ಗುರುವಾರ , ಅಕ್ಟೋಬರ್ 22, 2020
22 °C

ಫಿಲ್ಮ್‌ಶಾಪ್‍ ಕಿರುಚಿತ್ರೋತ್ಸವಕ್ಕೆ ಮುಕ್ತ ಪ್ರವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನ್ನಡದ ಒಟಿಟಿ ‘ಫಿಲ್ಮ್‌ಶಾಪ್’ ಕನ್ನಡ ರಾಜ್ಯೋತ್ಸವ ಪ್ರಯುಕ್ತ ವಿಶೇಷ ಕಿರುಚಿತ್ರೋತ್ಸವ ಸ್ಪರ್ಧೆ ಆಯೋಜಿಸಿದೆ.

ಫಿಲ್ಮ್‌ಶಾಪ್ ನಿರ್ದೇಶಕ ಮತ್ತು‌ ನಿರ್ಮಾಪಕ ಬಿ.ಅರ್. ಕೇಶವ್ ಹುಟ್ಟು ಹಾಕಿರುವ ಒಟಿಟಿ ವೇದಿಕೆ. ಸಿನಿಮಾ ಮತ್ತು ಕಿರುತೆರೆಗೆ ಹೊಸದಾಗಿ ಪ್ರವೇಶಿಸುವ ಯುವ ನಿರ್ದೇಶಕರಿಗೆ ಒಂದು ವೇದಿಕೆ ಕಲ್ಪಿಸುವ ಸಲುವಾಗಿ ಈ ಕಿರುಚಿತ್ರೋತ್ಸವ ಸ್ಪರ್ಧೆ ಆಯೋಜಿಸಲಾಗಿದೆ. ಇದರಲ್ಲಿ ಭಾಗವಹಿಸಲು ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಕನ್ನಡ ನೆಲ, ಜಲ, ಕನ್ನಡ ಹೋರಾಟಗಾರರು, ಕನ್ನಡ ಸಾಹಿತ್ಯ, ಚಲನಚಿತ್ರ, ಕರ್ನಾಟಕದ ಹಿರಿಮೆ ಸಾರುವ ವಿಷಯದ ಕುರಿತು ಸಿದ್ಧಪಡಿಸಲಾದ ಕನಿಷ್ಠ 8 ನಿಮಿಷದಿಂದ ಗರಿಷ್ಠ 10 ನಿಮಿಷ ಅವಧಿಯ ಕಿರುಚಿತ್ರಗಳನ್ನು ಈ ಸ್ಪರ್ಧೆಗೆ ಪರಿಗಣಿಸಲಾಗುತ್ತದೆ.

ಕಿರುಚಿತ್ರವು ಸಂಪೂರ್ಣ ಎಚ್‍ಡಿ ಫಾರ್ಮ್ಯಾಟ್‍ನಲ್ಲಿರಬೇಕು. ಬೇರೆ ಯಾವುದೇ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿರಬಾರದು. ಕಿರುಚಿತ್ರಗಳನ್ನು ಸ್ಪರ್ಧೆಗೆ ಕಳುಹಿಸಲು ಅ. 31 ಕೊನೆ ದಿನ. ವಿಜೇತ ಕಿರುಚಿತ್ರಗಳ ಫಲಿತಾಂಶವನ್ನು ಜನಮತದಿಂದ ನಿರ್ಧರಿಸಲಾಗುತ್ತದೆ. ವಿಜೇತ ಕಿರುಚಿತ್ರಗಳಿಗೆ ಕ್ರಮವಾಗಿ ಪ್ರಥಮ ₹25,000, ದ್ವಿತೀಯ ₹15,000 ಹಾಗೂ ತೃತೀಯ ₹10,000 ನಗದು ಬಹುಮಾನ ನೀಡಲಾಗುತ್ತಿದೆ.

ನವೆಂಬರ್ 1ರಿಂದ 29ರವರೆಗೆ ಈ ಕಿರುಚಿತ್ರೋತ್ಸವ ನಡೆಯಲಿದ್ದು, ನ.30ರಂದು ಫಲಿತಾಂಶ ಪ್ರಕಟಿಸಲಾಗುತ್ತದೆ. ಘೋಷಿಸಲಾಗುವುದು. filmshoppott@gmail.comಗೆ ಕಿರುಚಿತ್ರ ಕಳುಹಿಸಬಹುದು ಎಂದು ಸಂಘಟಕರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು