ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುನಿರೀಕ್ಷಿತ Furiosa: A Mad Max Saga ಮೇ 23ಕ್ಕೆ ಭಾರತದಲ್ಲಿ ಬಿಡುಗಡೆ

ಹಾಲಿವುಡ್ ಮಾಸ್ಟರ್ ಮೈಂಡ್, ‘ಮ್ಯಾಡ್ ಮ್ಯಾಕ್ಸ್’ ಸರಣಿ ಖ್ಯಾತಿಯ ನಿರ್ದೇಶಕ ಜಾರ್ಜ್ ಮಿಲ್ಲರ್ ಅವರ ಬಹುನಿರೀಕ್ಷಿತ ಹೊಸ ಸಿನಿಮಾ: ಇದು ಫ್ಯೂರಿ ರೋಡ್‌ನ ಪ್ರಿಕ್ವೆಲ್
Published 18 ಮೇ 2024, 7:29 IST
Last Updated 18 ಮೇ 2024, 7:29 IST
ಅಕ್ಷರ ಗಾತ್ರ

ಬೆಂಗಳೂರು: ಹಾಲಿವುಡ್ ಮಾಸ್ಟರ್ ಮೈಂಡ್ ಹಾಗೂ ‘ಮ್ಯಾಡ್ ಮ್ಯಾಕ್ಸ್’ ಸರಣಿ ಖ್ಯಾತಿಯ ನಿರ್ದೇಶಕ ಜಾರ್ಜ್ ಮಿಲ್ಲರ್ ಅವರ ಬಹುನಿರೀಕ್ಷಿತ ಹೊಸ ಸಿನಿಮಾ ‘ಫ್ಯುರಿಯೋಸಾ: ದಿ ಮ್ಯಾಡ್ ಮ್ಯಾಕ್ಸ್ ಸಾಗಾ’ (Furiosa: A Mad Max Saga) ಭಾರತದಲ್ಲಿ ಇದೇ ಮೇ 23ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ವಾರ್ನರ್ ಬ್ರದರ್ಸ್ ಪ್ರೊಡಕ್ಷನ್‌ನಲ್ಲಿ (Warner Bros. Pictures) ನಿರ್ಮಿಸಲಾಗಿರುವ ಈ ಚಿತ್ರ, 2015ರಲ್ಲಿ ಬಿಡುಗಡೆಯಾಗಿ ಸೂಪರ್‌ಹಿಟ್ ಆಗಿದ್ದ ‘ಮ್ಯಾಡ್ ಮ್ಯಾಕ್ಸ್: ಫ್ಯೂರಿ ರೋಡ್‌’ನ ಪ್ರಿಕ್ವೆಲ್ ಆಗಿದೆ.

ಚಿತ್ರದಲ್ಲಿ ಹಾಲಿವುಡ್ ನಟ ಕ್ರಿಸ್ ಹೆಮ್ಸ್‌ವರ್ಥ್ ಹಾಗೂ ನಟಿ ಆನ್ಯಾ ಟೇಲರ್ ಜಾಯ್ ಪ್ರಮುಖ ಪಾತ್ರದಲ್ಲಿದ್ದಾರೆ.

ಸಾಹಸ ದೃಶ್ಯ ಹಾಗೂ ಮೇಕಿಂಗ್‌ನಿಂದ ಸಾಕಷ್ಟು ಗಮನ ಸೆಳೆದಿರುವ ‘ಫ್ಯುರಿಯೋಸಾ’ ಮೇ 15 ರಂದು ಕಾನ್ ಚಿತ್ರೋತ್ಸವದಲ್ಲಿ ಫ್ರಿಮೀಯರ್ ಪ್ರದರ್ಶನ ಕಂಡು ಮೆಚ್ಚುಗೆ ಗಳಿಸಿದೆ.

ಫ್ಯುರಿಯೋಸಾದ ಮೂರು ಅಧಿಕೃತ ಟ್ರೇಲರ್‌ಗಳು ಈಗಾಗಲೇ ಯೂಟ್ಯೂಬ್ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು ಹಾಲಿವುಡ್‌ನ ಮತ್ತೊಂದು ಹೊಸ ಭರ್ಜರಿ ಆಕ್ಷನ್ ಸಿನಿಮಾವನ್ನು ಮನತುಂಬಿಕೊಳ್ಳಲು ಭಾರತೀಯ ಪ್ರೇಕ್ಷಕರೂ ಕಾತರರಾಗಿದ್ದಾರೆ.

ಫ್ಯುರಿಯೋಸಾ ಚಿತ್ರವು ಮ್ಯಾಡ್ ಮ್ಯಾಕ್ಸ್ ಸರಣಿಯ ಐದನೇ ಚಿತ್ರವಾಗಿದೆ. ಐದೂ ಚಿತ್ರಗಳನ್ನು ಮಿಲ್ಲರ್ ಅವರೇ ನಿರ್ದೇಶಿಸಿದ್ದಾರೆ. ಫ್ಯೂರಿ ರೋಡ್‌ಗೆ 2016ರಲ್ಲಿ 6 ಆಸ್ಕರ್ ಪ್ರಶಸ್ತಿಗಳು ಲಭಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT