ಮುಂಬೈ: ಹಿರಿಯ ನಟ ಅನುಪಮ್ ಶ್ಯಾಮ್ ನಿಧನಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಅಮೀರ್ ಖಾನ್ ವಿರುದ್ಧ ಗಂಭೀರವಾದ ಆರೋಪಗಳ ಕುರಿತು ವರದಿಯಾಗಿವೆ.

ಅಮೀರ್ ಕೊಟ್ಟ ಮಾತು ಉಳಿಸಿಕೊಂಡಿದ್ದಿದ್ದರೆ ಅನುಪಮ್ ಶ್ಯಾಮ್ ಉಳಿಯುತ್ತಿದ್ದರು ಎಂದು ಸೋದರ ಅನುರಾಗ್ ಆರೋಪಿಸಿರುವುದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ಹಿರಿಯ ನಟ ಅನುಪಮ್ ಶ್ಯಾಮ್ ನಿಧನ

ಬಹು ಅಂಗಾಂಗಗಳ ವೈಫಲ್ಯಕ್ಕೆ ತುತ್ತಾಗಿದ್ದ ಅನುಪಮ್ ಶ್ಯಾಮ್, ಆಗಸ್ಟ್ 9ರಂದು ನಿಧನರಾದರು. ಅವರಿಗೆ 63 ವರ್ಷ ವಯಸ್ಸಾಗಿತ್ತು.

'ಬಿಗ್ ಬ್ರ್ಯಾಂಡ್‌ಗಳಾಗಿರುವ ಈ ದೊಡ್ಡ ನಟರು ಸಹ ನಟರಿಗೆ ಯಾಕೆ ನೆರವು ಮಾಡುವುದಿಲ್ಲ? ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಿರುವ ಅನೇಕ ಮಂದಿ ಸಂಕಷ್ಟದಲ್ಲಿದ್ದಾರೆ. ಆದರೆ ದೊಡ್ಡ ವ್ಯಕ್ತಿಗಳು ಗಟ್ಟಿಯಾಗಿ ಕುಳಿತಿದ್ದಾರೆ. ಅಮೀರ್ ಖಾನ್ ಕೊಟ್ಟ ಮಾತನ್ನು ಪಾಲಿಸಿದ್ದರೆ ತಮ್ಮ ಸೋದರ ಈಗಲೂ ಜೀವಂತವಾಗಿ ಉಳಿಯುತ್ತಿದ್ದರು' ಎಂದು ಅನುರಾಗ್ ಹೇಳಿಕೆಯನ್ನು 'ಆಜ್ ತಕ್' ವರದಿ ಮಾಡಿವೆ.

'ನಮ್ಮ ಕುಟುಂಬವು ಅನೇಕ ಸಂಕಷ್ಟಗಳನ್ನು ಎದುರಿಸಿದೆ. ಅಮ್ಮ ಕಳೆದ ತಿಂಗಳು ತೀರಿಕೊಂಡರು. ಅನುಪಮ್ ತಾಯಿ ತಂಗಿದ್ದ ಪ್ರತಾಪಗರ್‌ಗೆ ಹೋಗಲು ಬಯಸಿದ್ದರು. ಆದರೆ ಅಲ್ಲಿ ಡಯಾಲಿಸಿಸ್ ಕೇಂದ್ರ ಇಲ್ಲದಿದ್ದರಿಂದ ಆರೋಗ್ಯ ಹದೆಗೆಡುವ ಅಪಾಯವಿತ್ತು. ಈ ಸಂಬಂಧ ಅಮೀರ್ ಖಾನ್ ಅವರನ್ನು ಭೇಟಿಯಾಗಿದ್ದರು. ಮಾತು ಕೊಟ್ಟಿದ್ದ ಅಮೀರ್ ಬಳಿಕ ಕರೆಯನ್ನು ಸ್ವೀಕರಿಸುತ್ತಿರಲಿಲ್ಲ' ಎಂದು ಅನುರಾಗ್ ಹೇಳಿರುವುದಾಗಿ ವರದಿಯಾಗಿವೆ.

ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ಅನುಪಮ್ ಶ್ಯಾಮ್ ಅವರ ಚಿಕಿತ್ಸೆಗಾಗಿ ಚಿತ್ರರಂಗದ ನೆರವನ್ನು ಕೋರಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.