‘ರಾಘವೇಂದ್ರ ಸ್ಟೋರ್ಸ್ಟ್’ ಮಾಲೀಕರಿಗೆ ರಾಯರ ಕೃಪೆ

ನವರಸ ನಾಯಕ ಜಗ್ಗೇಶ್ ಅವರಿಗೆ ಮತ್ತೆ ರಾಯರ ಕೃಪೆ ಸಿಕ್ಕಿದೆಯಂತೆ. ‘ರಾಘವೇಂದ್ರ ಸ್ಟೋರ್ಸ್’ ಚಿತ್ರೀಕರಣ ಮುಗಿದ ಕೂಡಲೇ ಬಿಎಂಡಬ್ಲ್ಯೂ– ಎಕ್ಸ್5 ಬುಕ್ ಮಾಡಿದರಂತೆ ಜಗ್ಗೇಶ್.
ಆದರೆ, ಕಾರಿನೊಳಗೆ ಇರಿಸಲು ರಾಘವೇಂದ್ರ ರಾಯರ ಪಾದುಕೆ ತರಿಸಿದರಂತೆ. ಅದ್ಯಾಕೋ ತೃಪ್ತಿ ಎನಿಸಲಿಲ್ಲ. ಆದರೆ, ಕಾರಿನೊಳಗೆ ರಾಯರು ಇರಬೇಕು ಎಂಬುದು ಜಗ್ಗೇಶ್ ಸಂಕಲ್ಪ. ಕಾರು ಡೆಲಿವರಿ ಸಂದರ್ಭವಾದರೂ ರಾಯರ ಕೃಪೆಯಾಗಲಿ ಎಂದು ಸಂಕಲ್ಪಿಸಿದರಂತೆ ಅವರು. ಆ ದಿನ ಅವರ ಗೆಳೆಯ ಡಾ.ಸುನಿಲ್ ಅವರು ಮನೆಗೆ ಬಂದು ಬೆಳ್ಳಿಯಿಂದ ಕೈ ಕೆತ್ತನೆ ಮಾಡಲಾದ ರಾಘವೇಂದ್ರ ರಾಯರ ಪ್ರತಿಮೆಯನ್ನು ಜಗ್ಗೇಶ್ ಅವರಿಗೆ ಕೊಟ್ಟರಂತೆ. ಈಗ ಜಗ್ಗೇಶ್ ಫುಲ್ ಖುಷ್.
ರಾಯರು ಎಂಥ ಕರುಣಾಮಯಿ ತಮ್ಮ ಭಕ್ತರು ಮನಸಲ್ಲಿ ಅಂದುಕೊಂಡದ್ದು ನೆರವೇರಿಸಿಬಿಡುತ್ತಾರೆ...ನಾನು
ಧನ್ಯ ಅನ್ನಿಸಿತು ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ ಜಗ್ಗೇಶ್.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.