ಸೋಮವಾರ, ಜನವರಿ 17, 2022
27 °C

ಜಿಮ್‌ನಲ್ಲಿ ಜೆನಿಲಿಯಾ ಜೊತೆ ಹುಡುಗಾಟ ಮಾಡಲಾಗದು, ಯಾಕೆ ಗೊತ್ತೆ? ವಿಡಿಯೊ ನೋಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Instagram/@geneliad

ನಟಿ ಜೆನಿಲಿಯಾ ಡಿಸೋಜಾ ಅವರ ಜೊತೆ ಜಿಮ್‌ನಲ್ಲಿ ಯಾರಾದರೂ ಹುಡುಗಾಟ ನಡೆಸಿದರೆ ಏನಾಗುತ್ತದೆ ಗೊತ್ತೆ? ವಿಡಿಯೊ ಮೂಲಕ ಜೆನಿಲಿಯಾ ಎಚ್ಚರಿಕೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಜೆನಿಲಿಯಾ ಹಾಸ್ಯದ ರೀಲ್‌ ವಿಡಿಯೊಗಳನ್ನು ಹಂಚಿಕೊಳ್ಳುತ್ತ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇದೀಗ ತಮಿಳಿನ 'ತುಪಾಕಿ' ಸಿನಿಮಾದ 'ಐ ಆ್ಯಮ್‌ ವೈಟಿಂಗ್‌' ಎಂದು ಗಹಗಹಿಸಿ ನಗುತ್ತ ಹೇಳುವ ಮಾಸ್‌ ಡೈಲಾಗ್‌ಗೆ ಜೆನಿಲಿಯಾ ಲಿಪ್‌ಸಿಂಕ್‌ ಮಾಡಿ ನಟಿಸಿದ್ದಾರೆ.

ಅಭಿಮಾನಿಗಳನ್ನು ಆಕರ್ಷಿಸಿರುವ ವಿಡಿಯೊದಲ್ಲಿ ಜೆನಿಲಿಯಾ ಅವರ ಜಿಮ್‌ನಲ್ಲಿ ತರಬೇತುದಾರ ರೋಹಿತ್‌ ಶರ್ಮಾ ಒಂದು ಕೈಯಲ್ಲಿ ಡಂಬಲ್ಸ್‌ ಹಿಡಿದು ಮೊಬೈಲ್‌ನಲ್ಲಿ ಸೆಲ್ಫಿ ವಿಡಿಯೊ ಮಾಡುತ್ತ ಸಮಯ ಕಳೆಯುತ್ತಿರುತ್ತಾರೆ. ಆಗ ಗಹಗಹಿಸುವ ನಗುವೊಂದು ಹಿನ್ನೆಲೆಯಲ್ಲಿ ಕೇಳಿಬರುತ್ತದೆ. ರೋಹಿತ್‌ ಅವರು ಏನಾಗುತ್ತಿದೆ ಎಂದು ಗಾಬರಿಯಿಂದ ನೋಡುತ್ತಿರುವಾಗ ಜೆನಿಲಿಯಾ ಖಡಕ್‌ ಪೋಸ್‌ನಲ್ಲಿ 'ಐ ಆ್ಯಮ್‌ ವೈಟಿಂಗ್' ಎನ್ನುತ್ತಾರೆ. ಹಿಂದಕ್ಕೆ ಸರಿಯುವಂತೆ ಕೈಯಲ್ಲೇ ಸೂಚಿಸುತ್ತಾರೆ.

ಜೆನಿಲಿಯಾ ಅವರ ನಟನೆಯ ಪುಟ್ಟ ರೀಲ್ಸ್‌ಗೆ ಅಭಿಮಾನಿಗಳು ಖುಷಿಯಾಗಿ ಲೈಕ್‌-ಕಾಮೆಂಟ್‌ಗಳ ಸಾಲನ್ನೇ ಹರಿಸಿದ್ದಾರೆ. ಈಗಾಗಲೇ 3 ಲಕ್ಷಕ್ಕೂ ಹೆಚ್ಚು ಲೈಕ್ಸ್‌ಗಳು ಸಿಕ್ಕಿವೆ. 'ಯಾವತ್ತಾದರೂ ಇಂತಹ ಸನ್ನಿವೇಶ ನಡೆದಿದೆಯಾ?' ಎಂದು ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಕೇಳಿರುವ ಜೆನಿಲಿಯಾ ಹ್ಹ ಹ್ಹ ಹ್ಹ ಹ್ಹ ಎಂದು ನಗುತ್ತಿದ್ದಾರೆ.

ಜೆನಿಲಿಯಾರ ರೀಲ್ಸ್‌ ವಿಡಿಯೊವನ್ನು ರೋಹಿತ್‌ ಅವರೂ ಹಂಚಿಕೊಂಡಿದ್ದು, 'ಜೆನಿಲಿಯಾರನ್ನು ಕಾಯಿಸುವುದು ಒಳ್ಳೆಯ ಯೋಚನೆಯಲ್ಲ' ಎಂದು ಪೋಸ್ಟ್‌ ಮಾಡಿದ್ದಾರೆ. ವಿಜಯ್‌ ಮತ್ತು ಕಾಜಲ್‌ ಅಗರ್‌ವಾಲ್‌ ನಟನೆಯ ಚಿತ್ರ ತುಪಾಕಿ 2012ರಲ್ಲಿ ತೆರೆ ಕಂಡಿತು. ಇದಕ್ಕೆ ಎ.ಆರ್.ಮುರುಗದಾಸ್‌ ಅವರ ನಿರ್ದೇಶನವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು