ನಿವೇದಿತಾ ಶಿವರಾಜ್ಕುಮಾರ್ ನಿರ್ಮಾಣದ ಚೊಚ್ಚಲ ಸಿನಿಮಾ ‘ಫೈರ್ಫ್ಲೈ’ ಏ.24ರಂದು ತೆರೆ ಕಾಣಲಿದೆ. ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಹೊಸಬರ ತಂಡಕ್ಕೆ ನಟ ಶಿವರಾಜ್ಕುಮಾರ್ ಸಾಥ್ ನೀಡಿದ್ದಾರೆ.

ವಂಶಿ ಆ್ಯಕ್ಷನ್ ಕಟ್ ಹೇಳಿ ನಾಯಕರಾಗಿ ನಟಿಸಿರುವ ಈ ಸಿನಿಮಾದಲ್ಲಿ ರಚನಾ ಇಂದರ್ ನಾಯಕಿಯಾಗಿದ್ದಾರೆ. ಶ್ರೀ ಮುತ್ತು ಸಿನಿ ಸರ್ವೀಸ್ ಆ್ಯಂಡ್ ಪ್ರೊಡಕ್ಷನ್ಸ್ನಡಿ ನಿರ್ಮಾಣವಾಗಿದ್ದು, ಶಿವರಾಜ್ಕುಮಾರ್ ಮನೆಯಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಈ ವೇಳೆ ಮಾತನಾಡಿದ ಶಿವರಾಜ್ಕುಮಾರ್, ‘ಮಗಳು ಸಿನಿಮಾ ಮಾಡಿರುವುದು ಬಹಳ ಖುಷಿಯ ವಿಚಾರ. ಯುವ ತಂಡವಿದು. ಈ ಚಿತ್ರದ ಕಥೆ ನನ್ನ ಹೃದಯಕ್ಕೆ ತಟ್ಟಿತು. ವಂಶಿ ಒಂದು ಮೌಲ್ಯಯುತ ಸಿನಿಮಾ ಮಾಡಿದ್ದಾರೆ. ಅವರೇ ಹೀರೊ ಆಗಿ ಮಾಡುತ್ತೇನೆ ಎಂದಾಗಿ ಅವರಲ್ಲಿರುವ ವಿಶ್ವಾಸ ನೋಡಿದೆ. ಪಾರ್ವತಮ್ಮ ರಾಜ್ಕುಮಾರ್ ದಾರಿಯಲ್ಲಿ ಹೆಜ್ಜೆ ಹಾಕಬೇಕು ಎನ್ನುವುದು ನಿವೇದಿತಾ ಆಸೆ. ನಮಗೂ ಆಕೆಯ ನಿರ್ಧಾರ ಖುಷಿ ತಂದಿತು. ಒಳ್ಳೆಯ ಸಿನಿಮಾದಿಂದ ಹೊಸ ತಂಡ ಸೃಷ್ಟಿಯಾಗುತ್ತದೆ. ಕನ್ನಡದಲ್ಲಿ ಇಂತಹ ಒಂದು ಹೊಸ ಅಲೆ, ತಂಡ ಬರಬೇಕು ಎನ್ನುವುದು ನನ್ನ ಆಸೆ. ನಮ್ಮ ಸಂಸ್ಕೃತಿ, ಭಾಷೆಯನ್ನು ಕೊಂಡೊಯ್ಯುವುದು ಇವರೇ. ಚಿತ್ರದಲ್ಲಿ ನಾನೂ ಒಂದು ಪಾತ್ರವನ್ನು ಮಾಡಬೇಕು ಎಂದು ಕೇಳಿಕೊಂಡಾಗ ಖುಷಿಯಿಂದ ಒಪ್ಪಿಕೊಂಡೆ. ನನ್ನನ್ನು ಯಂಗ್ ಆಗಿ ಹೆಂಗೆಂಗೋ ತೋರಿಸಿದ್ದಾರೆ. ಒಳ್ಳೆಯ ಸಿನಿಮಾ ಮಾಡಿದರೆ ದುಡ್ಡು ತಾನಾಗಿಯೇ ಬರುತ್ತದೆ. ನಿವೇದಿತಾ ಒಳ್ಳೆಯ ವಿಷಯ ಆಯ್ಕೆ ಮಾಡಿಕೊಂಡಿದ್ದಾಳೆ. ಶ್ರೀ ಮುತ್ತು ಸಂಸ್ಥೆ ಮತ್ತಷ್ಟು ಸಿನಿಮಾಗಳನ್ನು ತರಲಿದೆ. ಗೀತಾ ಪಿಕ್ಚರ್ಸ್ ಪ್ರೊಡಕ್ಷನ್ಸ್ನಿಂದ ‘ಎ ಫಾರ್ ಆನಂದ್’ ಹಾಗೂ ‘ಶಾಖಾಹಾರಿ’ ಸಿನಿಮಾ ನಿರ್ದೇಶಕ ಸಂದೀಪ್ ಸುಂಕದ್ ಅವರ ಪ್ರೊಜೆಕ್ಟ್ ಸೇರಿದೆ’ ಎಂದರು.

‘ಫೈರ್ಫ್ಲೈ’ ಒಂದೊಳ್ಳೆಯ ಕೌಟುಂಬಿಕ ಚಿತ್ರ’ ಎಂದ ನಿವೇದಿತಾ ಶಿವರಾಜ್ಕುಮಾರ್, ‘ನನ್ನ ಮೊದಲ ನಿರ್ಮಾಣದ ಚಿತ್ರ ತಾತನ (ರಾಜ್ಕುಮಾರ್) ಜನ್ಮದಿನದಂದು ತೆರೆಗೆ ಬರುತ್ತಿರುವುದು ಖುಷಿಯ ವಿಚಾರ. ಒಳ್ಳೆಯ ಕಥೆಗಳಿದ್ದರೆ ನಾನು ಅದನ್ನು ಸಿನಿಮಾ ಅಥವಾ ವೆಬ್ ಸರಣಿ ಮೂಲಕ ಜನರೆದುರಿಗೆ ಇಡಲಿದ್ದೇನೆ’ ಎಂದರು.

‘ನಿವೇದಿತಾಳನ್ನು ಚಿಕ್ಕವಯಸ್ಸಿನಿಂದ ನೋಡಿದ್ದೇನೆ. ಆಕೆ ಇಂದು ನಿರ್ಮಾಪಕಿಯಾಗಿದ್ದಾಳೆ. ಎಲ್ಲರೂ ಕಮರ್ಷಿಯಲ್ ವಿಷಯದ ಹಿಂದೆ ಬಿದ್ದಿರುವಾಗ ಭಿನ್ನವಾದ ಒಂದು ವಿಷಯವನ್ನು ಆಯ್ಕೆ ಮಾಡಿಕೊಂಡು ಸಿನಿಮಾ ನಿರ್ಮಾಣ ಮಾಡುತ್ತಿರುವುದು ಹೆಮ್ಮೆಯ ವಿಷಯ. ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಕಥೆಗಳ ಅವಶ್ಯಕತೆ ಬಹಳಷ್ಟಿದೆ’ ಎಂದರು ನಟಿ ಸುಧಾರಾಣಿ.

ಗೀತಾ ಶಿವರಾಜ್ಕುಮಾರ್ ಮಾತನಾಡಿ, ‘ನಿರ್ಮಾಪಕಿಯಿಂದ ಹಿಡಿದು ಹೀರೊ, ಹೀರೊಯಿನ್, ತಂತ್ರಜ್ಞರವರೆಗೆ ಇದೊಂದು ಯುವ ತಂಡ. ಅವರಿಗೆ ಪ್ರೋತ್ಸಾಹ ಬಹಳ ಮುಖ್ಯ’ ಎಂದರು.

ನಮ್ಮಲ್ಲಿ ಪ್ರತಿಭೆಯುಳ್ಳ ಹೊಸಬರು ಬಹಳಷ್ಟು ಇದ್ದಾರೆ. ಆದರೆ ಅವರಿಗೆ ಅವಕಾಶ ನೀಡುವುದು ಇಂದಿನ ಕಾಲಘಟ್ಟಕ್ಕೆ ಮುಖ್ಯವಾಗಿದೆ. ಜೆನ್ಝಿಗೆ ಬಹಳ ಹತ್ತಿರವಾಗುವ ಸಿನಿಮಾ ಇದು.
–ವಂಶಿ ನಟ

ಕನ್ನಡ ಸಿನಿಮಾ ನೋಡಲು ಜನರು ಚಿತ್ರಮಂದಿರಗಳಿಗೆ ಬರುತ್ತಿಲ್ಲ ಎನ್ನುತ್ತಿದ್ದಾರೆ. ನಿರಂತರವಾಗಿ ಒಳ್ಳೆಯ ಸಿನಿಮಾಗಳನ್ನು ನೀಡುತ್ತಿದ್ದರೆ ಜನರು ಖಂಡಿತವಾಗಿಯೂ ಬರುತ್ತಾರೆ.
–ನಿವೇದಿತಾ ಶಿವರಾಜ್ಕುಮಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.