ಮಂಗಳವಾರ, ಮೇ 24, 2022
27 °C

ತಾರೆಯರ ಚಿನ್ನದ ಮಾತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿನ್ನ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಬಂಗಾರದ ಮೇಲೆ ಮಹಿಳೆಯರಿಗೆ ವ್ಯಾಮೋಹ ಜಾಸ್ತಿ. ಇದಕ್ಕೆ  ಕನ್ನಡದ ನಟ, ನಟಿಯರೂ ಹೊರತಾಗಿಲ್ಲ. ಅಕ್ಷಯ ತೃತೀಯವನ್ನು ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡದೇ ಇದ್ರೂ, ಚಿನ್ನ ಖರೀದಿ ಮಾಡ್ತಾರೆ. ಸ್ಯಾಂಡಲ್‌ವುಡ್‌ ತಾರೆಯರು ಈ ಬಾರಿ ಏನು ಖರೀದಿ ಮಾಡಬೇಕು ಎಂದು ಪ್ಲ್ಯಾನ್‌ ಮಾಡಿದ್ದಾರೆ ಬನ್ನಿ ನೋಡೋಣ...

‘ನಂಬಿಕೆಯಲ್ಲ, ಉಳಿತಾಯ’
ಅಕ್ಷಯ ತೃತೀಯದ ದಿನ ಕೊನೇಪಕ್ಷ ಮೂಗುಬೊಟ್ಟಾದರೂ ಖರೀದಿ ಮಾಡುತ್ತೇನೆ. ಆ ದಿನ ಕೊಂಡರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಗಿಂತ ಉಳಿತಾಯ ಮಾಡಬಹುದು ಎಂಬ ನಂಬಿಕೆ ಇದೆ. ಆಭರಣಕ್ಕಿಂತ ಹೆಚ್ಚಾಗಿ ಚಿನ್ನದ ನಾಣ್ಯ ಕೊಂಡುಕೊಂಡು ಇಟ್ಟುಕೊಳ್ಳುವ ರೂಢಿ ಇದೆ. ಐದು ವರ್ಷದಿಂದ ಇದನ್ನು ತಪ್ಪದೇ ನಡೆಸಿಕೊಂಡು ಬಂದಿದ್ದೇನೆ. 
-ಅನುಪಮಾ, ನಿರೂಪಕಿ, ನಟಿ

*
‘ಚಿನ್ನ ಮಾತ್ರ ಕೊಳ್ಳಬೇಕಿಲ್ಲ’
ಅಮ್ಮ ಪ್ರತಿ ವರ್ಷ ಏನಾದರೂ ಚಿನ್ನ ಕೊಳ್ಳುತ್ತಾರೆ. ಆದರೆ ನನಗೆ ಈ ದಿನ ಯಾವುದಾದರೂ ಕೆಲಸ ಆರಂಭಿಸಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಈ ದಿನ ಆರಂಭಿಸಿದ ಕೆಲಸ ಕೈಹಿಡಿಯುತ್ತದೆ. ಒಳ್ಳೆಯ ಕೆಲಸಗಳನ್ನು ಮಾಡಲು ನಾನು ಈ ದಿನ ಆಯ್ಕೆ ಮಾಡಿಕೊಳ್ಳುತ್ತೇನೆ.
- ರಿಷಿ, ನಟ

*
ಚಿನ್ನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ
ಪ್ರತಿ ವರ್ಷ ಒಂದು ಗ್ರಾಂ ಆದರೂ ಚಿನ್ನ ಕೊಳ್ಳುತ್ತೇನೆ. ಈ ದಿನ ಕೊಳ್ಳೋದು ನಂಬಿಕೆಯಿಂದ ಮಾತ್ರ ಅಲ್ಲ. ಏನಾದ್ರೂ ನೆಪ ಬೇಕಲ್ವಾ?. ಚಿನ್ನ ಯಾವ ದಿನ ತೊಗೊಂಡ್ರೂ ಒಳ್ಳೇದೆ. ಹೆಣ್ಣುಮಕ್ಕಳಿಗೆ ಕಷ್ಟಕ್ಕೆ ಆಗುವಂತದ್ದು. ವಜ್ರದ ಆಭರಣಗಳು ನನಗೆ ತುಂಬಾ ಇಷ್ಟ. 
-ಹರ್ಷಿಕಾ ಪೂಣಚ್ಚ, ನಟಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು