಮತ್ತು ರಾಮು’ ಎಂಬ ಮತ್ತೊಂದು ಚಿತ್ರ ಬಿಡುಗಡೆ ಆಗುತ್ತಿದೆ. ನಿರ್ದೇಶಕ, ನಿರ್ಮಾಪಕ ಸೇರಿದಂತೆ ಬಹುತೇಕ ವಿಭಾಗಗಳಲ್ಲಿ ಚಂದ್ರು ಓಬಯ್ಯ ಕಾಣಿಸಿಕೊಂಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT