ಸೋಮವಾರ, ಡಿಸೆಂಬರ್ 5, 2022
18 °C

ಮಕ್ಕಳಿಗೆ ‘ಗಂಧದ ಗುಡಿ‌’ ಟಿಕೆಟ್ ಉಚಿತವಾಗಿ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಕ್ಕಳ ದಿನಾಚರಣೆಯ ಪ್ರಯುಕ್ತ ಕರ್ನಾಟಕ ರಕ್ಷಣಾ ವೇದಿಕೆಯ (ಕರವೇ) ಬೊಮ್ಮನಹಳ್ಳಿ ಘಟಕವು ಶಾಲಾ ಶಿಕ್ಷಕರು ಹಾಗೂ ಮಕ್ಕಳಿಗೆ ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅಭಿನಯದ ‘ಗಂಧದ ಗುಡಿ’ ಚಿತ್ರದ ಟಿಕೆಟ್‌ಗಳನ್ನು ನಗರದಲ್ಲಿ ಗುರುವಾರ ಉಚಿತವಾಗಿ ವಿತರಿಸಿತು. 

ಟಿಕೆಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕರವೇ ರಾಜ್ಯ ಘಟಕದ ಅಧ್ಯಕ್ಷ ಪ್ರವೀಣ್ ಶೆಟ್ಟಿ, ‘ನಮ್ಮ ಕಾಡು, ನಾಡು–ನುಡಿ ಹಾಗೂ ಪ್ರಾಣಿ–ಪಕ್ಷಿಗಳ ಸಂರಕ್ಷಣೆ ಬಗೆಗಿನ ಸದಭಿರುಚಿಯ ಚಿತ್ರಗಳ ವೀಕ್ಷಣೆಯಿಂದ ಪರಿಸರ ಜಾಗೃತಿ ಹೆಚ್ಚಲಿದೆ. ‘ಗಂಧದ ಗುಡಿ’ ಚಿತ್ರವು ಇಡೀ ಮನುಕುಲಕ್ಕೆ ವಿಶ್ವಮಾನವ ಪರಿಕಲ್ಪನೆಯ ಸಂದೇಶವನ್ನು ಸಾರುತ್ತಿದೆ. ಇದು ಪ್ರತಿಯೊಬ್ಬರೂನೋಡಲೇಬೇಕಾದ ಉತ್ತಮ ಚಿತ್ರವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಬೆಂಗಳೂರು ನಗರ ಕರವೇ ಘಟಕದ ಕಾರ್ಯದರ್ಶಿ ಬೊಮ್ಮನಹಳ್ಳಿ ರಾಜೇಶ್, ‘ನಾವು ಓದುವಾಗ ಪರಿಸರ ಪ್ರಜ್ಞೆ ಹಾಗೂ ದೇಶ ಪ್ರೇಮ ಸಾರುವ ಚಲನಚಿತ್ರ ಗಳನ್ನು ನಮ್ಮ ಶಾಲೆಯ ಶಿಕ್ಷಕರು ತೋರಿಸುತ್ತಿದ್ದರು. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ‌ ಸರ್ಕಾರಿ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಉಚಿತವಾಗಿ ಚಿತ್ರ ವೀಕ್ಷಿಸಲು ಅವಕಾಶ ಮಾಡಿಕೊಡಲಾಯಿತು. ಟಿಕೆಟ್ ವೆಚ್ಚವನ್ನು ನಮ್ಮ ಕರವೇ ಭರಿಸಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು