ಮಂಗಳವಾರ, ಮಾರ್ಚ್ 28, 2023
33 °C
‘ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್’ ಸಿನಿಮಾದ ಟ್ರೇಲರ್‌ ಬಿಡುಗಡೆ

ಕಾರ್ಗಿಲ್‌ ಹುಡುಗಿಯ ಬೆರಗಿನ ಸಾಹಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಂಜನ್ ಸಕ್ಸೇನಾ ಎಂದಾಕ್ಷಣ ಕಾರ್ಗಿಲ್ ಯುದ್ಧ ನೆನಪಾಗದೇ ಇರದು. ಅದು 1999ರ ಕಾರ್ಗಿಲ್‌ ಯುದ್ಧದ ಸಂದರ್ಭ. ಯುದ್ಧ ನಡೆಯುತ್ತಿದ್ದ ಸ್ಥಳಕ್ಕೆ ಹೋಗುವುದೇ ದುಸ್ತರವಾಗಿದ್ದ ಕ್ಷಣಗಳವು. ಯಾವುದಕ್ಕೂ ಎದೆಗುಂದದೇ ಆ ಸ್ಥಳಕ್ಕೆ ಹೆಲಿಕಾಪ್ಟರ್‌ ಒಯ್ದಿದ್ದು ಗುಂಜನ್‌ ಅವರ ಹೆಗ್ಗಳಿಕೆ. ಆಕೆ ಯುದ್ಧದ ಸ್ಥಳಕ್ಕೆ ಹೆಲಿಕಾಪ್ಟರ್ ಒಯ್ದ ಪ್ರಥಮ ಭಾರತೀಯ ಮಹಿಳೆಯೂ ಹೌದು. ಅವರ ಜೀವನಗಾಥೆಯು ಹಿಂದಿಯಲ್ಲಿ ‘ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್’ ಹೆಸರಿನಲ್ಲಿ ಸಿನಿಮಾವಾಗಿ ತೆರೆಗೆ ಬರುತ್ತಿದೆ.

‌ಜೀ ಸ್ಟುಡಿಯೋಸ್ ಹಾಗೂ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್‌ ಸಂಸ್ಥೆಯು ಜಂಟಿಯಾಗಿ ಇದಕ್ಕೆ ಬಂಡವಾಳ ಹೂಡಿವೆ. ಈ ಮೊದಲು ಚಿತ್ರಮಂದಿರದಲ್ಲಿ ಇದರ ಬಿಡುಗಡೆಗೆ ತೀರ್ಮಾನಿಸಲಾಗಿತ್ತು. ಆದರೆ, ಕೋವಿಡ್‌–19 ಪರಿಣಾಮ ಒಟಿಟಿಯಲ್ಲಿ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿತು. ಆಗಸ್ಟ್‌ 12ರಂದು ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾದ ಬಿಡುಗಡೆಗೆ ದಿನಾಂಕವೂ ನಿಗದಿಯಾಗಿದೆ. ಶರಣ್ ಶರ್ಮ ಇದಕ್ಕೆ ಆ್ಯಕ್ಷನ್ ಕಟ್‌ ಹೇಳಿದ್ದಾರೆ.‌

ಗುಂಜನ್ ಸಕ್ಸೇನಾ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಬಾಲಿವುಡ್‌ ನಟಿ ಜಾಹ್ನವಿ ಕಪೂರ್. ಈ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಗುಂಜನ್‌ ಸಕ್ಸೇನಾ ಅವರ ಸಾಹಸಗಳಿಗೆ ಜಾಹ್ನವಿ ಕಪೂರ್‌ ಜೀವ ತುಂಬಿದ್ದಾರೆ. 2.41 ನಿಮಿಷದ ಟ್ರೇಲರ್‌ ಸಿನಿಮಾದ ಸ್ಕ್ರಿಪ್ಟ್‌ ಮೇಲೆ ಕುತೂಹಲ ಹೆಚ್ಚಿಸಿದೆ. ಗುಂಜನ್ ಸಕ್ಸೇನಾ ಅವರ ಬಾಲ್ಯದ ಬದುಕು, ಪೈಲಟ್‌ ಟ್ರೇನಿಂಗ್‌ ವೇಳೆ ಆಕೆ ಅನುಭವಿಸುವ ಸವಾಲು, ಕಾರ್ಗಿಲ್‌ ಯುದ್ಧದ ವೇಳೆ ಆಕೆ ತೋರಿದ ಸಾಹಸ ಕುರಿತ ತುಣುಕುಗಳು ಟ್ರೇಲರ್‌ನಲ್ಲಿವೆ.

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು