ಕೊರೊನಾ ಕಾಲದಲ್ಲಿ ಚಿತ್ರಪ್ರೇಮಿಗಳ ಮನಗೆದ್ದ ಸಿನಿಮಾಗಳೆಂದರೆ ಒಂದು ದಿಯಾ, ಇನ್ನೊಂದು ಲವ್ ಮಾಕ್‌ಟೇಲ್. ದಿಯಾ ಸಿನಿಮಾದಲ್ಲಿ ನಾಯಕ; ಲವ್ ಮಾಕ್‌ಟೇಲ್‌ನಲ್ಲಿ ನಾಯಕಿ ಸಾವಿನೊಂದಿಗೆ ಸಿನಿಮಾಗಳು ಮುಕ್ತಾಯ ಕಂಡವು. ಎರಡೂ ಚಿತ್ರಗಳನ್ನು ನೋಡಿ ನೊಂದುಕೊಂಡವರು, ‘ದಿಯಾ’ ಹಿರೋಯಿನ್‌ಗೂ ‘ಲವ್ ಮಾಕ್‌ಟೇಲ್’ ಹಿರೋಗೂ ಮದುವೆ ಮಾಡಿಸಿದ್ರಾಯ್ತು ಅನ್ನೋ ಕಾಮೆಂಟ್‌ಗಳನ್ನು ಕೊಟ್ಟು ಸಮಾಧಾನಪಟ್ಟುಕೊಂಡಿದ್ದರು. ಆದರೆ ಆ ಸಿನಿಮಾಗಳಲ್ಲಿ ‘ಸತ್ತವರು’ ಇತ್ತೀಚೆಗೆ ಮಂಗಳೂರು ಕಡಲ ತೀರದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದರು. ನೋಡಿದವರು ಮೂಗಿನ ಮೇಲೆ ಬೆರಳಿಟ್ಟುಕೊಂಡರು.

ದಿಯಾ ಹಿರೋ ಪೃಥ್ವಿ ಅಂಬರ್, ಲವ್ ಮಾಕ್‌ಟೇಲ್ ಹಿರೋಯಿನ್ ಮಿಲನಾ ನಾಗರಾಜ್ ಇಬ್ಬರೂ ಮಂಗಳೂರು ಕಡಲ ತೀರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು ‘ಫಾರ್ ರಿಜಿಸ್ಟ್ರೇಷನ್’ ಸಿನಿಮಾಕ್ಕಾಗಿ. ಈಗಾಗಲೇ ಮಂಗಳೂರು, ದಕ್ಷಿಣ ಕನ್ನಡದಲ್ಲಿ ಚಿತ್ರೀಕರಣ ಮುಗಿದಿದೆ.

ಮುಂದಿನ ತಿಂಗಳಲ್ಲಿ ಮದುವೆಗೆ ಸಿದ್ದವಾಗಿರುವ ಮಿಲನಾ, ‘ಫಾರ್ ರಿಜಿಸ್ಟ್ರೇಷನ್’ ಸಿನಿಮಾವನ್ನು ಒಪ್ಪಿಕೊಳ್ಳಲು ಮುಖ್ಯ ಕಾರಣ ಅದರ ಟೈಟಲ್ ಅಂತೆ. ಸಿನಿಮಾಕ್ಕಾಗಿ ಅವರು ತುಳು ಭಾಷೆಯನ್ನೂ ಕಲಿಯುತ್ತಿರೋದು ಇನ್ನೊಂದು ಪ್ಲಸ್ ಪಾಯಿಂಟ್.

‘ಫಾರ್ ರಿಜಿಸ್ಟ್ರೇಷನ್’ ಒಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಆಗಿದ್ದು, ಮಿಲನಾ ಮಂಗಳೂರು ಮೂಲದ ಬೋಲ್ಡ್ ಗರ್ಲ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ನವೀನ್ ದ್ವಾರಕನಾಥ್ ಚೊಚ್ಚಲ ನಿರ್ದೇಶನದ ‘ಫಾರ್ ರಿಜಿಸ್ಟ್ರೇಷನ್’ನಲ್ಲಿ ಮಿಲನಾ ಅವರ ತಾಯಿಯಾಗಿ ಸುಧಾರಾಣಿ ಅಭಿನಯಿಸುತ್ತಿದ್ದಾರೆ.

ನಿಶ್ಚಲ್ ಫಿಲ್ಮ್ಸ್ ಲಾಂಛನದಡಿಯಲ್ಲಿ ಎನ್. ನವೀನ್ ರಾವ್ ಅವರು ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ವಿವೇಕ್ ಅವರ ಛಾಯಾಗ್ರಹಣ ಮತ್ತು ಹರೀಶ್ ಆರ್. ಅವರ ಸಂಗೀತ ನಿರ್ದೇಶನ ಈ ಚಿತ್ರದ ಹಾಡುಗಳಿದೆ. ಪಕ್ಕಾ ಫ್ಯಾಮಿಲಿ ಎಂಟರ್‌ಟೈನ್ಮೆಂಟ್ ಕಥಾಹಂದರವಿರುವ ಚಿತ್ರ ‘ಫಾರ್ ರಿಜಿಸ್ಟ್ರೇಷನ್’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.