ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾರುಕ್‌ ಖಾನ್ ಹೃದಯಗಳನ್ನು ಗೆಲ್ಲುವ ರಾಜ: ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌

Published 21 ಸೆಪ್ಟೆಂಬರ್ 2023, 7:53 IST
Last Updated 21 ಸೆಪ್ಟೆಂಬರ್ 2023, 7:53 IST
ಅಕ್ಷರ ಗಾತ್ರ

ಬೆಂಗಳೂರು: ಬಾಲಿವುಡ್‌ ನಟ ಶಾರುಕ್‌ ಖಾನ್‌ ಅವರನ್ನು ಭಾರತ ತಂಡದ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ ಅವರು ಇತ್ತೀಚಿಗೆ ಭೇಟಿಯಾಗಿದ್ದಾರೆ.

ಇಬ್ಬರ ಭೇಟಿಯ ಫೋಟೊವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಗೌತಮ್‌ ಗಂಭೀರ್‌ ಹಂಚಿಕೊಂಡಿದ್ದಾರೆ.

‘ಶಾರುಕ್‌ ಖಾನ್‌ ಬಾಲಿವುಡ್‌ ಸಿನಿಮಾರಂಗದ ಸೂಪರ್‌ ಸ್ಟಾರ್‌ ಮಾತ್ರವೇ ಅಲ್ಲ, ಹೃದಯಗಳನ್ನು ಗೆಲ್ಲುವ ರಾಜ. ಪ್ರತಿ ಬಾರಿ ಶಾರುಕ್‌ ಅವರನ್ನು ಭೇಟಿ ಮಾಡಿದಾಗಲೂ ಅವರಿಂದ ಪ್ರೀತಿ ಮತ್ತು ಗೌರವ ದೊರೆಯುತ್ತದೆ. ನಿಮ್ಮ ಸರಳತೆಯ ನಡವಳಿಕೆಯಿಂದ ಕಲಿಯುವುದು ಬಹಳಷ್ಟಿದೆ ‘ ಎಂದು ಗಂಭೀರ್‌ ಎಕ್ಸ್‌ನಲ್ಲಿ( ಟ್ವಿಟರ್‌) ಬರೆದುಕೊಂಡಿದ್ದಾರೆ.

IPL ಕ್ರಿಕೆಟ್‌ನಲ್ಲಿ ಶಾರುಕ್‌ ಖಾನ್‌ ಮಾಲೀಕತ್ವದ ಕೋಲ್ಕತ್ತ ನೈಟ್‌ ರೈಡರ್ಸ್‌ (ಕೆಕೆಆರ್‌) ತಂಡದ ನಾಯಕರಾಗಿ ಗೌತಮ್‌ ಗಂಭೀರ್‌ ಆಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT